NEWS

ಎಲ್ಲರ ಸಹಕಾರದಲ್ಲಿ ಕ.ಸಾ.ಪ. ಕಾರ್ಯಕ್ರಮ : ಕೆ.ಟಿ. ಹನುಮಂತು

ಪಾಲನೆ ನ್ಯೂಸ್

ಮಂಡ್ಯ:‌ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಎಲ್ಲರ ಸಹಕಾರ ಪಡೆದು ಜನ ಮಾನಸದಲ್ಲಿ ಉಳಿಯುವಂತೆ ಹಮ್ಮಿಕೊಳ್ಳಲಾಗುವುದಾಗಿ ನಂಜಮ್ಮ ಮೋಟೆಗೌಡ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ಟಿ. ಹನುಮಂತು ತಿಳಿಸಿದರು.

ಮಂಡ್ಯದ ಕಾರ್ಮೆಲ್ ಕಾನ್ವೆಂಟ್ ಹೊರಾಂಗಣದಲ್ಲಿ, ಪ್ರೌಢಶಾಲೆಯ ಪರೀಕ್ಷಾ ಪತ್ರಿಕೆಗಳನ್ನು ಮೌಲ್ಯಕ್ಕಾಗಿ ಆಗಮಿಸುತ್ತಿದ್ದ ಕನ್ನಡ ಅದ್ಯಾಪಕರನ್ನು ಭೇಟಿ ಮಾಡಿ, ಮುಂದೆ ಬರಲಿರುವ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವುದಾಗಿ ಇದಕ್ಕೆ ತಮ್ಮಗಳ ಸಹಕಾರ ನೀಡಲು ಬಿತ್ತಿ ಪತ್ರವನ್ನು ಹಂಚುವ ಮೂಲಕ ಮನವಿ ಮಾಡಿದರು.

ಮುಂದುವರಿದು ಮಾತನಾಡಿ,1915ರ ಮೇ 5ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಮುಂದೆ ನಡೆಯಲಿರುವ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಾದಿಗೆ ಸ್ಪರ್ಧಿಸುವಂತೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಸಾಹಿತಿಗಳು, ಕನ್ನಡ ಪರ ಒಲವಿರುವ ಗೆಳೆಯರು, ಹಿತೈಷಿ ಹಾಗೂ ಬಹುತೇಕರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ನನಗೂ ಒಲವಿರುವುದರಿಂದ ತಮ್ಮೆಲ್ಲರ ಸಹಕಾರ ಕೋರುತ್ತಿದ್ದೇನೆ ಎಂದು ತಿಳಿಸಿದರು.


ಹಿರಿಯರ ಹಾಗೂ ತಮ್ಮೆಲರ ಮಾರ್ಗದರ್ಶನದಲ್ಲಿ ಸಾಹಿತ್ಯ ಪರಿಷತ್ತಿಗೆ ಹೊಸ ಕಾಯಕಲ್ಪ ಹಾಗೂ ಹೊಸ ಆಯಾಮ ನೀಡುವುದರ ಜೊತೆಗೆ ಸಾಮರಸ್ಯದ ತಳಹದಿಯ ಮೇಲೆ ಕನ್ನಡ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳಬೇಕೆಂಬ ಹಂಬಲವಿದೆ. ಹಾಗಾಗಿ ತಾವೆಲ್ಲರೂ ನನಗೆ ಬೆಂಬಲ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಪದಾಧಿಕಾರಿಗಳಾದ ಜಿ. ಧನಂಜಯ ದರಸಗುಪ್ಪೆ, ಬಸವೇಗೌಡ ಖರಡ್ಯ,ಕಸಾಪ ಆಜೀವ ಸದಸ್ಯರು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬೂದನೂರು ಉತ್ಸವ 2026 ಸಾಂಸ್ಕೃತಿಕ ವೈಭವ:  ಚಲುವರಾಯಸ್ವಾಮಿ

ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪು ಇಲ್ಲ: ಡಿಕೆಶಿ ಸ್ಪಷ್ಟನೆ

ಇಂದು ಮಧ್ಯಾಹ್ನ 3 ಗಂಟೆಗೆ ದ್ವಿತೀಯ ಪಿಯು ಫಲಿತಾಂಶ

Leave a Comment