NEWS

ಹೈದರಾಬಾದಿನಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಸಮ್ಮೇಳನ

ಪಾಲನೆ ನ್ಯೂಸ್

ಮಂಡ್ಯ: ” ಸಾಮ್ರಾಜ್ಯಶಾಹಿ ವಿರೋಧಿಸಿ, ಮನುವಾದವನ್ನ ಧಿಕ್ಕರಿಸಿ, ಮಹಿಳಾ ಹಕ್ಕುಗಳನ್ನ ಎತ್ತಿ ಹಿಡಿಯೋಣ ” ಎಂಬ ಘೋಷಣೆಯೊಂದಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ (AIDWA) 14ನೇ ರಾಷ್ಟ್ರಸಮ್ಮೇಳನವು ತೆಲಂಗಾಣ ರಾಜ್ಯದ ಹೈದರಾಬಾದಿನಲ್ಲಿ ಜ. 25ರಿಂದ 28ರವರೆಗೆ ಜರುಗಲಿದೆ.

ದೇಶದ ಸ್ವಾತಂತ್ರ ಚಳುವಳಿಯಲ್ಲಿ ಬ್ರಿಟೀಷರ ವಿರುದ್ಧ ಧೀರೋದ್ದಾತ್ತ ಹೋರಾಟ ನಡೆಸಿದ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್, ಮಲ್ಲು ಸ್ವರಾಜ್ಯ, ಕನಕ ಮುಖರ್ಜಿ, ಸುಶೀಲಾ ಗೋಪಾಲನ್, ಪಾಪ ಉಮಾನಾಥ್ ಮುಂತಾದ ಮಹಾನ್ ಚೇತನಗಳು ಸ್ಥಾಪಿಸಿದ ಮಹಿಳಾ ಸಂಘಟನೆಯ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ (AIDWA) ಭಾರತದ 26 ರಾಜ್ಯಗಳಲ್ಲಿ ಒಂದು ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ದೇಶದ ಪ್ರಥಮ ಮಹಿಳಾ ಸಂಘಟನೆಯಾಗಿ ಹೊರಹೊಮ್ಮಿದೆ. ಪ್ರಜ ಪ್ರಭರಿತ್ವ, ಸಮಾನತೆ, ಮಹಿಳಾ ವಿಮೋಚನೆ. ಮಹಿಳಾ ಮೀಸಲಾತಿಗಾಗಿ, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗಾಗಿ, ವರದಕ್ಷಿಣೆ, ಭ್ರೂಣ ಹತ್ಯೆ, ಲಿಂಗ ತಾರತಮ್ಯ ಜಾತಿ ತಾರತಮ್ಯಗಳ ವಿರುದ್ಧ, ಕೋಮು ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆಗಾಗಿ, ನಿರುದ್ಯೋಗ, ಹಸಿವು, ಬಡತನ, ಅನಕ್ಷರತೆಯ ವಿರುದ್ಧ ದೇಶದ ಉದ್ದಗಲಕ್ಕೂ ನಾಲ್ಕು ದಶಕಗಳಿಂದ ಹೋರಾಟ, ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದೆ.

ಈ ಸಂಘಟನೆಯ ಸಂವಿಧಾನ ಮತ್ತು ಕಾರ್ಯಕ್ರಮದಂತೆ ಪ್ರತಿ ಮೂರು ವರ್ಷಗಳಿಗೊಮ್ಮೆ ಗ್ರಾಮ ಘಟಕದಿಂದ ರಾಜ್ಯ, ರಾಷ್ಟ್ರ ಸಮ್ಮೇಳನಗಳನ್ನು ನಡೆಸಿ ಸಂಘಟನೆಯು ನಡೆದು ಬಂದ ದಾರಿ, ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಮುಂದಿನ ಮೂರು ವರ್ಷಗಳ ಕಾರ್ಯ ಯೋಜನೆ ಸಿದ್ಧಪಡಿಸಲಾಗುವುದು ಹಾಗೂ ಪ್ರಸಕ್ತ ದೇಶದ ರಾಜಕೀಯ ಸಾಮಾಜಿಕ, ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಅಲ್ಲದೆ ಮಹಿಳಾಪರ, ಜನಪರ ವಿಷಯ ಕುರಿತಂತೆ ಕೆಲವು ನಿರ್ಣಯಗಳನ್ನು ‘ಸಹ ಕೈಗೊಳ್ಳಲಾಗುವುದು ಮತ್ತು ಅವುಗಳ ಜಾರಿಗಾಗಿ ಮುಂದಿನ ದಿನಮಾನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಈ ರಾಷ್ಟ್ರ ಸಮ್ಮೇಳನಕ್ಕೆ ದೇಶದ ಎಲ್ಲಾ ರಾಜ್ಯಗಳಿಂದ 900ಕ್ಕೂ ಹೆಚ್ಚು ಪ್ರತಿನಿಧಿಗಳು, ವೀಕ್ಷಕರು ಭಾಗವಹಿಸು ವರು. ಕರ್ನಾಟಕದಿಂದ ಭಾಗವಹಿಸುವ 25 ಪ್ರತಿನಿಧಿಗಳಲ್ಲಿ ಮಂಡ್ಯ ಜಿಲ್ಲೆಯಿಂದ 6 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ರಾಜ್ಯ ರಾಜಕಾರಣದ ಸ್ಥಿತಿ ಅಯೋಮಯ: ಸಿ. ಟಿ. ರವಿ

ಶಿಶುಗಳಲ್ಲಿ ಥಯಮಿನ್ ಕೊರತೆಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಲು ಸಲಹೆ: ಜಿ.ಪಂ. ಸಿಇಓ

ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆ

Leave a Comment