NEWS

ರಾಜ್ಯ ರಾಜಕಾರಣದ ಸ್ಥಿತಿ ಅಯೋಮಯ: ಸಿ. ಟಿ. ರವಿ

ನಿತ್ಯ ಕೆಟ್ಟ ರಾಜಕಾರಣ ರಾಜ್ಯದಲ್ಲಿ ವಿಜೃಂಭಣೆ | ಗಾಂಧಿ ತತ್ವಕ್ಕೆ ಗುಂಡು ಹೊಡೆದವರು ಕಾಂಗ್ರೆಸ್ಸಿಗರು

ಪಾಲನೆ ನ್ಯೂಸ್

ಮಂಡ್ಯ: ಕಾಂಗ್ರೆಸ್‌ನ ರಾಜ್ಯ ರಾಜಕಾರಣ ಅಯೋಮಯ ಸ್ಥಿತಿಯಲ್ಲಿದೆ. ಸರ್ಕಾರ ಒಳ್ಳೆಯ ಕಾರಣಗಳಿಗೆ ಸುದ್ದಿಯಾಗದೆ ಕೆಟ್ಟ ಕಾರಣಗಳಿಗಾಗಿ ಭಾರೀ ಸುದ್ದಿಯಾಗುತ್ತಿದೆ. ನಿತ್ಯ ರಾಜ್ಯದಜನರಿಗೆ ಕೆಟ್ಟರಾಜಕಾರಣವೇ ಪ್ರಚಾರವಾಗುತ್ತಿದೆ ಎಂದು ಮಾಜಿ ಸಚಿವ ಸಿ. ಟಿ. ರವಿ ಹೇಳಿದರು.

ಮೈಸೂರುನಿಂದ ಬೆಂಗಳೂರಿಗೆ ಹೆದ್ದಾರಿ ಮಾರ್ಗವಾಗಿ ತೆರಳುತ್ತಿದ್ದ ವೇಳೆ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಎಚ್. ಆರ್. ಅರವಿಂದ್ ಮತ್ತು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಅತ್ಯಾಚಾರ, ಡ್ರಗ್ಸ್, ದರೋಡೆ, ರೈತರ ಆತ್ಮಹತ್ಯೆ, ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ, ಕುರ್ಚಿಗೆ ಕಾದಾಟ ಇವೆಲ್ಲವೂ ಜನಪರ ಸರ್ಕಾರದ ಲಕ್ಷಣಗಳೇ, ದಿನ ಬೆಳಗಾದರೆ ಭ್ರಷ್ಟಾಚಾರ, ಹಗರಣಗಳು ಬಯಲಿಗೆ ಬರುತ್ತಿವೆ. ಈ ಸರ್ಕಾರದ ಬಹುತೇಕ ಮಂತ್ರಿಗಳು ಒಂದಿಲ್ಲೊಂದು ಭ್ರಷ್ಟಾಚಾರ, ಹಗರಣಗಳು ಸುತ್ತಿಕೊಳ್ಳುತ್ತಿರುವುದೇ ಈ ಸರ್ಕಾರದ ವಿಶೇಷತೆಯಾಗಿದೆ ಎಂದು ದೂಷಿಸಿದರು.

ಹಗರಣಗಳನ್ನು ಮುಚ್ಚಿಡುವುದಕ್ಕೆ, ವಿಷಯಾಂತರ ಮಾಡುವುದಕ್ಕೆ ಜನರಿಗೆ ಅನು ಕೂಲವಾಗುತ್ತಿರುವ ಯೋಜನೆಗಳಲ್ಲೂ ರಾಜಕಾರಣ ಬೆರೆಸುತ್ತಿದ್ದಾರೆ. ವಿ ಬಿ ಜಿ ರಾಮ್ ಜಿ ಯೋಜನೆಯಲ್ಲಿ ಹಳ್ಳಿಗಳ ಸಮಗ್ರ ಅಭಿವೃದ್ಧಿಪಡಿಸುವ ಪರಿಕಲ್ಪನೆ ಇದೆ, ಕೌಶಲ್ಯದ ಮೂಲಕ ಸ್ವಾವಲಂಬನೆ ರೂಪಿಸಬೇಕು ಎನ್ನುವ ಉದ್ದೇಶ ಹೊಂದಿದೆ. ಹದಿನೈದು ದಿನದೊಳಗೆ ಕೂಲಿಕಾರರಿಗೆ ಹಣ ಪಾವತಿಯಾಗಬೇಕು, ತಪ್ಪಿದರೆ ಬಡ್ಡಿ ಕೊಡುವ ವ್ಯವಸ್ಥೆ ಇದೆ. ಹಿಂದೆ ಈ ಮಾದರಿ ಎಲ್ಲಿತ್ತು ಎಂದು ಪ್ರಶ್ನಿಸಿದರು.

ಈಗ ಎರಡು ವರ್ಷದಿಂದ ಕೆಲಸ ಮಾಡಿದವರಿಗೆ ರಾಜ್ಯ ಸರ್ಕಾರ ಹಣ ಪಾವತಿ ಮಾಡಿಲ್ಲ, ಅದನ್ನ ಕೊಡಲಿಕ್ಕೆ ಶೇ. 10 ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ. ಶೇ. 10 ರಿಂದ 12ರಷ್ಟು ಕಮಿಷನ್ ಕೊಟ್ಟರೆ ಎನ್ ಓಸಿ ಕೊಡುತ್ತಾರೆ. ಆದರೆ, ಕೇಂದ್ರ ಸರ್ಕಾರ ನೇರವಾಗಿ ಶ್ರಮ ಜೀವಿಯ ಖಾತೆಗೆ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿಗೊಳಿಸಿದೆ. ತಡವಾದರೆ ಬಡ್ಡಿ ಸೇರಿಸಿ ಕೊಡುತ್ತಾರೆ. ಇದನ್ನು ಕಾಂಗ್ರೆಸ್‌ನವರು ವಿರೋಧ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸಿಗರು ಗಾಂಧಿ ಹೆಸರೇಳುತ್ತಾರೆ. ಅವರು ಗಾಂಧಿ ಹೆಸರಲಿದ್ದಾರೋ ತತ್ವದಲ್ಲಿದ್ದಾರೋ ನನ್ನ ದೃಷ್ಟಿಯಲ್ಲಿ ಗಾಂಧಿ ಅನ್ನೋ ಹೆಸರಿಗೆ ಮೌಲ್ಯ ಬಂದಿದ್ದು ಆ ತತ್ವ ಕಾರಣಕ್ಕೆ. ಆ ತತ್ವ ಕೊಂಡಿದ್ಯಾರು, ಗಾಂಧಿ ದೇಹಕ್ಕೆ ಗುಂಡು ಹೊಡೆದಿದ್ದು ಗೋಡೆ, ಗಾಂಧಿ ತತ್ವಕ್ಕೆ ಗುಂಡು ಹೊಡೆದದ್ದು ಕಾಂಗ್ರೆಸ್, ಗಾಂಧಿ ತತ್ವ ಮಧ್ಯಪಾನ ನಿಷೇಧ ಆಗಬೇಕು. ಆದರೆ, ಇವರು ಕಿರಾಣಿ ಅಂಗಡಿಗಳೆಲ್ಲಾ ಮದ್ಯಸಿಗುವಂತೆ ಮಾಡಿದ್ದಾರೆ ಎಂದು ಗುಡುಗಿದರು.

ಹೊಸ ವರ್ಷದ ದಿನ ಕುಡಿದು ಬಿದ್ದೋರೆಲ್ಲರನ್ನೂ ವಾಹನ ಮಾಡಿಕೊಂಡು ಬಿಡುತ್ತೇವೆ ಎಂದು ಹೇಳಿದವರು ಯಾರು. ಗಾಂಧಿ ಸ್ವದೇಶಿಗೆ ಒತ್ತು ಕೊಟ್ಟರೆ, ಇವರ ನಾಯಕತ್ವನೇ ವಿದೇಶಿ, ಗಾಂಧಿ ಪ್ರಾಮಾ ಣಿಕತೆಯ ಪ್ರತಿರೂಪವಾದರೆ ಇವತ್ತಿನ ಕಾಂಗ್ರೆಸ್ ಭ್ರಷ್ಟಾಚಾರದ ಪ್ರತಿರೂಪವಾಗಿ ಬದಲಾಗಿದೆ. ಗಾಂಧಿ ತತ್ವಕ್ಕೆ ಗುಂಡು ಹೊಡೆದವರು ಈಗಿಗ ಕಾಂಗ್ರೆಸ್ಸಿಗರು ಎಂದು ಕುಟುಕಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್, ಡಾ. ಸದಾನಂದ, ಚಂದಗಾಲು ಶಿವಣ್ಣ, ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ವಿವೇಕ್, ಇಂಡವಾಳು ಸಚ್ಚಿದಾನಂದ, ಕೇಶವ್, ಸಿ. ಟಿ. ಮಂಜುನಾಥ್, ಒಬಿಸಿ ಆನಂದ್, ನಾಗನಂದ, ವೈರಮುಡಿ ಸೇರಿದಂತೆ ಮತ್ತಿತರರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಪುಸ್ತಕ ನಮ್ಮ ಜ್ಞಾನವನ್ನು ಹೆಚ್ಚಿಸುವ ಪರಮಾಪ್ತ ಮಿತ್ರ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಪ್ರಾಯಪಟ್ಟರು.

ಇರುವೆ ಕಚ್ಚಿ ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬಾಕಿ ಇರುವ ಮೂಲಸೌಕರ್ಯ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳ ಸೂಚನೆ.

Leave a Comment