NEWS

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್: ಮಂಡ್ಯದ ಕುಶಾಲ್ ಬಿ. ಗೌಡ ದ್ವಿತೀಯ

ಪಾಲನೆ ನ್ಯೂಸ್

ಮಂಡ್ಯ: ಮಂಗಳೂರು ನಗರದ ತಣ್ಣೀರುಬಾವಿ ಬೀಚ್‌ನಲ್ಲಿ ಭಾರತ ಈಜು ಫೆಡರೇಷನ್ ಆಶ್ರಯದಲ್ಲಿ ಕರ್ನಾಟಕ ಈಜು ಸಂಸ್ಥೆ ಆಯೋಜಿಸಿದ್ದ ಓಪನ್ ವಾಟ‌ರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ ನಲ್ಲಿ ಬಾಲಕರ 1 ಕಿ.ಮೀ. ಗುಂಪು 5 ಮುಕ್ತ ವಿಭಾಗದಲ್ಲಿ ಕುಶಾಲ್ ಬಿ ಗೌಡ ದ್ವಿತಿಯ ಸ್ಥಾನವನ್ನು ಪಡೆದುಕೊಂಡಿದ್ದಾನೆ.

ಕರ್ನಾಟಕದ ಡಿಂಪಲ್ ಸೋನಾಕ್ಷಿ ಗೌಡ ಮತ್ತು ಭವಿಕ್ ಅಗರವಾಲ್ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.

ಫಲಿತಾಂಶ ವಿವರ

ಪುರುಷರ 10 ಕಿಮೀ ಮುಕ್ತ ವಿಭಾಗ: ಕುಶಾಗ್ರ ರಾವತ್ (ದೆಹಲಿ)-1. ಕಾಲ: 2 ಗಂಟೆ 26:13ನಿಮಿಷ, ಅದೈತ್ ಪಾಗೆ (ಮಧ್ಯಪ್ರದೇಶ)-2, ಅಲೆಸ್ಟರ್ ಸ್ಯಾಮ್ಯುಯೆಲ್ ರೇಗೊ (ಕರ್ನಾಟಕ)-3

ಮಹಿಳೆಯರ 10 ಕಿಮೀ ಮುಕ್ತ ವಿಭಾಗ: ಡಿಂಪಲ್ ಸೋನಾಕ್ಷಿ ಎಂ ಗೌಡ (ಕರ್ನಾಟಕ)-1. ಕಾಲ: 2 ಗಂಟೆ 36:52ನಿ, ಖುಷಿಕಾ ಆರ್ (ಕರ್ನಾಟಕ)-2, ವೃತ್ತಿ ಅಗರವಾಲ್ (ತೆಲಂಗಾಣ)-3

ಬಾಲಕರ 5 ಕಿಮೀ ಗುಂಪು 3: ಕಬಿಲನ್ ತಮಿಳ್‌ಸೆಲ್ವನ್ (ತಮಿಳುನಾಡು)-1. ಕಾಲ: 1 ಗಂಟೆ 16:3ನಿ, ದಕ್ಷ ಪ್ರಸಾದ್ (ಕರ್ನಾಟಕ)-2, ಆರವ್ ಜೆ (ಕರ್ನಾಟಕ)-3

ಬಾಲಕಿಯರ 5 ಕಿಮೀ ಗುಂಪು 3: ನೇನ್ಯಾ ವಿಜಯಕುಮಾರ್ (ತಮಿಳುನಾಡು)-1. ಕಾಲ: 1 ಗಂಟೆ 23:33 ನಿ, ಸೈನಾ ಪಾಂಚೋಲಿ (ಮಧ್ಯಪ್ರದೇಶ)-2, ಸಹನಶ್ರೀ ಡಿ (ಕರ್ನಾಟಕ)-3

ಬಾಲಕರ 1 ಕಿಮೀ ಗುಂಪು 5: ಭವಿಕ್ ಅಗರವಾಲ್ (ಕರ್ನಾಟಕ)-1. ಕಾಲ: 11:56ನಿ, ಕುಶಾಲ್ ಬಿ ಗೌಡ (ಕರ್ನಾಟಕ)-2, ತನುಜ್ ಸುಂದರ್ ತಮಿಳುನಾಡು–3, ಶಾನ್ ಎ.ಆರ್ (ಕರ್ನಾಟಕ)-3

ಬಾಲಕಿಯರ 1 ಕಿಮೀ ಗುಂಪು 5: ನೀಹಾರ ಮಹೇಶ್ (ತಮಿಳುನಾಡು)-1. ಕಾಲ: 12:23ನಿ, ವಿವಾನ್ಯ ಅರವಿಂದ್ (ಕರ್ನಾಟಕ)-2, ಸಾನ್ವಿ ಆರ್ (ಕರ್ನಾಟಕ)-3

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ ಮತ್ತು ಕುವೆಂಪು ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ:ಡಾ.ಕುಮಾರ

ರೈತರ ಸಮಸ್ಯೆ ಪರಿಹಾರಕ್ಕೆ ಹೋರಾಟ ರೂಪಿಸುವಂತೆ : ಚಂದ್ರಶೇಖರ್ ಸಲಹೆ

ಮೇ ಮಾಹೆಯಲ್ಲಿ ಬರುವ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ : ಬಿ. ಸಿ. ಶಿವಾನಂದಮೂರ್ತಿ

Leave a Comment