NEWS

ಅನಕ್ಷರಸ್ಥರು ಸೃಷ್ಟಿಸಿದ ಅದ್ಭುತ ಲೋಕ ಜಾನಪದ : ಕನ್ನಿಕ

ಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ಕಲಾಮೇಳ

ಪಾಲನೆ ನ್ಯೂಸ್ & ವ್ಯೂಸ್

ಮಂಡ್ಯ : ಜಾನಪದವು ಕೇವಲ ಮನೋರಂಜನೆಯಲ್ಲ ಮಣ್ಣಿನ ವಾಸನೆ, ನಮ್ಮ ಅಸ್ಮಿತೆ. ಅಕ್ಷರ ಕಲಿಯದ ಸಾಹಿತಿಗಳು ಕಟ್ಟಿದ ಅದ್ಭುತ ಲೋಕ ಎಂದು ಕನ್ನಿಕ ಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ ಕಾರ್ಯದರ್ಶಿ ಹೆಚ್. ಆರ್. ಕನ್ನಿಕ ಹೇಳಿದರು.

ನಗರದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಉದ್ಯಾನವನದ ಧ್ಯಾನಮಂದಿರದಲ್ಲಿ ನಂದಿನಿ ಸಮಾಜಸೇವಾ ಟ್ರಸ್ಟ್ ವತಿಯಿಂದ ನಡೆದ ಜಾನಪದ ಕಲಾಮೇಳ 2026ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಪಾರಂಪರಿಕ ಜ್ಞಾನ, ಕಲೆ, ಸಾಹಿತ್ಯ, ನಂಬಿಕೆ, ಆಚಾರ ವಿಚಾರ, ಬಟ್ಟೆ, ಹಳ್ಳಿಯ ಬದುಕೇ ಜಾನಪದ. ಇಂತಹ ಜನರಿಂದ ಹುಟ್ಟಿದ ಜನಪದ ಇಂದಿನ ದಿನಮಾನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪರಿಣಾಮವಾಗಿ ಕ್ಷೀಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡಪರ ಸಂಘಟನೆಗಳು ಸರ್ಕಾರ ಪ್ರೋತ್ಸಾಹ ನೀಡಿದಲ್ಲಿ ಮುಂದಿನ ಪೀಳಿಗೆಗೆ ಜಾನಪದ ಕಲೆ ಉಳಿಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ ಅವರು, ನಮ್ಮ ಹಿರಿಯರು ಕಟ್ಟಿ ಉಳಿಸಿ ಬೆಳೆಸಿದ ಜಾನಪದ ಕಲೆ ಉಳಿಯಲಿ, ಕಲಾವಿದ ಬೆಳೆಯಲಿ ಎಂದು ಹಾರೈಸಿದರು.

ಜಾನಪದ ಮರೆತರೆ ಹೆತ್ತ ತಾಯಿಯನ್ನು ಮರೆತಂತೆ. ಮಾತೃಭಾಷೆ, ನಮ್ಮ ಸಂಸ್ಕೃತಿಗೆ ಸವಾಲಾಗಿರುವ ವಿದೇಶಿ ಸಂಸ್ಕೃತಿಯನ್ನು ಧಿಕ್ಕರಿಸಿ ಮಾನವೀಯ ಸಂಬಂಧಗಳನ್ನು ಬೆಸೆಯುವ ಜಾನಪದ ಕಲೆಯನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕೆಂದು ಕನ್ನಿಕ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ರೀಲ್ಸ್ ಜಗತ್ತಿನಲ್ಲಿ ರಿಯಲ್ ಕಲೆಗಳು ವಿನಾಶದ ಹಾದಿ ಹಿಡಿದಿರುವುದು ಶೋಚನೀಯ. ಮನುಷ್ಯನ ಬದುಕು ಕಟ್ಟಿಕೊಡುತ್ತಿದ್ದ ಜನಪದ ಕಲೆಯತ್ತ ಯುವಜನತೆ ಆಸಕ್ತಿ ಬೆಳೆಸಿಕೊಂಡರೆ ಮಾತ್ರ ನಮ್ಮ ಪೂರ್ವಜರ ಸೌಹಾರ್ಧಯುತ ಬದುಕು ಅರ್ಥವಾಗುತ್ತದೆ ಎಂದರು.

ಪಠ್ಯಪುಸ್ತಕಗಳಲ್ಲಿ ಜಾನಪದವನ್ನು ಬೋದಿಸಬೇಕಾದ ಅವಶ್ಯಕತೆ ಹೆಚ್ಚಿದೆ. ಸರ್ಕಾರ ಹಳ್ಳಿಗಾಡಿನ ಕಲೆಯನ್ನು ಉಳಿಸಿ ಬೆಳೆಸಲು ವಿಶೇಷ ಆಸಕ್ತಿ ವಹಿಸಬೇಕಿದೆ. ಆಧುನೀಕತೆಯ ಅಬ್ಬರದಲ್ಲಿ ಮಾನವೀಯ ಸಂಬಂಧಗಳನ್ನು ಬೆಸೆಯಲು ಜಾನಪದ ಕಲೆ ಸಹಕಾರಿಯಾಗಲಿದೆ ಎಂದರು.

ಜಾನಪದ ಸಂಸೃತಿಯು ಅನುಭಾವದಿಂದ ಕೂಡಿದ್ದು ಜನರ ಜೀವನ ಪದ್ಧತಿ, ಸಂಸ್ಕಾರ, ಆಚಾರ-ವಿಚಾರ ಹಾಗೂ ಬದುಕಿನ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಅಂತಹ ಹಿರಿಯರ ತಲೆಮಾರಿನ ಬೇರನ್ನು ಪರಿಚಯಿಸುತ್ತಿರುವ ನಂದಿನಿ ಸಮಾಜಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.

ಕೆರಗೋಡು ಗ್ರಾಮ ಪಂಚಾಯಿತಿ ಸದಸ್ಯ ಕೆ.ಜಿ.ಮಹೇಶ್ ಮಾತನಾಡಿ, ಹಳ್ಳಿಯ ಬದುಕಿನ ಸೊಗಡನ್ನು ಬಿಂಬಿಸುವ ನಮ್ಮ ಸಂಸ್ಕೃತಿಯ ಪ್ರತೀಕ ಜಾನಪದವನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಅನಿವರ‍್ಯವಾಗಿದೆ ಎಂದರು.

ಹೆಚ್.ಸಿ.ಮಹೇಶ್ ಕುಮಾರ್ ತಂಡದವರು ವೀರಗಾಸೆ, ದೇವರಾಜು, ಕು.ಜ್ಞಾನವೇಣಿ ಅನಗಟ್ಟಿ, ಲಕ್ಷ್ಮಮ್ಮ, ಶೇಷಾದ್ರಿ ತಂಡದಿಂದ ಜಾನಪದ ಗಾಯನ ನಡೆಯಿತು. ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ರಾಜಶೇಖರ್, ಬಸರಾಳು ಬಸವರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಟ್ರಸ್ಟ್ ಮುಖ್ಯಸ್ಥರಾದ ಸ್ವಾಮಿ ಸ್ವಾಗತಿಸಿ ನಿರೂಪಿಸಿದರು.

Related posts

ವಿಶೇಷ ಚೇತನರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು: ಡಾ. ಕುಮಾರ

ಕೆ.ಆರ್.ಪೇಟೆ ಅಭ್ಯರ್ಥಿ ಘೋಷಣೆ ವಿಚಾರ:ಸ್ಪಷ್ಟನೆ ಕೊಟ್ಟ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ

ಡಿಜಿಟಲ್ ಮಾದರಿಯಲ್ಲಿ 2027ರ ಜನಗಣತಿ

Leave a Comment