NEWS

ಡಿಜಿಟಲ್ ಮಾದರಿಯಲ್ಲಿ 2027ರ ಜನಗಣತಿ

ದೋಷರಹಿತವಾಗಿ ನಿರ್ವಹಿಸಲು ತಾಂತ್ರಿಕ ಸಿಬ್ಬಂದಿಗಳಿಗೆ ಸೂಚನೆ – ಡಾ ಕುಮಾರ

ಪಾಲನೆ ನ್ಯೂಸ್

    ಮಂಡ್ಯ : 2027ರ ಜನಗಣತಿಯು ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ನಡೆಯುತ್ತಿರುವುದರಿಂದ, ಕಾರ್ಯಾಚರಣೆಯನ್ನು ದೋಷರಹಿತವಾಗಿ ನಿರ್ವಹಿಸಲು ತಾಂತ್ರಿಕ ಪರಿಣಿತರು ಮತ್ತು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

    ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನ ಗಣತಿ 2027ರ 1 ಹಂತದ ಕಾರ್ಯಚರಣೆ ಸಂಬಂಧ ನಿಯೋಜನೆಗೊಂಡಿರುವ ತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿಯಲ್ಲಿ ಮಾತನಾಡಿದರು.

    2011ರಲ್ಲಿ ಜನಗಣತಿಯು ಹಳೆಯ ಮ್ಯಾನುವೆಲ್​ ಪದ್ಧತಿಯಲ್ಲಿ ನಡೆದಿತ್ತು. ಆದರೆ, 2027ರ ಜನಗಣತಿಯು ಸಂಪೂರ್ಣವಾಗಿ ಮೊಬೈಲ್​ ಆ್ಯಪ್​ ಮೂಲಕ ನಡೆಯಲಿದೆ. ದತ್ತಾಂಶ ನಿಖರತೆ ಮತ್ತು ಪಾರದರ್ಶಕತೆ ಹೆಚ್ಚಲಿದ್ದು, ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸಹಕಾರಿ ಎಂದು ತಿಳಿದರು.

    2027ರ ಜನಗಣತಿಯು ಸಂಪೂರ್ಣ ಡಿಜಿಟಲ್ ಆಗಿರುವುದರಿಂದ, ಮೊಬೈಲ್ ಆ್ಯಪ್ ಬಳಕೆ, ಡಿಜಿಟಲ್ ದತ್ತಾಂಶ ನಮೂದು ಮತ್ತು ಮನೆ ಪಟ್ಟಿ ನಕ್ಷೆ ತಯಾರು (HLB) ಮಾಡುವ ಬಗ್ಗೆ ತಾಂತ್ರಿಕ ಸಿಬ್ಬಂದಿಗಳು ಹೆಚ್ಚು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    2027ರ ಜನಗಣತಿಯು ಸಂಪೂರ್ಣ ಡಿಜಿಟಲ್ ಆಗಿದ್ದು, ‘ಜನಗಣತಿ ನಿರ್ವಹಣೆ ಮತ್ತು ಮೇಲ್ವಿಚಾರಣೆ ವ್ಯವಸ್ಥೆ’ (CMMS) ಪೋರ್ಟಲ್ ಮೂಲಕ ಲೈವ್ ಮಾನಿಟರಿಂಗ್, ಮನೆ-ಪಟ್ಟಿ ಮತ್ತು ದತ್ತಾಂಶ ನಿರ್ವಹಣೆಯ ವಿಷಯಗಳ ಬಗ್ಗೆ ತಾಂತ್ರಿಕ ಸಿಬ್ಬಂದಿಗಳು ತಿಳಿದು ಕೆಲಸ ಮಾಡಬೇಕು ಎಂದು ತಿಳಿಸಿದರು.

    ಸಭೆಯಲ್ಲಿ ಜನಗಣತಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಾದ ಶ್ರೀಮತಿ ಧನ್ಯ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಶ್ರೀ ಕೇಶವಮೂರ್ತಿ, ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ನಿರ್ದೇಶಕರಾದ ಶ್ರೀ ಚೇತನ್ ಎಸ್ ಹಾಜರಿದ್ದರು.

    ✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
    https://chat.whatsapp.com/H1gUYgrzvnQGZAhIQSGMHn

    Related posts

    ಕಲ್ಲಿನಲ್ಲಿ ಕಾವ್ಯ ಬರೆದ ಮಹಾನ್ ಚೇತನ ಅಮರ ಶಿಲ್ಪಿ ಜಕಣಾಚಾರಿ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು RCB ಹಿಂಜರಿಯುತ್ತಿದೆ: ವೆಂಕಟೇಶ್ ಪ್ರಸಾದ್

    ಮದ್ದೂರು: ನಾಲಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಸಮಾಲೋಚನಾ ಸಭೆ

    Leave a Comment