ಮೈಸೂರು: ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಇರುವೆ ಕಚ್ಚಿ ನವಜಾತ ಶಿಶು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಸಿಯುನ ಉಸ್ತುವಾರಿ ವೈದ್ಯರು ಸೇರಿದಂತೆ ಏಳು ಮಂದಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿದೆ.
ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಎನ್ ಐಸಿಯುನಲ್ಲಿ ರಮಾಬಾಯಿನಗರದ ಸಿದ್ದಾರ್ಥ ಎಂಬವರ ನವಜಾತ ಶಿಶು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಇರುವೆ ಕಚ್ಚಿ ಮಗು ಸಾವನ್ನಪ್ಪಿದೆ ಎನ್ನುವ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವೈದ್ಯಕೀಯ ಅಧೀಕ್ಷಕ ಲಕ್ಷ್ಮೀಕಾಂತ್ ಅವರು ಏಳು ಮಂದಿಗೆ 48 ಗಂಟೆಯೊಳಗೆ ಸೂಕ್ತ ಉತ್ತರ ನೀಡುವಂತೆ ನೋಟಿಸ್ ನೀಡಿದ್ದಾರೆ.
ಎನ್‌ಐಸಿಯುನ ಕರ್ತವ್ಯನಿರತ ವೈದ್ಯರು, ವಾರ್ಡ್ ಇನ್ ಚಾರ್ಜ್ ವೈದ್ಯರು, ಶುಶೂಷಕಿ, ಸ್ವಚ್ಚತಾ ಸಿಬ್ಬಂದಿ ಅಲ್ಲದೆ, ಮೃತ ಮಗುವನ್ನು ಹಸ್ತಾಂತರ ಮಾಡುವಾಗ ಉಡಾಫೆಯಿಂದ ವರ್ತಿಸಿದ ನರ್ಸ್, ಸಿಬ್ಬಂದಿಗೂ ನೋಟಿಸ್ ನೀಡಲಾಗಿದೆ.
ಮಗುವಿನ ಪೋಷಕರು ಮಾಡಿರುವ ಆರೋಪಗಳನ್ನು ಉಲ್ಲೇಖಿಸಿ ನೋಟಿಸ್ ಕೊಡಲಾ ಗಿದ್ದು, 48 ಗಂಟೆಯೊಳಗೆ ಉತ್ತರ ಕೊಡಬೇಕು. ತಪ್ಪಿದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿದೆ.
ಮಗುವಿನ ಮರಣೋತ್ತರ ಪರೀಕ್ಷೆಯನ್ನು ಗುರುವಾರ ಪೋಷಕರ ಸಮ್ಮುಖದಲ್ಲಿ ನಡೆಸ ಮರಣೋತ್ತರ ಪರೀಕ್ಷೆ ನಡೆಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವರದಿ ರವಾನೆ ಶಿಶುವಿನ ಅಂತ್ಯಸಂಸ್ಕಾರ ಶಿಶುವಿನ ಅಂತ್ಯಸಂಸ್ಕಾರವು ತಿ.ನರಸೀಪುರ ತಾಲ್ಲೂಕಿನ ಪುಟ್ಟೇಗೌಡನಹುಂಡಿ ಗ್ರಾಮದಲ್ಲಿ ನಡೆಯಿತು. ಈ ವೇಳೆ ಮಗು ಕಳೆದುಕೊಂಡ ಪೋಷಕರ ಗೋಳು ಹೇಳತೀರದ್ದಾಗಿತ್ತು.

ಇರುವೆ ಕಚ್ಚಿದ್ದರಿಂದಲೇ ಮೃತಪಟ್ಟಿದೆಯೇ ಎಂಬುದರ ಬಗ್ಗೆ ವರದಿ ಪಡೆಯಲು ಮಧ್ಯಪ್ರದೇಶದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಪೊಲೀಸರು ತಾಯಿ, ತಂದೆ ಹಾಗೂ ಪೋಷಕರಿಂದ ಹೇಳಿಕೆಯನ್ನು ಪಡೆದುಕೊಂಡರು. ಆಸ್ಪತ್ರೆಗೆ ದಾಖಲಾದ ದಿನದಿಂದ ಮಗು ಸಾವಿನ ಖಚಿತಪಡಿಸುವ ತನಕ ನಡೆದಿರುವ ಎಲ್ಲ ದಿನಗಳ ದಿನಚರಿ ಕುರಿತಂತೆ ಮಾಹಿತಿ ಪಡೆದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
