ಪಾಲನೆ ನ್ಯೂಸ್
ಮಂಡ್ಯ : ಮೇ ಮಾಹೆಯಲ್ಲಿ ಬರುವ ಮಹನೀಯರ ಜಯಂತಿಗಳಾದ ಮೇ 1 ರಂದು ಭಗವಾನ್ ಬುದ್ಧ ಜಯಂತಿ , ಮೇ 10 ರಂದು ಶಿವಶರಣೆ ಹೇಮರೆಡ್ಡಿ, ಮಲ್ಲಮ್ಮ ಜಯಂತಿಯನ್ನು ಎಲ್ಲಾರ ಸಹಕಾರ ಸಮನ್ವಯತೆ ಹಾಗೂ ಸಾಮರಸ್ಯದಿಂದ ಮಹನೀಯರ ಚಿಂತನೆ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ. ಸಿ. ಶಿವಾನಂದಮೂರ್ತಿ ರವರು ಹೇಳಿದರು.
23ರಂದು (ಗುರುವಾರ)ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೇ ಮಾಹೆಯಲ್ಲಿ ಬರುವ ಮಹನೀಯರು ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹನೀಯರ ಜನ್ಮ ದಿನದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗಣ್ಯರಿಗೆ ಹಾಗೂ ಎಲ್ಲಾ ಅಧಿಕಾರಿಗಳು ಹಾಗೂ ಸಂಘ ಸಂಘಟನೆಗಳಿಗೆ ತಲುಪಿಸುವಂತೆ ಸೂಚಿಸಿದರು.
ವೇದಿಕೆಯನ್ನು ಸ್ವಚತೆಯಿಂದ ನೋಡಿಕೊಳ್ಳುವುದು. ಮಹನೀಯರ ಭಾವಚಿತ್ರಗಳ ಬ್ಯಾನರ್ ಗಳನ್ನು ಅಳವಡಿಸಬೇಕು ಮತ್ತು ಸಮುದಾಯದಲ್ಲಿ ಸಾಧನೆ ಮಾಡಿರುವಂತಹ ಸಮುದಾಯದ ಗಣ್ಯರಿಗೆ ಗೌರವವನ್ನು ಸೂಚಿಸಬೇಕು.ಸಮುದಾಯದ ವಿಚಾರಕರು ಮತ್ತು ಚಿಂತಕರಿಂದ ಸಮುದಾಯದ ಅರಿವಿನ ಬಗ್ಗೆ ಉಪನ್ಯಾಸವನ್ನು ಮಾಡಿಸಬೇಕು ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಮತ್ತು ವೇದಿಕೆ ಅಲಂಕಾರ-ಸೌಂಡ್ಸ್ ಲೈಟಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಬಿ. ವಿ. ನಂದೀಶ್,ನಾಗರೀಕ ಹಿರಿಯ ಹಾಗೂ ಅಂಗವಿಕಲರ ಕಲ್ಯಾಣ ಅಧಿಕಾರಿ ಕೋಮಲ್ ಕುಮಾರ್, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ ಮುಖಂಡರಾದ ಅಮ್ಜದ್ ಪಾಶ, ಡಾ. ಶಿವರಾಜು, ಡಾ. ವೆಂಕಟೇಶ್, ರಾಮಯ್ಯ, ವೆಂಕಟಗಿರಿ ರವರು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
