ಪಾಲನೆ ನ್ಯೂಸ್ & ವ್ಯೂಸ್
ಚಾರಣ (Trekking) ಕೇವಲ ಒಂದು ಪ್ರವಾಸ ಅಥವಾ ಹವ್ಯಾಸವಲ್ಲ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುವ ಒಂದು ಉತ್ತಮ ಚಟುವಟಿಕೆಯಾಗಿದೆ.
1. ದೈಹಿಕ ಆರೋಗ್ಯ ವೃದ್ಧಿ
ಹೃದಯದ ಆರೋಗ್ಯ: ಬೆಟ್ಟ ಹತ್ತುವುದರಿಂದ ರಕ್ತಪರಿಚಲನೆ ಉತ್ತಮಗೊಂಡು ಹೃದಯದ ಸಾಮರ್ಥ್ಯ ಹೆಚ್ಚುತ್ತದೆ.
ಸ್ನಾಯುಗಳ ಬಲವರ್ಧನೆ: ಕಾಲುಗಳು, ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ.
ತೂಕ ನಿಯಂತ್ರಣ: ಚಾರಣ ಮಾಡುವುದರಿಂದ ದೇಹದ ಹೆಚ್ಚಿನ ಕ್ಯಾಲೊರಿಗಳು ಕರಗಿ, ತೂಕ ನಿಯಂತ್ರಣದಲ್ಲಿರುತ್ತದೆ.
೨. ಮಾನಸಿಕ ನೆಮ್ಮದಿ ಮತ್ತು ಒತ್ತಡ ಮುಕ್ತಿ
ಒತ್ತಡ ನಿವಾರಣೆ: ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯುವುದರಿಂದ ದೈನಂದಿನ ಜೀವನದ ಒತ್ತಡ, ಆತಂಕ ದೂರವಾಗುತ್ತದೆ.
ತಾಜಾತನ: ಹಸಿರು ಪರಿಸರ ಮತ್ತು ಶುದ್ಧ ಗಾಳಿ ಮನಸ್ಸಿಗೆ ಹೊಸ ಚೈತನ್ಯ ಮತ್ತು ತಾಜಾತನವನ್ನು ನೀಡುತ್ತದೆ.
ಏಕಾಗ್ರತೆ: ಚಾರಣವು ಕಠಿಣ ಹಾದಿಗಳಲ್ಲಿ ಸಾಗಲು ನಿಮ್ಮ ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
೩. ಸಾಮಾಜಿಕ ಮತ್ತು ವೈಯಕ್ತಿಕ ಕೌಶಲ್ಯಗಳು
ತಂಡದ ಒಗ್ಗಟ್ಟು: ಗುಂಪಿನಲ್ಲಿ ಚಾರಣ ಮಾಡುವುದರಿಂದ ಪರಸ್ಪರ ಸಹಾಯ ಮಾಡುವ ಗುಣ ಮತ್ತು ಸಂವಹನ ಕೌಶಲ್ಯ ಬೆಳೆಯುತ್ತದೆ.
ಆತ್ಮವಿಶ್ವಾಸ: ಕಠಿಣವಾದ ಬೆಟ್ಟ ಅಥವಾ ಹಾದಿಗಳನ್ನು ಕ್ರಮಿಸಿ ಗುರಿ ತಲುಪಿದಾಗ ಸ್ವಯಂ ವಿಶ್ವಾಸ ಹೆಚ್ಚುತ್ತದೆ.
ಸಹನೆ ಮತ್ತು ಶಿಸ್ತು: ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಹನೆ ಮತ್ತು ಶಿಸ್ತು ಜೀವನದಲ್ಲಿ ರೂಢಿಯಾಗುತ್ತದೆ.
೪. ಪರಿಸರ ಮತ್ತು ಸಾಹಸ ಪ್ರವೃತ್ತಿ
ಪ್ರಕೃತಿ ಜ್ಞಾನ: ಕಾಡು, ಪ್ರಾಣಿ-ಪಕ್ಷಿಗಳು ಹಾಗೂ ವಿವಿಧ ಸಸ್ಯರಾಶಿಗಳ ಬಗ್ಗೆ ನೇರ ಜ್ಞಾನ ಸಿಗುತ್ತದೆ.
ಪರಿಸರ ಪ್ರೇಮ: ಪ್ರಕೃತಿಯ ಸೌಂದರ್ಯವನ್ನು ಹತ್ತಿರದಿಂದ ನೋಡುವುದರಿಂದ ಅದನ್ನು ರಕ್ಷಿಸಬೇಕೆಂಬ ಜಾಗೃತಿ ಮೂಡುತ್ತದೆ.
ಆತ್ಮೀಯ ಪರಿಸರ ಪ್ರಿಯರೇ…
ನಮ್ಮ ಟ್ರಸ್ಟ್ ಮತ್ತು ಸಮಾನ ಮನಸ್ಕರ ಸಹಯೋಗದಲ್ಲಿ ಜುಲೈ 5ನೇ ತಾರೀಕು ಆಯೋಜಿಸಿರುವ ಚಾರಣಕ್ಕಾಗಿ ಈ ಮನವಿ…ಆಧುನಿಕ ಜಂಜಾಟದಲ್ಲಿ ಬಳಲಿ ಒತ್ತಡಕ್ಕೆ ಸಿಲುಕುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪ್ರಕೃತಿ ಸಹಜವಾದ ಪರಿಸರದ ನಡಿಗೆಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ… ಸಮಾನ ಮನಸ್ಥಿತಿಯ ಸಹೃದಯ ಮಿತ್ರರು ಕುಟುಂಬ ಸಮೇತ ಭಾಗವಹಿಸುವ ಕಾರ್ಯಕ್ರಮ ಇದಾಗಿದೆ…
ಮುಂಗಾರು ಮಳೆಯ ಸಿಂಚನಕೆ ನಗು ಬೀರಿ ನಲಿವ ಕಾಡ ನೋಡುವ ಈ ಸಂದರ್ಭದಲ್ಲಿ ತಾವುಗಳೆಲ್ಲರೂ ಆ ಒಂದು ದಿನ ಎಲ್ಲಾ ಒತ್ತಡಗಳನ್ನು ಮೀರಿ ಪ್ರಕೃತಿ ಸಹಜ ಸೊಬಗನ್ನು ಕಣ್ಮನ ತುಂಬಿಕೊಳ್ಳುವ ಸುಸಂದರ್ಭವಿದು…
ಪರಿಸರ ಮೇಲಿನ ಪ್ರೀತಿ, ಆರೋಗ್ಯದ ಮೇಲಿನ ಆಸಕ್ತಿ, ಮಾನಸಿಕ ಚಿಕಿತ್ಸೆ ಇವೆಲ್ಲವೂ ಇಂತಹ ನಡಿಗೆಯಿಂದ ಸಾಧ್ಯ… ನವೋಲ್ಲಾಸದ ಈ ಚಾರಣಕ್ಕೆ ತಮ್ಮ ಅನಿಸಿಕೆ ಅಭಿಪ್ರಾಯ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತೇವೆ…
ಹಾಗೆಯೇ ಇದರಲ್ಲಿ ಭಾಗವಹಿಸುವ ಸಮಾನ ಮನಸ್ಥಿತಿಯ ನಿಮ್ಮ ಒಡನಾಟದಲ್ಲಿ ಇರುವವರನ್ನು ಸೂಚಿಸಬೇಕಾಗಿ ಕೇಳಿಕೊಳ್ಳುತ್ತೇವೆ…– ಉಮೇಶ್ ದಡಮಹಳ್ಳಿ, ಅಧ್ಯಕ್ಷರು, ಅನಿಕೇತನ ಪ್ರತಿಷ್ಠಾನ, ಹಲಗೂರು





