NEWS

ಮಾಂಡವ್ಯ ಎಕ್ಸಲೆನ್ಸ್: ಸಂಜನಾ ಕೆ.ವೈ. ರಾಜ್ಯಕ್ಕೇ 7ನೇ ಸ್ಥಾನ, ದೀಕ್ಷ ಯು. ರಾಜ್ಯಕ್ಕೇ 10ನೇ ಸ್ಥಾನ

ಶೇ. 99.32 ಫಲಿತಾಂಶ ದಾಖಲು

ಪಾಲನೆ ನ್ಯೂಸ್

ಮಂಡ್ಯ: ನಗರದ ಎಸ್.ಬಿ. ಎಜುಕೇಷನ್ ಟ್ರಸ್ಟ್  ನ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿಗೆ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 99.32 ರಷ್ಟು ಫಲಿತಾಂಶ ಲಭಿಸಿದೆ.

ಕಾಲೇಜಿನ 247೨ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 183  ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಭಾಷೆಯಲ್ಲಿ 40 ವಿದ್ಯಾರ್ಥಿಗಳು, ಗಣಿತಶಾಸ್ತ್ರದಲ್ಲಿ 12 ವಿದ್ಯಾರ್ಥಿಗಳು, ಭೌತಶಾಸ್ತ್ರದಲ್ಲಿ 02, ಜೀವಶಾಸ್ತ್ರದಲ್ಲಿ 02 ರಸಾಯನಶಾಸ್ತ್ರದಲ್ಲಿ 01, 100ಕ್ಕೆ 100 ಅಂಕ ಗಳಿಸಿದ್ದಾರೆ.

ಸಂಜನಾ ಕೆ.ವೈ. 600 ಅಂಕಗಳಿಗೆ 592 ಅಂಕ ಪಡೆದು ಇಡೀ ರಾಜ್ಯದಲ್ಲೇ 7ನೇ ಸ್ಥಾನ ಮತ್ತು ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ (ಪಿ.ಸಿ.ಎಂ.ಬಿ) ಪ್ರಥಮ ಸ್ಥಾನ ಪಡೆದಿದ್ದರೆ, ದೀಕ್ಷ ಯು. 600 ಅಂಕಗಳಿಗೆ 589 ಅಂಕ ಪಡೆದು ರಾಜ್ಯಕ್ಕೇ 10ನೇ ಸ್ಥಾನ ಪಡೆಯುವ ಮೂಲಕ ಮಂಡ್ಯ ಜಿಲ್ಲೆ ಮತ್ತು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಶೇ. 99.32 ರಷ್ಟು ಫಲಿತಾಂಶ ತರುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಎಸ್.ಬಿ. ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಡಾ. ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲರಾದ ಎಚ್.ಎಂ. ಶ್ರೀನಿವಾಸ್, ಶೈಕ್ಷಣಿಕ ಪಾಲುದಾರರಾದ ಚೇತನ್‌ಕೃಷ್ಣ, ಎಂ.ಆರ್. ಮಂಜು ಮತ್ತು ಉಪನ್ಯಾಸಕರು ಹಾಗೂ ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
ರಾಜ್ಯದಲ್ಲೇ 7ನೇ ಸ್ಥಾನ ಪಡೆದ ಸಂಜನಾ ಕೆ.ವೈ. (592) ಹಾಗೂ ರಾಜ್ಯಕ್ಕೇ 10ನೇ ಸ್ಥಾನ ದೀಕ್ಷ ಯು (589), ಅನುಷಾ ಎಸ್.ಕೆ. (586), ಯಶಸ್ವಿನಿ ಕೆ. (586), ಇಂಚರ ಎನ್. (584), ಜಾಹ್ನವಿ ಕೆ. ಆರ್. (583), ಹರ್ಷಿತಾ ಹೆಚ್.ಕೆ. (582), ಜಾಗೃತಿ ಹೆಚ್.ಜಿ. (582), ಕೃಪ ಪಿ. (582), ತರುಣ್ ಹೆಚ್.ಆರ್. (582), ಉನ್ನತಿ ಎಸ್.ಕುಮಾರ್ (582) ಪಡೆದ ಅವರನ್ನು ಮಾಂಡವ್ಯ ಎಕ್ಸಲೆನ್ಸ್ ಪ.ಪೂ. ಕಾಲೇಜು ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

Related posts

ಕಬ್ಬು ಸರಬರಾಜು ಮಾಡಿದ ರೈತರಿಗೆ ಒಂದು ಬಾರಿ ಆರ್ಥಿಕ ನೆರವು : ಡಾ. ಕುಮಾರ

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಸುಂಕ ಏರಿಸುವ ಬೆದರಿಕೆ ಹಾಕಿದ ಟ್ರಂಪ್

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಪಾರದರ್ಶಕವಾಗಿ ನಡೆಸಿ

Leave a Comment