NEWS

ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಏ. 12ಕ್ಕೆ

2024ನೇ ಸಾಲಿನ ಪ್ರಶಸ್ತಿಗೆ ಲೇಖಕಿ ವಸು ವತ್ಸಲೆ ಅವರ ಅಂತರಿಕ್ಷದಲ್ಲಿ ವಿಹಾ ಆಯ್ಕೆ

ಪಾಲನೆ ನ್ಯೂಸ್

ಮಂಡ್ಯ: ಪರಿಚಯ ಪ್ರಕಾಶನ ವತಿಯಿಂದ 2024 ನೇ ಸಾಲಿನ ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು 12.04.2026 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡ ಅವರು ವಹಿಸಲಿದ್ದಾರೆ. ಅವಧಿ ಇ-ಮ್ಯಾಗಜೈನ್ ಸಂಪಾದಕರಾದ ಜಿ.ಎನ್. ಮೋಹನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

2024ನೇ ಸಾಲಿನ ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಲೇಖಕಿ ವಸು ವತ್ಸಲೆ  ಅವರ ಅಂತರಿಕ್ಷದಲ್ಲಿ ವಿಹಾ ಆಯ್ಕೆಯಾಗಿದೆ. ಪರಿಚಯ ಪ್ರಕಾಶನ ಸಂಸ್ಥಾಪಕರಾದ ಶಿವಕುಮಾರ ಆರಾಧ್ಯ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ: ಏನು -ಎತ್ತ? ವಿಷಯವಾಗಿ ಸಂವಾದ ಆಯೋಜಿಸಲಾಗಿದ್ದು, ಸಂವಾದದಲ್ಲಿ ಜಿಲ್ಲೆಯ ಲೇಖಕರು, ಕವಿಗಳು, ಓದುಗರು ಭಾಗವಹಿಸುವವರು:

ಮಹದೇವಪ್ಪ ಆ‌ರ್., ಚಂದ್ರಣ್ಣ ಕ್ಯಾತನಹಳ್ಳಿ, ಭವಾನಿ ಲೋಕೇಶ್, ಫಣಿಮಾಲ ಎಸ್., ಡಾ. ಎಂ.ಎಸ್. ಅನಿತಾ ಮಂಗಲ, ಡಾ. ಪ್ರಜ್ವಲ್ ಮೌರ್ಯ, ಆಶಾ ಹನಿಯಂಬಾಡಿ, ರಶ್ಮಿ ಎಚ್‌.ಎಂ., ರಕ್ಷಿತ್ ರಾಜ್,  ಚಂದ್ರಶೇಖರ ದ.ಕೋ. ಹಳ್ಳಿ, ಶಿವಣ್ಣ ಮಂಗಲ, ಎಂ.ಬಿ. ನಾಗಣ್ಣಗೌಡ, ಮಾರೇನಹಳ್ಳಿ ಲೋಕೇಶ್, ಧನಂಜಯ್ ಎಚ್‌.ಸಿ., ಮದ್ದೂರು ಮಧುಸೂದನ್, ಮಾಣಿಕ್ಯ ವೈ.ಎಸ್., ಎಚ್‌.ಎಸ್. ಸುಬ್ಬುಲಕ್ಷ್ಮಿ, ಭವಾನಿ, ಶ್ವೇತಾ ಕೆ., ಅರ್ಪಿತಾ ಹೆಚ್.ಆ‌ರ್.

Related posts

ಯುವನಿಧಿ ಯೋಜನೆ ಕುರಿತು ಹೆಚ್ಚಿನ ಪ್ರಚಾರ ಮಾಡಿ: ಚಿಕ್ಕಲಿಂಗಯ್ಯ

ಯುವಕ-ಯುವತಿಯರ ಆಸಕ್ತಿಗೆ ಅನುಗುಣವಾಗಿ ಉಚಿತ ಕೌಶಲ್ಯ ತರಬೇತಿ ಮತ್ತು ಸ್ವ-ಉದ್ಯೋಗ ಮಾರ್ಗದರ್ಶನ ನೀಡಿ – ಡಾ ಕುಮಾರ

ಬಾಲ್ಯ ವಿವಾಹ, ವರದಕ್ಷಿಣೆ ಕಾಯ್ದೆ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಿ

Leave a Comment