ಡಾ. ಪ್ರೇಮಲತಾ ಬಿ. ಅವರ ವೈದ್ಯಕೀಯ ಕ್ಷೇತ್ರದ ಹೊಸ ಪುಸ್ತಕ
ಪಾಲನೆ ನ್ಯೂಸ್
ಮಂಡ್ಯ: ನಗರದ ಪರಿಚಯ ಪ್ರಕಾಶನ ಪ್ರಕಟಿಸಿರುವ ಡಾ. ಪ್ರೇಮಲತಾ ಬಿ. ಅವರು ರಚಿಸಿರುವ ಹೊಸ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮಾರ್ಚ್ 15, ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ರಾಮನಗರದ ಲೋಕಾಯುಕ್ತ ಎಸ್‌ಪಿ ಸ್ನೇಹಾ ಪಿ.ವಿ. ಐಪಿಎಸ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ಮೈಸೂರಿನ ಹೆಸರಾಂತ ಸ್ತ್ರೀರೋಗ ತಜ್ಞರಾದ ಡಾ. ಸುಷ್ಮಾ ವಿ. ದೇವ್ ಮಾತನಾಡಲಿದ್ದಾರೆ.
ಉಪಸ್ಥಿತಿ: ಡಾ. ಪ್ರೇಮಲತಾ ಬಿ., ಪುಸ್ತಕದ ಲೇಖಕರು ಹಾಗೂ ವೈದ್ಯರು. ಶಿವಕುಮಾರ ಆರಾಧ್ಯ, ಸಂಸ್ಥಾಪಕರು, ಪರಿಚಯ ಪ್ರಕಾಶನ.


