ಪಾಲನೆ ನ್ಯೂಸ್
ಮೈಸೂರು: ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು ನಿಗದಿತ ಎತ್ತರ ಮತ್ತು ತೂಕಕ್ಕಿಂತ ಕಡಿಮೆ ಇರುವ, ಅಸಹಜ ಬೆಳವಣಿಗೆಗಳಿಂದ ಬಳಲುತ್ತಿರುವ ಒಟ್ಟು 4.79 ಲಕ್ಷ ಕುಬ್ಬ ಮಕ್ಕಳನ್ನು ರಾಜ್ಯದ ಅಂಗನವಾಡಿಗಳಲ್ಲಿ ಗುರುತಿಸಲಾಗಿದೆ. 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.14 ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಆದರೆ, ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ (ಎಲ್‌ಕೆಜಿ, ಯುಕೆಜಿ) ಇರುವ ಕುಬ್ಬ ಮಕ್ಕಳನ್ನು ಪತ್ತೆ ಮಾಡುವ ಕೆಲಸವಾಗಿಲ್ಲ.

ಇದು ನಡೆದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದು ನಿಶ್ಚಿತ. ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆಯಡಿ ನಡೆಯುತ್ತಿರುವ ರಾಜ್ಯದ ಅಂಗನವಾಡಿಗಳಲ್ಲಿ ಪ್ರವೇಶಾತಿ ಪಡೆದಿರುವ 32,29,644 32,17,112 ಎತ್ತರ, ತೂಕದ ಅಳತೆಯನ್ನು 2025ರ ಡಿಸೆಂಬರ್ ನಲ್ಲಿ ಮಾಡಲಾಗಿದೆ. ಅದರಲ್ಲಿ 4,79,931ಮಕ್ಕಳು ಕುಬ್ಬತೆ ಸಮಸ್ಯೆ ಎದುರಿಸುತ್ತಿರುವುದು ಪತ್ತೆಯಾಗಿದೆ. ಈ ಪರೀಕ್ಷೆಯಿಂದ 12,532 ಮಕ್ಕಳು ಹೊರಗೆ ಉಳಿದಿದ್ದಾರೆ.
ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಪರೀಕ್ಷೆಯಾಗಿದೆ. ಕುಬ್ಬತೆಗೆ ಪ್ರಮುಖ ಕಾರಣಗಳು ಅಪೌಷ್ಟಿಕತೆಯೇ ಸಮಸ್ಯೆಗೆ ಮೊದಲ ಕಾರಣ ಅನಾರೋಗ್ಯಕರ ವಾತಾವರಣದ ಪರಿಣಾಮ , ನಿತ್ಯ ಆಹಾರದಲ್ಲಿ ಕಡಿಮೆ ಕ್ಯಾಲರಿಗಳ ಲಭ್ಯತೆ ಪರೋಕ್ಷ ಕಾರಣಗಳು ತಾಯಿಯ ಎತ್ತರ, ಎಷ್ಟನೇ ಮಗು, ನೈರ್ಮಲ್ಯ ಪದ್ಧತಿ, ಶಿಕ್ಷಣ, ರಕ್ತಹೀನತೆ, ಕುಟುಂಬದ ಸಾಮಾಜಿಕ, ಆರ್ಥಿಕ ಸ್ಥಿತಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಕ್ಕಳ ಅಪೌಷ್ಟಿಕತೆ ಸಮಸ್ಯೆಗೆ ಕಾರಣವಾಗುತ್ತವೆ. ರಾಜ್ಯದ ಬೆಳಗಾವಿ, ವಿಜಯಪುರ, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚು ಕುಬ್ಬ ಮಕ್ಕಳನ್ನು ಗುರುತಿಸಲಾಗಿದೆ.
ಪೋಷಣ್ ಅಭಿಯಾನ ಯೋಜನೆಯಡಿ ಪ್ರತಿ ಮಾಹೆಯಲ್ಲಿ ಅಂಗನವಾಡಿ ಕೇಂದ್ರಗಳ ಎಲ್ಲ ಮಕ್ಕಳ ಎತ್ತರ, ತೂಕವನ್ನು ಪರಿಶೀಲಿಸಿ ಮಕ್ಕಳ ಅಪೌಷ್ಟಿಕ ಮಟ್ಟದ ನಿಖರ ಮಾಹಿತಿ ಪಡೆಯಲು ಕ್ರಮ ವಹಿಸಲಾಗುತ್ತಿದೆ. ಮಕ್ಕಳ ಪೌಷ್ಟಿಕತೆ ನಿವಾರಣೆಗಾಗಿ ವಿವಿಧ ಉಪಕ್ರಮ ತೆಗೆದುಕೊಳ್ಳಲಾಗಿದೆ. | ಲಕ್ಷ್ಮೀ ಆರ್.ಹೆಬ್ಬಾಳ್ಳರ್ ಮಹಿಳಾ ಮತ್ತು ಮಕ್ಕಳ ಸಚಿವೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
