ಪಾಲನೆ ನ್ಯೂಸ್
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 23ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಭರ್ಜರಿ ಜಯ ಗಳಿಸಿದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ಕೋ ತಂಡವು 20 ಓವರ್ ಗಳಲ್ಲಿ 146 ರನ್ ಗಳಿಸಿ ಆಲೌಟ್ ಆಗಿತ್ತು.

ಲಕ್ನೋ ತಂಡ ನೀಡಿದ್ದ ಗುರಿಯನ್ನು ಬೆನ್ನತ್ತಿದ ಆರ್ ಸಿಬಿ 29 ಬಾಲ್‌ಗಳು ಬಾಕಿ ಇರುವಂತೆಯೇ 149 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿದೆ. ಕೊಹ್ಲಿ, ಪಾಟೀದಾರ್, ಅಬ್ಬರದಿಂದಾಗಿ ಆರ್‌ಸಿಬಿಗೆ ಗೆಲುವು ಸುಲಭವಾಯಿತು. ಲಕ್ಷ್ಮೀ ಪರ ಮಿಚೆಲ್ ಮಾರ್ಷ್ 40, ಮುಕುಲ್ ಚೌಧರಿ 39, ಆಯುಷ್ ಬಡೋನಿ 38 ರನ್ ಗಳಿಸಿ ಗಮನ ಸೆಳೆದರು. ಉಳಿದಂತೆ ಯಾವೊಬ್ಬ ಆಟಗಾರರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಆರ್‌ಸಿಬಿ 18 RAT RF ಪರ ರಸಿಕ್ ದಾರ್ 4, ಭುವನೇಶ್ವರ್ ಕುಮಾರ್ 3, ಕೃಣಾಲ್ ಪಾಂಡ್ಯ 2, ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಪಡೆದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
