NEWS

ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸುವ ಮಸೂದೆ ವಿರೋಧ

ಪಾಲನೆ ನ್ಯೂಸ್

ಚಾಮರಾಜನಗರ: ಶಾಸನ ಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸುವ ಮಸೂದೆ ವಿರೋಧಿಸಿದ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ವಿರುದ್ದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತೆಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಭುವ ನೇಶ್ವರಿ ವೃತ್ತದತನಕ ಮೆರವಣಿಗೆ ನಡೆಸಿದರು. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ವಿರುದ್ಧ ಧಿಕ್ಕಾರ ಕೂಗಿದರು. ಬಿಜೆಪಿ ಮುಖಂಡರಾದ ಡಾ.ನಿರ್ಮಲಾ ಮಾತನಾಡಿ, ದೇಶದಲ್ಲಿ ಸುಮಾರು 70 ಕೋಟಿ ಮಹಿಳೆಯರಿದ್ದು ನಮ್ಮ ಹಕ್ಕನ್ನು ಕೇಳುವ ಕಾಲ ಬಂದಿದೆ.

ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯ ರಿದ್ದೇವೆ. ಆದರೆ, ಶೇ.33ರಷ್ಟು ಮೀಸಲು ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಜಾರಿಯಾಗದಂತೆ ನಡೆದ ಮಹಿಳಾ ನಿರೋಧಿ ಕೊಡಲು ಕಾಂಗ್ರೆಸ್‌ ನಂತಹ ರಾಜಕೀಯ ಪಕ್ಷಗಳು ವಿರೋಧಿ ಸುತ್ತಿರುವುದು ದೊಡ್ಡ ದುರಂತ ಎಂದು ಟೀಕಿಸಿದರು. ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಕಮಲಮ್, ಪ್ರಧಾನ ಕಾರ್ಯದರ್ಶಿ ಶೈಲ, ಪದಾಧಿಕಾರಿಗಳಾದ ಪಾರ್ವತಮ್ಮ, ಸರೋಜ, ಕವಿತಾ, ಮಹದೇವಮ್ಮ, ಮುಖಂಡರಾದ ಕಾಡಳ್ಳಿ ಕುಮಾ‌ರ್, ಹೊನ್ನೂರು ಮಹದೇವಸ್ವಾಮಿ, ಬಾಲಸುಬ್ರಹ್ಮಣ್ಯ, ರೇವಣ್ಣ, ರವೀಶ್, ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

*ದೌರ್ಜನ್ಯ ಪ್ರಕರಣಗಳು ಮತ್ತು ಅಸ್ಪೃಶ್ಯತೆ ಯನ್ನು ಜಿಲ್ಲೆಯಿಂದ ಮುಕ್ತ ಗೊಳಿಸಿ – ಡಾ. ಮೂರ್ತಿ ಎಲ್.

ಕರ್ನಾಟಕ ಸಂಘ ಕತಾರ್ ದೋಹಾದಲ್ಲಿ ಭವ್ಯವಾಗಿ ಕಾರ್ಮಿಕ ದಿನಾಚರಣೆ 2026 ಆಚರಣೆ

ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮ

Leave a Comment