NEWS

ಓದುಗರ ಬೇಡಿಕೆ ಮೇಲೆ ಹಾಗೂ ಓದುಗರ ಆಸಕ್ತಿ ಮೇರೆಗೆ ಪುಸ್ತಕ ಖರೀದಿ ಮಾಡಲು ಅಗತ್ಯ ಕ್ರಮವಹಿಸಿ – ಡಾ ಕುಮಾರ

ಪಾಲನೆ ನ್ಯೂಸ್

    ಮಂಡ್ಯ : ಓದುಗರ ಆಸಕ್ತಿ ಮತ್ತು ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳನ್ನು ಆಯ್ಕೆ ಮಾಡುವುದು ಒಂದು ಉತ್ತಮ ನಿರ್ಧಾರ. ಗ್ರಂಥಾಲಯದಲ್ಲಿ ಈ ರೀತಿಯ ಪುಸ್ತಕ ಖರೀದಿ ಮಾಡಿ ಸಂಗ್ರಹವನ್ನು ಉತ್ತಮಪಡಿಸಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

    ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಗ್ರಂಥಾಲಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    587 ಪುಸ್ತಕ ಖರೀದಿ ಮಾಡಲು ಸಮಿತಿಯಿಂದ ತಿರ್ಮಾನ ಮಾಡಲಾಗಿದ್ದು ಉತ್ತಮ ಅಭಿರುಚಿವುಳ್ಳ ಪುಸ್ತಕ ಖರೀದಿ ಮಾಡಿ ಎಂದು ಸಭೆಯಲ್ಲಿ ತಿಳಿಸಿದರು. ಗ್ರಂಥಾಲಯದಲ್ಲಿ ಓದುಗರ ನೋಂದಣಿಯನ್ನು ಹೆಚ್ಚಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    ಪ್ರಸ್ತುತ ಹೆಚ್ಚು ಮಾರಾಟವಾಗುತ್ತಿರುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿಗಳ ಪುಸ್ತಕ, ಆಸಕ್ತಿದಾಯಕ ಬರಹಗಳಿಗೆ ಆದ್ಯತೆ ನೀಡಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    ಓದುಗರಿಗೆ ಆಕರ್ಷಕವಾದ ಮತ್ತು ಸುಸಜ್ಜಿತವಾದ ಅಧ್ಯಯನ ಕೊಠಡಿಗಳು, ಕುಡಿಯುವ ನೀರು ಮತ್ತು ಶೌಚಾಲಯದಂತಹ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಿ ಎಂದು ತಿಳಿಸಿದರು.

    ಸಭೆಯಲ್ಲಿ ಮುಖ್ಯ ಗ್ರಂಥಾಲಯ ಅಧಿಕಾರಿ ನಾರಾಯಣ ಮೂರ್ತಿ, ಸಮಿತಿಯ ಸದಸ್ಯರು ಹಾಗೂ ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ರಾಜು ಹಾಗೂ ಇತರರು ಉಪಸ್ಥಿತರಿದ್ದರು.

    ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
    https://chat.whatsapp.com/H1gUYgrzvnQGZAhIQSGMHn

    Related posts

    ಡಿಜಿಟಲ್ ಮೋಡ್ ನಲ್ಲಿ ನಡೆಯುತ್ತಿರುವ ಮೊದಲ ಜನಗಣತಿ

    ಮಂಡ್ಯ ಜಿಲ್ಲೆಯು ಇ-ಪೌತಿ ಖಾತಾ ಆಂದೋಲನದಲ್ಲಿ ರಾಜ್ಯಕ್ಕೆ ಪ್ರಥಮ

    ಕೋಚ್ ನವಲ್ ಕಿರುಕುಳ, ನಿಂದನೆ ಎಂದು ನೀರಜ್ ಚೋಪ್ರಾ, ಸುಮಿತ್ ಅಂತಿಲ್‌ ದೂರು

    Leave a Comment