NEWS

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ ಮಹಿಳೆಯರಿಗೆ ರೂ.2123 ಕೋಟಿ ಅನುದಾನ ಬಿಡುಗಡೆ : ಚಿಕ್ಕಲಿಂಗಯ್ಯ

ಪಾಲನೆ ನ್ಯೂಸ್

ಮಂಡ್ಯ : ಮಂಡ್ಯ ಜಿಲ್ಲೆಯ 4,61,599 ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯಡಿ ಯೋಜನೆ ಪ್ರಾರಂಭಗೊಂಡಾಗಿನಿಂದಲು ಇಲ್ಲಿಯವರೆಗೆ 23 ಕಂತುಗಳ
ಮೂಲಕ ರೂ.2123 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ
ಚಿಕ್ಕಲಿಂಗಯ್ಯ ಹೇಳಿದರು.

ಇಂದು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗೃಹಲಕ್ಷ್ಮಿ ಹಣ ಆಗಸ್ಟ್ ವರೆಗೆ ಪಾವತಿಸಲಾಗಿದ್ದು ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯ 4,61,599 ಮಹಿಳೆಯರಿಗೆ ರೂ. 92.98 ಕೋಟಿ ಅನುದಾನವನ್ನು ನೀಡಲಾಗಿದೆ ಎಂದರು.

ಸೆಪ್ಟೆಂಬರ್ ಮಾಹೆಯಿಂದ ಬರಬೇಕಾದ ಹಣವನ್ನು ಶೀಘ್ರವೇ ಡಿ.ಬಿ.ಟಿ ಮೂಲಕ ನೀಡಲಾಗುವುದು ಅದರಲ್ಲಿ ಯಾವುದೇ ಗೊಂದಲ ಬೇಡ. ಐ.ಟಿ.ಜಿ.
ಎಸ್.ಟಿ ಪಾವತಿದಾರರಿಗೆ ಗೃಹಲಕ್ಷ್ಮಿ ಹಣ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ ಮಹಿಳೆಯರಿಗೆ ರೂ.2123 ಕೋಟಿ ಅನುದಾನ ಬಿಡುಗಡೆ : ಚಿಕ್ಕಲಿಂಗಯ್ಯ ಬಂದಿರುವುದಿಲ್ಲ.ಗೃಹಲಕ್ಷ್ಮಿ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳು ಮನವಿಸಲ್ಲಿಸಿ ಎಂದು ಹೇಳಿದರು.ಕೆಲ ಗೃಹಲಕ್ಷ್ಮಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸೀಡಿಂಗ್ ಮತ್ತು ಇ-ಕೆ.ವೈ.ಸಿ ಮಾಡಿಸದಿರುವ ಕಾರಣ ಹಣ ಬಂದಿರುವುದಿಲ್ಲ ಹಾಗಾಗಿ ಸಾರ್ವಜನಿಕರಿಗೆ ಆಧಾರ್ ಸೀಡಿಂಗ್ ಮತ್ತು ಇ-ಕೆ.ವೈ.ಸಿ ಮಾಡಿಸುವಂತೆ ಜಾಗೃತಿ ಮೂಡಿಸಿ ಎಂದು ತಿಳಿಹೇಳಿದರು.

ಅನ್ನ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 4.47.166 ಫಲಾನುಭವಿಗಳು ಇದ್ದು ಜುಲೈ -2023 ರಿಂದ ಡಿಸೆಂಬರ್ 24 ರವರೆಗೆ ಅಕ್ಕಿಯ ಬದಲು 402.6 ಕೋಟಿ ಹಣವನ್ನು ಫಲಾನುಭವಿಗಳಿಗೆ ಪಾವತಿಸಲಾಗಿದೆ. ಫೆಬ್ರವರಿ 2025 ರ ಮಾಹೆಯಿಂದ ನಗದು ಬದಲು ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ
ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯ 8 ಸಾವಿರಕ್ಕೂ ಹೆಚ್ಚು ಐ.ಟಿ.ಜಿ.ಎಸ್.ಟಿ ಪಾವತಿದಾರನ್ನು ಬಿ.ಪಿ.ಎಲ್‌ನಿಂದ ಎ.ಪಿ.ಎಲ್ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪ್ರಶಾಂತ್ ಬಾಬು ಕೆ.ಸಿ ಅವರು ಮಾತನಾಡಿ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಜೂನ್ 2023 ರಿಂದ ನವೆಂಬರ್ 2025 ರ ವರೆಗೂ 18.03.04.248 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇಲ್ಲಿಯವರೆಗೂ ಶಕ್ತಿ ಯೋಜನೆಯಡಿ ರೂ. 492.93 ಕೋಟಿ ವೆಚ್ಚವಾಗಿದೆಎಂದು ಹೇಳಿದರು.ಬೆಂಗಳೂರು ಮೈಸೂರು ಬಸ್ ಗಾಗಿ ಅನೇಕ ಪ್ರಯಾಣಿಕರು ಸಂಚಾರ ಬೆಳೆಸುತ್ತಿದ್ದಾರೆ. ಆದ್ದರಿಂದ ಪ್ರಾಮಾಣಿಕರಿಗೆ ತೊಂದರೆ ಉಂಟಾಗದಂತೆ ಬಸ್ ವ್ಯವಸ್ಥೆ ಕಲ್ಪಿಸಿ ಹಾಗೂ ಜಿಲ್ಲೆಯ ಶಾಲಾ ಕಾಲೇಜು ಮಕ್ಕಳಿಗೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಎಂದು ಕಿವಿಮಾತು ಹೇಳಿದರು.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ಜಿಲ್ಲೆಯಲ್ಲಿ 4.98.144 ಫಲಾನುಭವಿಗಳು ಇದ್ದು ಆಗಸ್ಟ್ 2023 ರಿಂದ ನವೆಂಬರ್ 2025 ರ ವರೆಗೂ ಜಿಲ್ಲೆಯಲ್ಲಿ
549179569 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ ಗೃಹಜೋತಿ ಯೋಜನೆಯಡಿ ರೂ.491.19 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಯುವನಿಧಿ ಫಲಾನುಭವಿಗಳಿಗೆ ಕೆ.ಎಸ್.ಆರ್.ಟಿ.ಸಿ ಹಾಗೂ ಚೆಸ್ಕಾಂ ನಲ್ಲಿ ತಾಂತ್ರಿಕ ಕೆಲಸಗಳಿಗೆ ಬೇಕಾಗುವ ಅಭ್ಯರ್ಥಿಗಳನ್ನು ತಾಂತ್ರಿಕ ಶಿಕ್ಷಣ ಪಡೆದ ಯುವ ನಿಧಿ ಫಲಾನುಭವಿಗಳನ್ನು ಬಳಸಿಕೊಳ್ಳಿ. ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಯುವನಿಧಿ ಫಲಾನುಭವಿಗಳಿಗೆ ಕೆಲಸ ಕೊಡಿಸುವ ಜವಾಬ್ದಾರಿತೆಗೆದುಕೊಳ್ಳಿ. ಹಚ್ಚಿನ ಫಲಾನುಭವಿಗಳಿಗೆ ಸೆಲ್ಫ್ ಡಿಕ್ಲರೇಷನ್ ಮಾಡುವ ವಿಧಾನ ತಿಳಿಯದೆ ಯುವ ನಿಧಿಯಿಂದವಂಚಿತರಾಗುತ್ತಿದ್ದಾರೆ. ಆದ್ದರಿಂದ
ಸಂಬಂಧಪಟ್ಟ ಅಧಿಕಾರಿಗಳು ಯುವಕರಿಗೆ ಸೆಲ್ಫ್ ಡಿಕ್ಲರೇಷನ್ ಕುರಿತು ಅರಿವು ಮೂಡಿಸಿ ಎಂದು ಹೇಳಿದರು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ರಾಜೇಂದ್ರ ಎಸ್.ಹೆಚ್ ಅವರು ಮಾತ ನಾಡಿ ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 8296 ಫಲಾನುಭವಿಗಳು
ನೊಂದಣಿಯಾಗಿದ್ದು ಸೆಪ್ಟೆಂಬರ್ 2025 ರವರೆಗೂ 19.29 ಕೋಟಿ ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ.

ಅಕ್ಟೋಬರ್ ಮಾಹೆ ಹಣವನ್ನು ಶೀಘ್ರವೇಪಾವತಿಸಲಾಗುವುದು. ಯುವನಿಧಿ ಪ್ಲಸ್ ಯೋಜನೆಯಡಿಯಲ್ಲೂ ಜಿಲ್ಲೆಯ ಯುವಕರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ಯೋಜನಾಧಿಕಾರಿ ಧನುಷ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸದಸ್ಯರುಗಳಾದ ಅಜಯ್ ಕುಮಾರ್ ಬಿ.ಪಿ, ಎ.ಬಿ.ಕುಮಾರ್, ಶಂಕರೇಗೌಡ, ಬಸವರಾಜು, ಮಹಮದ್ ಅನ್ಸರ್ , ರಮೇಶ್ ಬಿ.ಎಂ.ಪಿ.ಮಾದೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

ಕುವೆಂಪು ವಿಶ್ವಮಾನವ ಧರ್ಮಕ್ಕೆ ಚಾಲನೆ

ಭಾರತಕ್ಕೆ 300 ರನ್ ಟಾರ್ಗೆಟ್ ಕೊಟ್ಟರೂ ಕಡಿಮೆಯೇ: ಮಿಚೆಲ್ ಸ್ಯಾಂಟ್ಸರ್

ಮಾ.18ರಿಂದ ಏ.2ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ

Leave a Comment