NEWS

Donald Trump: ಕೊನೆಗೂ ಟ್ರಂಪ್ ಕೈಸೇರಿತು ನೊಬೆಲ್ ಶಾಂತಿ ಪುರಸ್ಕಾರ

ಪಾಲನೆ ನ್ಯೂಸ್

ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮಗೆ ದೊರೆತಿರುವ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಮಚಾದೊ ಅವರು ಶ್ವೇತಭವನದಲ್ಲಿ ಟ್ರಂಪ್‌ ಅವರನ್ನು ಭೇಟಿಯಾಗಿದ್ದರು.

ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮಚಾದೊ, ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ಶಾಂತಿಯುತ ಪರಿವರ್ತನೆಯನ್ನು ಉತ್ತೇಜಿಸಿದ ಕೆಲಸಕ್ಕಾಗಿ ತಮಗೆ 2025 ರಲ್ಲಿ ದೊರೆತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶ್ವೇತಭವನದಲ್ಲಿ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ, ಇದನ್ನು ಡೊನಾಲ್ಡ್ ಟ್ರಂಪ್ ಸ್ವೀಕರಿಸಿರುವ ಬಗ್ಗೆ ಅವರು ತಿಳಿಸಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡ ಟ್ರಂಪ್

ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ನೀಡಿರುವ ಪ್ರಶಸ್ತಿಯನ್ನು ಸ್ವೀಕರಿಸಿರುವುದಾಗಿ‌ ಟ್ರಂಪ್‌ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್‌’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ವೆನೆಜುವೆಲಾದ ಮರಿಯಾ ಕೊರಿನಾ ಮಚಾದೊ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿರುವುದು ನನ್ನ ಪಾಲಿಗೆ ದೊಡ್ಡ ಗೌರವವಾಗಿತ್ತು. ಮಚಾದೊ ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಮರಿಯಾ ಅವರು ತಾವು ಗೆದ್ದ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ನಾನು ಮಾಡಿದ ಕೆಸಲಗಳನ್ನು ಗುರುತಿಸಿ ನನಗೆ ಉಡುಗೊರೆಯಾಗಿ ನೀಡಿದ್ದಾರೆ. ಇಂತಹ ಅದ್ಭುತ ಸನ್ನಿವೇಶ ಸೃಷ್ಟಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನೀವು ಅದ್ಭುತ ಮಹಿಳೆ’ ಎಂದು ಬರೆದುಕೊಂಡಿದ್ದಾರೆ.

ಪಾಲನೆ.ಇನ್ ವಾಟ್ಸ್‌ ಆಪ್ ಗುಂಪಿಗೆ ಸೇರಿರಿ.

Related posts

ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ವಿಶೇಷ ರಂಗೋಲಿ ಸ್ಪರ್ಧಾ

ಫೆ.16ರಂದೂ ಬಂದ ಇ-ಮೇಲ್ ಸಂದೇಶದಲ್ಲಿ ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಬೆದರಿಕೆ

ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು

Leave a Comment