ಪಾಲನೆ ನ್ಯೂಸ್
ಮೈಸೂರು: ನಗರದ ಪಾರಂಪರಿಕ ಕಟ್ಟಡವಾದ ಹಳೇ ಡಿಸಿ ಕಚೇರಿ ಮುಂಭಾಗ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ರಜತ್, ಕುದುರೆಗಳೊಂದಿಗೆ ಸಿಗರೇಟ್ ಸೇದುತ್ತಿರುವ ಫೋಟೋ, ವಿಡಿಯೋ ಶೂಟ್ ನಡೆಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿರುವುದರ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸೇನಾಪಡೆ ದೂರು ದಾಖಲಿಸಿದೆ.

ಮೈಸೂರು ಪಾರಂಪರಿಕತೆಗೆ ಹೆಸರಾಗಿಸುವ ನಗರ ವಾಗಿದೆ. ಇಲ್ಲಿನ ಪಾರಂಪರಿಕ ಕಟ್ಟಡವಾದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಐಷಾರಾಮಿ ಅವತಾರದಲ್ಲಿ ಸಿಗ ರೇಟ್ ಸೇದುತ್ತಿರುವ ರೀತಿಯಲ್ಲಿ ಫೋಟೋ ಶೂಟ್ ನಡೆ ಸಿದ್ದಾರೆ. ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಪಾರಂಪರಿಕ ಕಟ್ಟಡದ ಮುಂದೆ ಈ ರೀತಿ ಫೋಟೋ ಶೂಟ್ ನಡೆಸಲು ಅನುಮತಿ ನೀಡಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷಿದ್ದ. ಅದರಲ್ಲೂ ರಜತ್ ಈ ಪಾರಂಪರಿಕ ಕಟ್ಟಡವನ್ನು ವೈಯಕ್ತಿಕವಾಗಿ ಬಳಸಿಕೊಳ್ಳುವವರಂತೆ ಬಿಂಬಿಸುವುದಲ್ಲದೇ ಧೂಮಪಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇವರ ಈ ರೀತಿಯ ಫೋಟೊ ಶೂಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದು, ಇದರಿಂದ ಅವರ ಅನುಯಾಯಿಗಳಿಗೆ ಕೆಟ್ಟ ಸಂದೇಶ ನೀಡಿದ್ದಾರೆ. ಅಲ್ಲದೇ, ಅವರಂತೆಯೇ ಅವರ ಅನುಯಾಯಿಗಳನ್ನೂ ಪ್ರೇರೇಪಿಸಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ರಜತ್ ಮಚ್ಚು ಹಿಡಿದು ರೀಲ್ಡ್ ಮಾಡಿ ದೂರು ದಾಖಲಾಗಿ ಜೈಲಿಗೂ ಹೋಗಿ ಬಂದಿದ್ದರು. ಅದ ರಿಂದಲೂ ಬುದ್ದಿ ಕಲಿಯದೇ, ಮತ್ತದೇ ದುರ್ನಡತೆ ತೋರಿ ದ್ದಾರೆ. ಇವರ ನಡತೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಅಲ್ಲದೇ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಯಾಗಿದೆ ಎಂದು ನಗರದ ಲಕ್ಷ್ಮಿಪುರಂ ಠಾಣೆಯಲ್ಲಿ ಸೇನಾಪಡೆ ಜಿಲ್ಲಾಧ್ಯಕ್ಷ ತೇಜಸ್ ಲೋಕೇಶ್ ಗೌಡ ದೂರು ದಾಖಲಿಸಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

