NEWS

ತಿರುಪತಿಯಲ್ಲಿ ಎಐ ಆಡಳಿತ

ಪಾಲನೆ ನ್ಯೂಸ್

ತಿರುಪತಿ: ದೇವಾಲಯಗಳ ಆಡಳಿತ ನಿರ್ವಹಣೆ ಹಾಗೂ ಜನಜಂಗುಳಿ ನಿಯಂತ್ರಣಕ್ಕಾಗಿ ದೇಶಕ್ಕೇ ಮಾದರಿಯಾಗುವಂಥ ಕೃತಕ ಬುದ್ದಿಮತ್ತೆ (ಎಐ) ನಿಯಂತ್ರಿತ ಸಮಗ್ರ ಕಮಾಂಡ್ ನಿಯಂತ್ರಣ ಕೇಂದ್ರ (ಐಸಿಸಿಸಿ) ಎಂಬ ವ್ಯವಸ್ಥೆಯನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ರೂಪಿಸಿದೆ. ಭಾರತದ ಪ್ರಥಮ ಎಐ ಚಾಲಿತ ಮಂದಿರ ಆಡಳಿತ ವ್ಯವಸ್ಥೆಯಾಗಿರುವ ಇದು ಯಾತ್ರಿಗಳಿಗೆ ಅನುಕೂಲಕರವಾಗಿದೆ.

ಇಂತಹದ್ದೊಂದು ಭದ್ರತಾ ವ್ಯವಸ್ಥೆಯನ್ನು ಪರಿಕಲ್ಪಿಸಿದ ಕೇವಲ 16 ದಿನಗಳಲ್ಲಿ ಅದನ್ನು ಅನುಷ್ಠಾನ ಗೊಳಿಸಿರುವುದು ಹೆಗ್ಗಳಿಕೆ ಯಾಗಿದೆ. ಎಐ, ರಿಯಲ್ ಟೈಮ್ ಅನಾಲಿಟಿಕ್ಸ್ ಮತ್ತು ಆಪರೇಷನಲ್ ಇಂಟೆಲಿಜೆನ್ಸ್ ಬಳಸಿ ದೇವಾಲಯ ನಿರ್ವಹಣೆಯಲ್ಲಿ ಮೈಲಿಗಲ್ಲು ಬದಲಾವಣೆಯನ್ನು ಸಾಧಿಸಲಾಗಿದೆ ಎಂದು ಟಿಟಿಡಿ ಗುರುವಾರ ಹೇಳಿಕೆಯೊಂದರಲ್ಲಿ ವರ್ಣಿಸಿದೆ.

ಆಂಧ್ರದ ಐಟಿ ಸಚಿವ ನಾರಾ ಲೋಕೇಶ್ ಪಾಲ್ಗೊಂಡಿದ್ದ ಸಿಲಿಕಾನ್ ವ್ಯಾಲಿ ಸಂವಾದದಲ್ಲಿ ಈ ಪರಿಕಲ್ಪನೆ ಜನಿಸಿತ್ತು. ಟಿಟಿಡಿಯಂಥ ಬೃಹತ್ ವ್ಯವಸ್ಥೆ ನಿರ್ವಹಿಸುವಲ್ಲಿ ಒಳಗೊಂಡಿರುವ ಸವಾಲು ನಿಭಾಯಿಸುವ ದಿಸೆಯಲ್ಲಿ ಅದರ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ತಿರುಮಲದ ಸಮಗ್ರ ನಿರ್ವಹಣೆ, ಸಾಂಸ್ಕೃತಿಕ ಮತ್ತು ಪ್ರಕ್ರಿಯೆ ಮಟ್ಟದ ಜ್ಞಾನವನ್ನು ಒದಗಿಸಿದ್ದರು. ಹೀಗಾಗಿ, ಎಐ ಮಾದರಿಗಳು ಆಗಮ ಪರಂಪರೆ ಮತ್ತು ಆಚರಣೆಯ ಪಾವಿತ್ರ್ಯವನ್ನು ಖಚಿತಪಡಿಸುವಂತಾಗಿದೆ.

ವಿಡಿಯೋ ವಾಲ್

10 ಮಿಟರ್‌ ವಿಡೀಯೋ ವಾಲ್‌ನೊಂದಿಗೆ ಸಜ್ಜಿತವಾಗಿರುವ ಐಸಿಸಿಸಿ, ದೇವಸ್ಥಾನದ ಕಾರ್ಯಾಚರಣೆಗಳ ಏಕೀಕೃತ ರಿಯಲ್ ಟೈಮ್ ವಿಜುವಲ್‌ ಕಮಾಂಡ್ ದೃಶ್ಯವನ್ನು ಪಡೆಯುತ್ತದೆ.

ವ್ಯವಸ್ಥೆಯ ಮುಖ್ಯಾಂಶ

ಇಡೀ ಯಾತ್ರೆಯ ಅನುಭವ ಸುಗಮ ಗೊಳಿಸಲು ಆಡಳಿತಕ್ಕೆ ನೆರವು

ಯಾತ್ರಿಕರ ತೊಂದರೆ ನಿವಾರಿಸಿ ಸುಗಮ ದರ್ಶನಕ್ಕೂ ಅವಕಾಶ

ಭಕ್ತರು ಸರದಿ ಸಾಲಲ್ಲಿ ಕಾಯುವ ಸಮಯ ತಗ್ಗಿಸಲು ಅನುಕೂಲ

ಲಡ್ಡು ಪ್ರಸಾದ ಕಲಬೆರಕೆ ವ್ಯವಸ್ಥೆ ಸುಧಾರಣೆಗೆ ಸಮಿತಿ

ಅಮರಾವತಿ: ತಿರುಪತಿ ಲಡ್ಡು ಕಲಬೆರಕೆ

ಪ್ರಕರಣದ ಬಳಿಕ ವಿಶೇಷ ತನಿಖಾ ತಂಡದ ವರದಿ ಆಧರಿಸಿ ಟಿಟಿಡಿ ಆಡಳಿತ ವ್ಯವಸ್ಥೆ ಸರಿಪಡಿಸಲು ಏಕವ್ಯಕ್ತಿ ಸಮಿತಿ ರಚಿಸುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn


Related posts

ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ

ಭಾರತ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದೆ : ಸಿಎಂ

53ನೇ ಜನ್ಮದಿನವನ್ನು ಫ್ಯಾನ್ಸ್ ಜತೆ ಆಚರಿಸಿಕೊಂಡ ತೆಂಡುಲ್ಕರ್

Leave a Comment