NEWS

ಗೃಹ ಬಳಕೆ ಗ್ರಾಹಕರಲ್ಲಿ ಸಚಿವರ ಮನವಿ

ಪಾಲನೆ ನ್ಯೂಸ್

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷದಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಕರ್ನಾಟಕ ಸರ್ಕಾರ ಮತ್ತೆ ಶಾಕ್ ಕೊಟ್ಟಿದೆ. ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್ ಪೂರೈಕೆ ಇಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ. ಮಾತ ತೈಲ ಪೂರೈಕೆ ಕಂಪೆನಿಗಳ ಜೊತೆ ಸೋಮವಾರ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ನಾಡಿದ ಅವರು, ಸಿಎಂ ಎರಡನೇ ಪತ್ರ ಬರೆಯುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಕೇಂದ್ರ ಸರ್ಕಾರ ಹೆಚ್ಚಿನ ಗಮನ ಕೊಡಬೇಕು.

ಕಮಿಷನರ್ ಹಾಗೂ ತೈಲ ಕಂಪೆನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗಿದೆ ಎಂದರು. ವಿನಾಕಾರಣ ಆತಂಕಕ್ಕೆ ಒಳಗಾಗ ಬಾರದು ಎಂದು ಗ್ರಾಹಕರಲ್ಲಿ ಮನವಿ ಮಾಡುತ್ತೇವೆ. ಗ್ಯಾಸ್ ಡಬಲ್ ಬುಕ್ಕಿಂಗ್ ಬೇಡ. ಮಿತವಾಗಿ ಬಳಕೆ ಮಾಡಿ. 9 ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಇಂದಿರಾ ಕ್ಯಾಂಟೀನ್‌ಗಳಿಗೆ 4200+1200, កন্তু ವಲಯಕ್ಕೆ 5,200 ಪೂರೈಕೆ, ಆಟೋಗಳಿಗೆ 2,250 ಸಿಲಿಂಡ‌ರ್ ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಹೋಟೆಲ್ ಗಳಿಗೆ ಸದ್ಯಕ್ಕೆ ಪೂರೈಕೆ ಆಗಲ್ಲ. ಎಲೆಕ್ನಿಕ್ ಸ್ಟವ್ ಬಳಕೆ ಮಾಡಬೇಕು. ಕೆ.ಎಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಅಕ್ರಮ ಸಂಗ್ರಹಣೆ ವಿರುದ್ಧ ಕಠಿಣ ಕ್ರಮ ಬೆಂಗಳೂರು: ಎಲ್ ಪಿಜಿ ಕೊರತೆ ಬಗ್ಗೆ ಉಂಟಾಗಿದ್ದ ಆತಂಕದ ನಡುವೆ ಸರ್ಕಾರ ಅಕ್ರಮ ಸಂಗ್ರಹಣೆ ಮತ್ತು ದುರುಪಯೋಗದ ವಿರುದ್ದ ಕಠಿಣ ಕ್ರಮ ಕೈಗೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಎಲ್‌ಪಿಜಿ ಪೂರೈಕೆ ಹೆಚ್ಚಳವಾ ಗುವಂತೆ ಮಾಡಲಾಗಿದೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಶ್ರೀ ಕೃಷ್ಣ ದೇವರಾಯ ಜಯಂತಿ ಶುಭಾಶಯಗಳು

ಹೈಕೋರ್ಟ್ ಪ್ರಶ್ನೆ: ಹೆಣ್ಣು ಮಗು ಎಂದರೆ ಅಷ್ಟೊಂದು ತಾತ್ಸಾರವೇ ?

ಭಾರತ-ಅಮೇರಿಕ ಸಭೆಯ ಮುಂದೂಡಿಕೆ

Leave a Comment