NEWS

ಬಿಸಿಲಿನ ಬೇಗೆ ಪ್ರಾಣಿ, ಪಕ್ಷಿಗಗೆ ನೀರು ಕೊಡಿ

ಪಾಲನೆ ನ್ಯೂಸ್

ಮೈಸೂರು: ಬೇಸಿಗೆ ಆರಂಭವಾಗುವುದೇ ತಡ ಪ್ರತಿಯೊಬ್ಬರಿಗೂ ಬಾಯಾರಿಕೆ ಹೆಚ್ಚಾಗಿ, ಜಾಸ್ತಿ ನೀರು ಕುಡಿಯಬೇಕಾಗುತ್ತದೆ. ಬಿಸಿಲಿನ ಬೇಗೆ ಹೆಚ್ಚಾಗುವುದರಿಂದ ಎಂತಹವರಿಗೂ ವಿವಿಧ ರೀತಿಯ ತಂಪು ಪಾನೀಯ ಕುಡಿಯಬೇಕು ಎನಿಸುತ್ತದೆ. ಮನುಷ್ಯರಾದ ನಮಗೇ ಹೀಗೆ ಅನಿಸಬೇಕಾದರೆ, ನಮ್ಮಂತೆಯೇ ಜೀವಿಸುವ ಪ್ರಾಣಿ, ಪಕ್ಷಿಗಳ ಪಾಡು ಯಾವ ರೀತಿ ಇರಬಹುದೆಂದು ಊಹಿಸಿ. ಇಂತಹ ಬಿಸಿಲಿಗೆ ಪ್ರಾಣಿ, ಪಕ್ಷಿಗಳು ತಮ್ಮ ದಾಹವನ್ನು ನೀಗಿಸಿಕೊಳ್ಳಲು ನೀರಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತವೆ.

ಬಿಸಿಲಿನ ಬೇಗೆಗೆ ಹಲವು ಕಡೆ ಕೆರೆ-ಕಟ್ಟೆಗಳಲ್ಲಿನ ನೀರೂ ಬತ್ತಿ ಹೋಗಿರುತ್ತದೆ. ಹೀಗೆ ನೀರಿಲ್ಲದೆ ಪ್ರಾಣಿ, ಪಕ್ಷಿಗಳು ಪರದಾಡಬೇಕಾಗುತ್ತದೆ. ಆದ್ದರಿಂದ ಕನಿಷ್ಠಪಕ್ಷ ನಮ್ಮ ಸುತ್ತಮುತ್ತ ವಿವಿಧ ರೀತಿಯ ಪಕ್ಷಿಗಳು ಹಾರಾಡುತ್ತಿದ್ದಾರೆ, ಅವುಗಳನ್ನು ಗಮನಿಸಿ ಮನೆ ಮುಂದೆ, ಅಥವಾ ಮನೆಯ ಮೇಲೆ ಒಂದು ಚೆಂಬು ನೀರು ಇಟ್ಟರೆ ಅವುಗಳ ದಾಹವನ್ನು ಸ್ವಲ್ಪಮಟ್ಟಿಗಾದರೂ ನೀಗಿಸುವಂತಾಗುತ್ತದೆ. ಜೊತೆಗೆ ಬೇಸಿಗೆ ಮುಗಿಯುವವರೆಗೂ ದಿನನಿತ್ಯ ಮನೆ ಮುಂದೆ ನೀರು ಇಡುವ ಮುಖಾಂತರ ಮಾನವೀಯತೆ ತೋರಿಸುವುದು ಮನುಷ್ಯಧರ್ಮ ಎಂದು ಭಾವಿಸಬಹುದು.- ಬಿ.ಎಸ್.ಸಾಯಿ ಸಂದೇಶ್, ‌

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಉಲ್ಲೇಖದ ಪಠ್ಯಪುಸ್ತಕ ನಿಷೇಧ ಮುದ್ರಿತ

ಫೆ. 16 ಮತ್ತು 17ರಂದು ಗಾಂಧಿ ಗ್ರಾಮ ಭಾರತ ಮರಳಿಹಳ್ಳಿಗೆ ಗಾಂಧೀಜಿ ಮತ್ತು ಗ್ರಾಮಸ್ವರಾಜ್ ಕುರಿತು ಚಿಂತನ -ಮಂಥನ ಕಾರ್ಯಕ್ರಮ

‘ಇ-ಟಿಂಗ್ ಮತ್ತು ಇ-ನೋಸ್’ ನಿಂದ ತಿರುಪತಿ ತುಪ್ಪದ ಗುಣಮಟ್ಟ ಪರೀಕ್ಷೆ

Leave a Comment