NEWS

ರನ್ನರ್ ಅಪ್ ಸ್ಥಾನ ಪಡೆದ ಪದ್ಮಪ್ರಿಯಾ

ಪಾಲನೆ ನ್ಯೂಸ್

ಮೈಸೂರು: ಹರಿಯಾಣದ ಗುರುಗ್ರಾಮದಲ್ಲಿ ನಡೆದ 18 ವರ್ಷದೊಳಗಿನ ಐಟಿಎಫ್ ಜೆ-60 ಜೂನಿಯರ್ಸ್ ವಿಶ್ವ ರ್ಯಾಕಿಂಗ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಮೈಸೂರಿನ 13 ವರ್ಷದ ಟೆನ್ನಿಸ್ ಆಟಗಾರ್ತಿ ಪದ್ಮಪ್ರಿಯಾ ರಮೇಶ್‌ಕುಮಾ‌ರ್ ರನ್ನರ್-ಅಪ್ ಸ್ಥಾನ ಆಗಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಮಾ.9ರಿಂದ 14ರವರೆಗೆ ನಡೆದ 18 ವರ್ಷದೊಳಗಿನ ಐಟಿಎಫ್ ಜೆ-60 ಜೂನಿಯರ್ಸ್ ವಿಶ್ವ ರ್ಯಾಂಕಿಂಗ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಪದ್ಮಾಪ್ರಿಯಾ ಸೆಮಿಫೈನಲ್‌ನಲ್ಲಿ 1ನೇ ಶ್ರೇಯಾಂಕದ ಆಟಗಾರ್ತಿ ಪ್ರಿಷಾ ನಿಖಿಲ್ ಶಿಂಧೆ ಅವರನ್ನು ಸೋಲಿಸಿ, ಫೈನಲ್ ಪ್ರವೇಶಿಸಿದ್ದರು.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ 17ನೇ ವರ್ಷದ 2ನೇ ಶ್ರೇಯಾಂಕದ ಬೆಂಗಳೂರಿನ ಆಟಗಾರ್ತಿ ಸ್ನಿಗ್ದಾ ಕಾಂಡಾ ವಿರುದ್ಧ 4-6, 4-6 ಸೆಟ್ ಅಂತರದಲ್ಲಿ ಸೋಲನುಭವಿಸಿ, ರನ್ನರ್ ಅಪ್ ಆದರೆ, ಸಿಗ್ದಾ ಕಾಂಡಾ ಚಾಂಪಿಯನ್ ಆಗಿ ಹೊರಹೊಮ್ಮಿದರು. ಭಾರತದಲ್ಲಿ ನಡೆಯುತ್ತಿರುವ ಐಟಿಎಫ್ ಜೆ60 ಜೂನಿಯರ್ಸ್ ವಿಶ್ವ ರ್ಯಾಂಕಿಂಗ್ ಟೆನಿಸ್ ಟೂರ್ನಮೆಂಟ್ ನಲ್ಲಿ 13 ವರ್ಷದ ಭಾರತೀಯ ಬಾಲಕಿ ಫೈನಲ್ ತಲುಪಿದ್ದು ಇದೇ ಮೊದಲು ఎంబ ಹೆಗ್ಗಳಿಕೆಗೂ ಪದ್ಮಪ್ರಿಯಾ ಭಾಜನರಾಗಿದ್ದಾರೆ. ಹುಲಿ ಯೋಜನೆಯ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಚಾಮರಾಜನಗರ ವೃತ್ತದ ಸಿಸಿಎಫ್ ಡಾ.ಮಾಲತಿ ಪ್ರಿಯಾ ದಂಪತಿ ಪುತ್ರಿಯಾಗಿರುವ ಪದ್ಮಪ್ರಿಯಾ, ಮೈಸೂರಿನ ಕೂರ್ಗಳ್ಳಿಯ ಎಕ್ಸೆಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ರಘುವೀರ್ ಟೆನಿಸ್ ಅಕಾಡೆಮಿಯ ರಘುವೀರ್ ಪೊನ್ನುಸ್ವಾಮಿ ಅವರಿಂದ ತರಬೇತಿ, ಮೈಸೂರಿನ ಎಕ್ಸ್‌ ಟ್ರಾನ್ಸ್‌ನ ಸಾಗರ್ ಅವರಿಂದ ದೈಹಿಕ ಫಿಟ್‌ನೆಸ್ ತರಬೇತಿ ಪಡೆಯುತ್ತಿದ್ದಾರೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಕ್ಕಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಸನಾತನ ಧರ್ಮದ ಮೌಲ್ಯಗಳನ್ನು ಭಿತ್ತಿ

ಸಂತಲಾಲ್ ಮಹಾರಾಜರ ಆದರ್ಶ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು – ಪಿ. ರವಿಕುಮಾರ್

ಬಾಲ್ಯ ವಿವಾಹ, ಹೆಣ್ಣು ಭ್ರೂಣಹತ್ಯೆ ತಡೆಗೆ ಸಾರ್ವಜನಿಕರು ಸಹಾಯ ಅವಶ್ಯಕ

Leave a Comment