ಪಾಲನೆ ನ್ಯೂಸ್

ತಿ.ನರಸೀಪುರ: ಮನಸ್ತಾಪದಿಂದ ಬೇರೆ ಯಾಗಿದ್ದ ದಂಪತಿ ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾಗಿದ್ದಾರೆ. ರೂಪ ಮತ್ತು ಮಹದೇವ ಎಂಬ ದಂಪತಿ ಕೌಟುಂಬಿಕ ಮನಸ್ತಾಪದಿಂದ 5 ವರ್ಷಗಳಿಂದ ದೂರವಾಗಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ದಾಖಲಾಗಿತ್ತು. ಪ್ರಕರಣ ಅಂತಿಮವಾಗಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್. ನಿವೇದಿತರವರ ಸಮ್ಮುಖದಲ್ಲಿ ಲೋಕ ಅದಾಲಾತ್‌ನಲ್ಲಿ ದಾಖಲಾದ ಈ ಪ್ರಕರಣಕ್ಕೆ ಎರಡೂ ಕಡೆಯಿಂದ ಪರಸ್ಪರ ಒಂದಾಗಲು ಸಮ್ಮತಿ ವ್ಯಕ್ತವಾಗಿದ್ದರಿಂದ ದಂಪತಿ ಮತ್ತೆ ಒಂದಾದರು. ಪರಸ್ಪರ ಹಾರ ಬದಲಾಯಿಸಿಕೊಂಡು ಸಂತಸ ಪಟ್ಟರು. ಈ ವೇಳೆ ಪ್ರಧಾನ ನ್ಯಾಯಾಧೀಶ ರಾದ ಸಚಿನ್, ರೂಪರವರ ಪರ ವಕೀಲ, ಕೆ.ಎಸ್.ಶಂಭುಲಿಂಗಸ್ವಾಮಿ, ಮಹಾದೇವ ರವರ ಪರ ವಕೀಲ ಬಿ.ಪರಶಿವಮೂರ್ತಿ, ಹಿರಿಯ ವಕೀಲರಾದ ಮಾದಪ್ಪ, ರಂಗಪ್ಪ, ಮಹೇಶ್, ಜ್ಞಾನೇಂದ್ರ ಮೂರ್ತಿ, ರಂಗಯ್ಯ, ದಿವ್ಯ, ಪಲ್ಲವಿ, ತಲಕಾಡು ಪೊಲೀಸ್ ಸಿಬ್ಬಂದಿ ಪುನೀತ್ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಮಾದಪ್ಪ ಹಾಜರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
