NEWS

19,300 ಠೇವಣಿ ಪಡೆಯಲು ಸಹೋದರಿಯ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ವ್ಯಕ್ತಿ

ಪಾಲನೆ ನ್ಯೂಸ್

ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಸಹೋದರಿ ಮೃತಪಟ್ಟಿರುವುದಾಗಿ ಬ್ಯಾಂಕ್ ಸಿಬ್ಬಂದಿಗೆ ತೋರಿಸಲು ಸಹೋದರಿಯ ಅಸ್ಥಿಪಂಜರವನ್ನೇ ಹೊತ್ತು ತಂದ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಕೇಂದೂಜರ್ ಜಿಲ್ಲೆಯ ದಿಯಾನಾಲಿ ಗ್ರಾಮದ ಜೀತು ಮುಂಡಾ ಎಂಬ ಆದಿವಾಸಿ ವ್ಯಕ್ತಿಯ ಸಹೋದರಿ ಕಾಮುಂಡಾ ಕಳೆದ ಜನವರಿಯಲ್ಲಿ ಮೃತಪಟ್ಟಿದ್ದರು.

ಅವರು ಒಡಿಶಾ ಗ್ರಾಮೀಣ ಬ್ಯಾಂಕ್‌ನ ಮಾಲಿಪೋಸಿ ಶಾಲೆಯಲ್ಲಿ ಇರಿಸಿದ್ದ 19,300 ಠೇವಣಿ ಪಡೆಯಲು ಬ್ಯಾಂಕ್‌ಗೆ ಹೋಗಿದ್ದರು. ಆದರೆ ಬ್ಯಾಂಕ್‌ನವರು ಠೇವಣಿದಾರರನ್ನು ಕರೆತರುವಂತೆ ಸೂಚಿಸಿದ್ದರು. ಆಕೆ ಮೃತಪಟ್ಟಿರುವುದಾಗಿ ತಿಳಿಸಿದರೂ ಬ್ಯಾಂಕ್ ನವರು ನಂಬಿರಲಿಲ್ಲ. ಹಾಗಾಗಿ ಸ್ಮಶಾನದಿಂದ ಅಸ್ಥಿ ಪಂಜರ ಹೊತ್ತು ಬ್ಯಾಂಕ್‌ಗೆ ಬಂದಿದ್ದೆ ಎಂದು ವ್ಯಕ್ತಿ ತಿಳಿಸಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ಆದಿವಾಸಿಯನ್ನು ಶಾಂತಗೊಳಿಸಿ ಅಸ್ಥಿಪಂಜರವನ್ನು ಮತ್ತೆ ಹೂಳಲಾಗಿದ್ದು, ಠೇವಣಿ ಹಿಂಪಡೆಯುವ ಪ್ರಕ್ರಿಯೆಗೆ ನೆರವು ನೀಡಲು ಬ್ಯಾಂಕ್ ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದಾರೆ.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಅತ್ಯಾಚಾರ ಎಸಗಲು ಬೆಂಬಲಿಸಿದ್ದ ನಾಲ್ಕು ಜನರಿಗೆ 20 ವರ್ಷ ಜೈಲು

ಜಿಲ್ಲಾಧಿಕಾರಿಗಳಿಂದ ಮಂಡ್ಯದ ಪದ್ಮ ಶ್ರೀ ಪ್ರಶಸ್ತಿ ವಿಜೇತ ಅಂಕೇಗೌಡರಿಗೆ ಸನ್ಮಾನ

ಸಾರ್ವಜನಿಕರಿಗೆ ಕ್ಷಯರೋಗ (ಟಿ.ಬಿ) ಕುರಿತು ಅರಿವು ಕಾರ್ಯಕ್ರಮ ಅಗತ್ಯ : ಡಾ. ಕುಮಾರ

Leave a Comment