NEWS

ಇಸ್ರೇಲ್ ನ ತೈಲ ಸಂಸ್ಕರಣಾ ಘಟಕ ಮೇಲೆ ದಾಳಿ

ಪಾಲನೆ ನ್ಯೂಸ್

ಇರಾನ್‌ನಲ್ಲಿ ಬೆಂಕಿಯ ನದಿ! ಇದು ಭೀಕರ ದೃಶ್ಯವನ್ನು ಸೃಷ್ಟಿಸಿದೆ. ತನ್ನ 5 ತೈಲ ಡಿಪೋಗಳ ಮೇಲಿನ ದಾಳಿಗೆ ಪ್ರತಿಯಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್, ಇಸ್ರೇಲ್ ನ ಅತಿದೊಡ್ಡ ತೈಲ ಸಂಸ್ಕರಣಾ ಘಟಕವಾದ ಹೈಫಾದಲ್ಲಿರುವ ಬಜನ್ ಗ್ರೂಪ್‌ನ ತೈಲಾ ಗಾರದ ಮೇಲೆ ದಾಳಿ ಮಾಡಿದೆ. ಜೊತೆಗೆ ಯುಎಇ, ಬನ್, ಕುವೈತ್ ಸೇರಿದಂತೆ ಕೊಲ್ಲಿ ದೇಶಗಳ ಮೇಲೆ ಭೀಕರ ಡೋನ್, ಕ್ಷಿಪಣಿ ದಾಳಿ ನಡೆ ನಡೆಸಿದೆ.

ಅಲ್ಲದೆ ಇನ್ನೂ 6 ತಿಂಗಳವರೆಗೂ ತಾನು ಸುದೀರ್ಘ ಯುದ್ಧ ನಡೆಸಲು ರೆಡಿ ಎಂದು ಹೇಳುವ ಮೂಲಕ ಅಮೆ ರಿಕ, ಇಸ್ರೇಲ್‌ಗೆ ಕಠಿಣ ಸಂದೇಶ ರವಾನಿಸಿದೆ. ಡಿಪೋಗೆ ಬೆಂಕಿ: ಕಳೆದ ಕೆಲ ದಿನಗಳಿಂದ ಇರಾನ್‌ನ ಸೇನಾ ನೆಲೆ, ಕ್ಷಿಪಣಿ ಉತ್ಪಾದನಾ ಕೇಂದ್ರ, ಅಣು ಘಟಕ, ವಿಮಾನ ನಿಲ್ದಾಣ ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಅಮೆರಿಕ -ಇಸ್ರೇಲ್ ಪಡೆಗಳು ಭಾನುವಾರ ಟೆಹ್ರಾನ್‌ನ ಹೊರವಲಯದಲ್ಲಿನಬೃಹತ್ ತೈಲಡಿಪೋಗಳ ಮೇಲೆ ಭೀಕರ ದಾಳಿ ನಡೆಸಿವೆ. ದಾಳಿಗೊಳಗಾದ ಸ್ಥಳದಲ್ಲಿನ ಶಹರಾನ್ ತೈಲ ಡಿಪೋ ಒಂದರಲ್ಲೇ 26 ಕೋಟಿ ಲೀ. ತೈಲ ತುಂಬಿದ್ದ 11 ಟ್ಯಾಂಕ್‌ಗಳಿದ್ದವು ಎನ್ನಲಾಗಿದೆ.

ಇಂಥ 5 ಡಿಪೋಗಳ ಮೇಲೆ ದಾಳಿ ನಡೆದಿರುವ ಕಾರಣ ಭಾರೀ ಪ್ರಮಾಣದ ಇಂಧನ ಬೆಂಕಿಗಾ ಹುತಿಯಾಗಿರುವ ಅಂದಾಜಿದೆ. ಘಟನೆಯಲ್ಲಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಈ ದಾಳಿಯನ್ನು ಇಸ್ರೇಲ್ ಸಮರ್ಥಿಸಿಕೊಂಡಿದ್ದು, ‘ಇರಾನ್ ಸೇನೆಯು ತೈಲಶೇಖರಿಸಿಟ್ಟಸ್ಥಳಗಳನ್ನು ಬಳಸಿಕೊಳ್ಳುತ್ತಿತ್ತು. ಆದ್ದರಿಂದಲೇ ಅವುಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದೇವೆ’ ಎಂದು ಹೇಳಿದೆ. ಕರಿ ನೀರ ಮಳೆ: ಟೆಹ್ರಾನ್ ಮತ್ತು ಕರಜ್ ನಗರದಲ್ಲಿದ್ದ 5 ಸಂಗ್ರಹಾಗಾರಗಳ ಮೇಲಿನ ದಾಳಿಯಿಂದ ಉಂಟಾದ ಮಾಲಿನ್ಯದಿಂದಾಗಿ ಆ್ಯಸಿಡ್ ಮಳೆಯಾಗುವ ಆತಂಕವಿದ್ದು, ಜನರಿಗೆ ಮನೆಯಿಂದ ಹೊರಬರದಂತೆ ಸೂಚಿ ಸಲಾಗಿತ್ತು. ನಿರೀಕ್ಷೆಯಂತೆ ಮಳೆಯಾಗಿದ್ದು, ಹೊಗೆಯು ಮಳೆನೀರಿನೊಂದಿಗೆ ಬೆರೆತು ಗ್ರೀಸ್ ಸುರಿದಂತೆ ಕಪ್ಪು ಹನಿಗಳು ಉದುರಿವೆ. ಈ ಬಗ್ಗೆ ಟೆಹ್ರಾನ್ ನಿವಾಸಿಯೊಬ್ಬರು ಮಾತನಾಡಿದ್ದು, ‘ಬಿಳಿ ಕಾರಿನ ಮೇಲೆ ಎಣ್ಣೆಯಂತದ ದ್ರವ ಬಿದ್ದಿದೆ’ ಎಂದು ಆತಂಕ ತೋಡಿಕೊಂಡಿದ್ದಾರೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪ್ರತಿಭಾಂಜಲಿ ಆಯೋಜಿಸಿರುವ ಕಾವೆಂಶ್ರೀ ಕಾವ್ಯಯಾನ ಸಂಗೀತ ಸುಧೆ ಫೆ.14ಕ್ಕೆ

ಕಾವೇರಿ ನದಿಯಲ್ಲಿ ಬತ್ತಿ ಹೋದ ನೀರು

ಮದ್ದೂರು ತಾಲ್ಲೂಕು ಕಚೇರಿಗೆ ಅನಿರೀಕ್ಷಿತ  ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ

Leave a Comment