NEWS

ಭರ್ಜರಿ ದಾಖಲೆ ಮಾಡಿದ ‘ಬಜೆಟ್ ರಾಮಯ್ಯ’

ಪಾಲನೆ ನ್ಯೂಸ್

ಬೆಂಗಳೂರು : ಈ ಸಾಲಿನ ಬಜೆಟ್ 4,48,004 ಕೋಟಿ ರೂ.ಗಳ ಗಾತ್ರವಾಗಿದ್ದು, 22,952 ಕೋಟಿ ರೂ.ಗಳ ವಿತ್ತೀಯ ಕೊರತೆಯನ್ನು ಹೊಂದಿದೆ. ಇದನ್ನು ಸರಿದೂಗಿಸಲು ಅಭಿವೃದ್ಧಿ ಕಾಮಗಾರಿಗಳಿಗಾಗಿ 1,22,340 ಕೋಟಿ ರೂ. ಗಳ ಸಾಲ ಪಡೆಯಲು ತೀರ್ಮಾನಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅಧಿಕ ಹಣ ವ್ಯಯಿಸುತ್ತಿದ್ದರೂ ಬಂಡವಾಳ ವೆಚ್ಚಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸಾಲದ ಮೊರೆ ಹೋಗಲಾಗಿದೆ.

ಅಂಕಿ ಅಂಶಗಳ ಪ್ರಕಾರ ಈ ಆರ್ಥಿಕ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲ 8,27,389 ಕೋಟಿ ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ ) ಶೇ. 24.94 ರಷ್ಟಾಗಲಿದ್ದು, ಆರ್ಥಿಕ ಸ್ಥಿತಿ ಮಿತಿಯಲ್ಲೇ ಇದೆ ಎಂದು ಹೇಳಲಾಗಿದೆ. ಸಾಮಾಜಿಕ ಸ್ಥಿರತೆಗೆ ಆದ್ಯತೆ:ಸರ್ಕಾರದ ಪ್ರಮುಖ ಕಲ್ಯಾಣ ಉಪಕ್ರಮಗಳನ್ನು ಎತ್ತಿ ತೋರಿಸಿದ ಮುಖ್ಯಮಂತ್ರಿಗಳು, ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯನ್ನು ಆಧರಿಸಿದ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರವು 2023ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಸ್ಥಿರತೆಗೆ ಆದ್ಯತೆ ನೀಡಿತು ಎಂದು ಹೇಳಿದರು.

‘ಭಾರತ ಮತ್ತು ವಿದೇಶಗಳಲ್ಲಿನ ಪ್ರಮುಖ ಅಧ್ಯಯನಗಳು ಗ್ಯಾರಂಟಿ ಯೋಜನೆಗಳು ಕೋಟ್ಯಂತರ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತಿವೆ ಮತ್ತು ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುತ್ತಿವೆ ಎಂದು ತೋರಿಸುತ್ತವೆ. ಅದೇ ಸಮಯದಲ್ಲಿ, ಸರ್ಕಾರವು ಬಂಡವಾಳ ಹೂಡಿಕೆ, ಮೂಲಸೌಕರ್ಯ ಅಭಿವೃದ್ದಿ ಮತ್ತು ದೀರ್ಘಾವಧಿಯ ಆರ್ಥಿಕ ಪರಿವರ್ತನೆಯತ್ತಲೂ ಗಮನಹರಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅಂತೆಯೇ ಮಾನವ ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ನಿರ್ಲಕ್ಷಿಸುವ ಆರ್ಥಿಕ ಅಭಿವೃದ್ಧಿ ಅಸ್ಥಿರ ಮಾತ್ರವಲ್ಲ, ಅನೈತಿಕವೂ ಆಗಿದೆ ಎಂದು ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ, ‘ಈ ತಿಳಿವಳಿಕೆಯೊಂದಿಗೆ ನಾವು ಜನರ ಕಲ್ಯಾಣ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಎಂದರು.

ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಭೌಗೋಳಿಕ ಸಮಾನತೆ; ವ್ಯಾಪಾರ ಮತ್ತು ಕೈಗಾರಿಕೆಗಳನ್ನು ಉತ್ತೇಜಿಸಲು ಜಾಗತಿಕ ವ್ಯಾಪಾರ ಆರ್ಥಿಕತೆ; ಪ್ರವಾಸೋದ್ಯಮ-ಚಾಲಿತ, ಜಾಗತಿಕವಾಗಿ ಚಲಿಸುವ ಆರ್ಥಿಕತೆ; ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಹಸಿರುಆರ್ಥಿಕತೆ; ಮತ್ತು ಸುಸ್ಥಿರ ನಗರ ಬೆಳವಣಿಗೆಯನ್ನು ಬೆಂಬಲಿಸುವ ಬೆಳೆಯುತ್ತಿರುವ ನಗರ ಆರ್ಥಿಕತೆಯನ್ನು ಈ ಮಾದರಿ ಒಳಗೊಂಡಿದೆ ಎಂದು ಅವರು ಹೇಳಿದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹುಟ್ಟುಹಬ್ಬ ಆಚರಣೆ

ಜಿಲ್ಲಾ ಕೋರ್ಟ್ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ಸಮ ಸಮಾಜದ ಕನಸು ಬಿತ್ತಿದರು ಸಂತ ಕವಿ ಸರ್ವಜ್ಞ: ಬಿ.ಪಿ ಪ್ರಕಾಶ್

Leave a Comment