NEWS

ಜಿಲ್ಲಾಧಿಕಾರಿಗಳಿಂದ ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ಮತ್ತು ಪರಿಶೀಲನೆ

ಪಾಲನೆ ನ್ಯೂಸ್

ಮಂಡ್ಯ: ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯಲ್ಲಿರುವ ಘನ ತ್ಯಾಜ್ಯ ನಿರ್ವಹಣಾ (Solid Waste Management – SWM) ಘಟಕಕ್ಕೆ ಭೇಟಿ ನೀಡಿ ಸ್ವಚ್ಛ ಭಾರತ್ ಮಿಷನ್ (ನಗರ) ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ತಾಂತ್ರಿಕ ವ್ಯವಸ್ಥೆಗಳ ಸಮಗ್ರ ಪರಿಶೀಲನೆಯನ್ನು ನಡೆಸಿದರು.

ಪರಿಶೀಲನೆಯ ಸಂದರ್ಭದಲ್ಲಿ ಕಸದ ಸಂಗ್ರಹಣೆ, ಮೂಲದಲ್ಲಿಯೇ ಕಸ ವಿಂಗಡಣೆ, ಸಂಸ್ಕರಣೆ, ಮರುಬಳಕೆ ಹಾಗೂ ವೈಜ್ಞಾನಿಕ ವಿಲೇವಾರಿ ಪ್ರಕ್ರಿಯೆಗಳ ಕಾರ್ಯಾಚರಣೆಯನ್ನು ಜಿಲ್ಲಾಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿದರು.

ಘಟಕದ ತಾಂತ್ರಿಕ ವಿವರಗಳು:

ಮನೆಮನೆ ಕಸ ಸಂಗ್ರಹಣೆ, ತೇವ ಕಸದ ಕಾಂಪೋಸ್ಟಿಂಗ್, ಒಣ ಕಸದ ಮರುಬಳಕೆ, ಪರಿಸರ ಸುರಕ್ಷತಾ ಕ್ರಮಗಳು Swachh Bharat Mission (Urban) ಯೋಜನೆಯಡಿ ಶೇ.100ರಷ್ಟು ಕಸ ವಿಂಗಡಣೆ ಗುರಿ ಸಾಧಿಸಲು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸೂಚನೆಗಳು:

ಮನೆಮನೆ ಕಸ ಸಂಗ್ರಹಣೆ ನಿಯಮಿತ, ತೇವ–ಒಣ ಕಸ ವಿಂಗಡಣೆ ಕಡ್ಡಾಯ, IEC ಚಟುವಟಿಕೆ ಬಲಪಡಿಸಬೇಕು

ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ವಂದೇಮಾತರಂ 150: ಗೀತೆಗೇಕೆ ಅಷ್ಟು ಮಹತ್ವ? ಅರ್ಥ ಗೊತ್ತೇ

ಕಸ್ಟಮ್ಸ್ ಅಧಿಕಾರಿಗಳಿಂದ ಭರ್ಜರಿ ಬೇಟೆ

ರಾಜಕೀಯದಲ್ಲಿ ‘ಫ್ರೀಬೀಸ್’ ಸಂಸ್ಕೃತಿ ಹೆಚ್ಚುತ್ತಿರುವುದನ್ನು ಖಂಡಿಸಿದ ಸುಪ್ರೀಂ ಕೋರ್ಟ್

Leave a Comment