NEWS

ಜಿಲ್ಲಾ ಖನಿಜ ಪ್ರತಿಷ್ಠಾನ (DMF) ನಿಧಿಯಲ್ಲಿ ಸಾರ್ವಜನಿಕರ ಮೂಲಭೂತ ಸೌಕರ್ಯಕ್ಕೆ ಹಾಗೂ ಕಾಮಗಾರಿಗಳಿಗೆ ಆದ್ಯತೆ ನೀಡಿ : ಡಾ ಕುಮಾರ್

ಪಾಲನೆ ನ್ಯೂಸ್

ಮಂಡ್ಯ: ಗಣಿಗಾರಿಕೆಯಿಂದ ಬಾಧಿತರಾದ ಪ್ರದೇಶದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ (DMF) ನಿಧಿಯನ್ನು ಬಳಸಿಕೊಂಡು, ಗಣಿಗಾರಿಕೆ ನಡೆಯುವ ಸ್ಧಳದಲ್ಲಿ ಅಲ್ಲಿನ ಸಾರ್ವಜನಿಕರಿಗೆ ಮೂಲಸೌಕರ್ಯಗಳನ್ನು ನೀಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣಿ ಇಲಾಖೆಯ ಡಿಎಂಎಫ್ ಕುರಿತ ಸಭೆಯ ಅಧ್ಯಕತೆ ವಹಿಸಿ ಮಾತನಾಡಿದರು.

ಗಣಿಗಾರಿಕೆಯಿಂದ ನೇರವಾಗಿ ಬಾಧಿತರಾದ ಜನರ ಜೀವನಮಟ್ಟ ಸುಧಾರಿಸುವುದು ಹಾಗೂ ಗಣಿಗಾರಿಕೆಗಳಿಂದ ಬಾಧಿತವಾದ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಜನಸಾಮಾನ್ಯರ ಅರೋಗ್ಯ, ಶಿಕ್ಷಣ, ವೈದ್ಯ ಮತ್ತು ನೈರ್ಮಲ್ಯ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.

DMF ನಿಧಿಯ ಶೇ. 70 ಕ್ಕಿಂತ ಹೆಚ್ಚು ಭಾಗವನ್ನು ಗಣಿಗಾರಿಕೆಯಿಂದ ನೇರವಾಗಿ ಬಾಧಿತವಾದ ಪ್ರದೇಶಗಳಲ್ಲಿನ ಕಾಮಗಾರಿಗಳಿಗೆ ಬಳಸಬೇಕು. ಈ ನಿಟ್ಟಿನಲ್ಲಿ ಗಣಿಗರಿಕೆಯಿಂದ ಬಾಧಿತವಾದ ವಲಯಗಳಿಗೆ ಕುಡಿಯುವ ನೀರು,ಶುದ್ದೀಕರಣ ವ್ಯವಸ್ಥೆ,ನೀರು ಸಂಸ್ಕರಣಾ ಘಟಕಗಳು ಕಲ್ಪಿಸಿ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ, ಶಿಕ್ಷಣ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿ ಎಂದು ತಿಳಿಸಿದರು.

ಸಭೆಯಲ್ಲಿ ಅರಣ್ಯ ಇಲಾಖೆ ಡಿಎಫ್ಓ. ರಘು,ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪುಷ್ಪಾ ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಉಪನಿರ್ದೇಶಕರು ದಿನೇಶ್, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಗೀತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಏ.8ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನ ಆರಂಭ

Ranji Trophy: ಪಡಿಕ್ಕಲ್ ಶತಕ; ಅಸಾಧಾರಣ ಮೊತ್ತವನ್ನೇ ಬೆನ್ನಟ್ಟಿ ಗೆದ್ದ ಕರ್ನಾಟಕ; ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಎರಡು ಲಕ್ಷಕ್ಕೂ ಅಧಿಕ ಪುಷ್ಪಗಳನ್ನು ಬಳಸಿ ವಿಶೇಷ ಫಲಪುಷ್ಪ ವಸ್ತು ಪ್ರದರ್ಶನ

Leave a Comment