NEWS

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ!

ಪಾಲನೆ ನ್ಯೂಸ್

ಬೆಂಗಳೂರು : ಜಾಲತಾಣದಲ್ಲಿ ಖಾತೆ ತೆರೆಯಲು ನಿರ್ಬಂಧ | ಯುವಸಮೂಹವು ದಾರಿ ತಪ್ಪುವುದನ್ನು ತಡೆಯಲು 3 ಘೋಷಣೆ ಬೆಂಗಳೂರು ವಿದ್ಯಾರ್ಥಿಗಳು, ಯುವಸಮೂಹ ದಾರಿತಪ್ಪುವುದನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ಕೆಲ ಮಹತ್ವದ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ.

ಮಾದಕ ವಸ್ತು ವ್ಯಸನಕ್ಕೆ ಒಳಗಾಗುವುದು ತಪ್ಪಿಸಲು ಜಾಗೃತಿ ಶಿಕ್ಷಣ ಹಾಗೂ ವಿದ್ಯಾರ್ಥಿ ನಾಯಕರನ್ನು ಬೆಳೆಸಲು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವುದಾಗಿ ಘೋಷಿಸಿದ್ದಾರೆ. ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧಿಸಲಾಗುವುದು ಎಂದು ಘೋಷಿಸಲಾಗಿದೆ. ನಿಷೇಧ ಹೇಗೆ?: ಈಗಾಗಲೇ ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ದೇಶದಲ್ಲಿ ಇಂತಹದ್ದೊಂದು ಪ್ರಯತ್ನ ಯಶಸ್ವಿಯಾಗಿದೆ.

ಆದೇ ಮಾದರಿಯಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಟಿಕ್-ಕಾಟ್, ಫೇಸ್ ಬುಕ್, ಯೂಟ್ಯೂಬ್, ಎಕ್ಸ್, ಸ್ಯಾಪ್‌ ಚಾಟ್, ಇನ್ಸಾಗ್ರಾಮ್ ಸೇರಿದಂತೆ ವಿವಿಧಪ್ರಮುಖ ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧಿಸುವ ಉದ್ದೇಶ ಸರ್ಕಾರದ್ದಾಗಿದೆ. ಈ ವಯೋಮಾನದೊಳಗಿನ ಮಕ್ಕಳು ಈ ಯಾವುದೇ ಮುಖ್ಯಸ್ಥರೊಂದಿಗೆ ಸೇರಿ ಕ್ರಮ ವಹಿಸುವುದು. ಇದರ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಮತ್ತು ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರಬಹುದಾದ ಸಾಮಾಜಿಕ ಜಾಲತಾಣಗಳ ಬಳಕೆಗೆ ಮನೆಗಳಲ್ಲೂ ಪೋಷಕರು ನಿಬಂರ್ಧ ವಿಧಿಸಬೇಕೆಂದು, ದೊಡ್ಡವರ ಹೆಸರಲ್ಲಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ತೆರೆದು ಬಳಸುವುದನ್ನು ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡುವುದು ಸರ್ಕಾರ ಆಲೋಚನೆಯಾಗದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದನ್ನು ನಿಷೇಧಿಸುವುದು ಮತ್ತು ಈಗಾಗಲೇ ಇರುವಂತಹ ಅಂತಹ ಆಪ್ರಾಪ್ತರ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಸಂಬಂಧಿಸಿದ ಸಾಮಾಜಿಕ ಜಾಲತಾಣಗಳ ಈಮಧ್ಯೆ, ಶಿಕ್ಷಣ ಕ್ಷೇತ್ರವೂ ಸ್ಟಾರ್ಟ್ ಆಗುತ್ತಿದೆ. ಈಗಾಗಲೇ ಬಹುತೇಕ ಖಾಸಗಿ ಶಾಲೆಗಳು ತಮ್ಮದೇ ಆದ ಗೂಗಲ್ ಸ್ಟಾರ್ಟ್ ಕ್ಲಾಸ್‌ಗಳು, ಶೈಕ್ಷಣಿಕ ಆ್ಯಪ್‌ಗಳು, ಪೋಷಕರ ವಾಟ್ಸ್ ಅಪ್ ಗ್ರೂಪ್ ಗಳನ್ನು ರಚಿಸಿಕೊಂಡು ಶೈಕ್ಷಣಿಕ ಉದ್ದೇಶಕ್ಕೆ ಬಳಕೆ ಮಾಡುತ್ತಿವೆ. ಅಂತಹ ಕೆಲವು ಅಂದರೆ ವಿದ್ಯಾರ್ಥಿಗಳ ಕಲಿಕೆ, ಬೋಧನಾ ಚಟುವಟಿಕೆಗಳಿಗೆ ಪೂರಕ ಹಾಗೂ ಸಹಕಾರಿಯಾದ ಆ್ಯಪ್, ಸಾಮಾಜಿಕ ಜಾಲತಾಣಗಳ ಬಳಕೆಯನ್ನು 16 ವರ್ಷದೊಳಗಿನ ಮಕ್ಕಳು ಬಳಕೆಗೆ ನಿರ್ಬಂಧ ಇರುವುದಿಲ್ಲ, ಆದರೆ, ಅದೂ ಕೂಡ ಅವರ ತಂದೆ ತಾಯಿಯ ಅಥವಾ ಪೋಷಕರ ಮೊಬೈಲ್‌ನಲ್ಲಿ ಕಾಲಮಿತಿಯಲ್ಲಿ ಬಳಸಲು ಅವಕಾಶ ನೀಡಬೇಕೆಂದು ಸೂಚಿಸುವ ಇರಾದೆ ಸರ್ಕಾರದ್ದಾಗಿದೆ ಎಂದು ತಿಳಿದು ಬಂದಿದೆ.

ಮಾದಕ ವಸ್ತು ವ್ಯಸನ ತಡೆಗೆ ಶಿಕ್ಷಣ ಜಾಗೃತಿ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಮಾರಾಟ ಮತ್ತು ಮಕ್ಕಳು ವ್ಯಸನಕ್ಕೆ ಒಳಗಾಗುವು ದನ್ನು ತಪ್ಪಿಸಲು ಬಜೆಟ್‌ನಲ್ಲಿ ಜಾಗೃತಿ ಶಿಕ್ಷಣದ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಮತ್ತು ವ್ಯಕ್ತಿತ್ವ ರೂಪಿಸುವ ಸ್ಥಳವಾಗಿರುವ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ ಕ್ರಮ, ಕಠಿಣ ನಿಯಮ ಹಾಗೂ ಸಹಾಯ ಕೇಂದ್ರಗಳ ಮೂಲಕ ಮಾದಕ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಖಾಲಿ‌ ಇರುವ ಹುದ್ದೆಗೆ ಭರ್ತಿ, ನೇಮಕಾತಿಗೆ ಅಕ್ರಮ ತಡೆ ಆಗ್ರಹ

ಪರೀಕ್ಷಾ ಮುಗಿದ ದಿನವೇ ಫಲಿತಾಂಶ ಪ್ರಕಟಿಸಿದ ಮಹಿಳಾ ಸರ್ಕಾರಿ ಕಾಲೇಜು( ಸ್ವಾಯತ್ತ ) ಮಂಡ್ಯ

ಪರಿಸರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಸಾಮಾಜಿಕ ಜವಾಬ್ದಾರಿ‌ – ಡಾ. ಕುಮಾರ

Leave a Comment