NEWS

ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್‌

ಪಾಲನೆ ನ್ಯೂಸ್

ಚೆನ್ನೈ: ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅವರು ಬುಧವಾರ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರನ್ನು ಭೇಟಿ ಮಾಡಿ, ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

ಮಧ್ಯಾಹ್ನ 3.30ರ ಸುಮಾರಿಗೆ ಲೋಕಭವನಕ್ಕೆ ಆಗಮಿಸಿದ ವಿಜಯ್, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕ‌ರ್ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ಮನವಿ ಪತ್ರ ಸಲ್ಲಿಸಿದರು. ಸರ್ಕಾರ ರಚನೆ ವಿಷಯದ ಬಗ್ಗೆ ಟಿವಿಕೆ ಸಂಸ್ಥಾ ಪಕ ವಿಜಯ್ ಅವರು ಹೊಸ ಪತ್ರ ಬರೆದಿದ್ದಾರೆ ಮತ್ತು ಮೇ 7ರಂದು ಬೆಳಗ್ಗೆ 11.30ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಡೆಸುವಂತೆ ರಾಜ್ಯಪಾಲರನ್ನು ವಿನಂತಿಸಿದ್ದಾರೆ ಎಂದು ಟಿವಿಕೆ ಮೂಲವೊಂದು ತಿಳಿಸಿದೆ. ಚೆನ್ನೈನ ನೆಹರೂ ಕ್ರೀಡಾಂ ಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿವೆಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕ ಸ್ವಾಗತಿಸಿದ ವಿಜಯ್: ಟಿವಿಕೆ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಶಾಸಕರಿಗೆ ಪಕ್ಷದ ಮುಖ್ಯಸ್ಥ ಮತ್ತು ನಿಯೋಜಿತ ಮುಖ್ಯಮಂತ್ರಿ ವಿಜಯ್ ಅವರು ಹೂಮಾಲೆ ಮತ್ತು ರೇಷ್ಮೆ ಶಾಲುಗಳನ್ನು ಹೊದಿಸಿ ಸ್ವಾಗತಿಸಿದರು. ತಮಿಳುನಾಡು ಕಾಂಗ್ರೆಸ್ ಪ್ರಭಾರಿ ಗಿರೀಶ್ ಚೋಡಂಕರ್ ಸಹಿ ಮಾಡಿದ ಪತ್ರದಲ್ಲಿ, ರಾಜ್ಯದ ಜನತೆ ವಿಜಯ್ ನೇತೃತ್ವದ ಟಿವಿಕೆಗೆ ಸ್ಪಷ್ಟ, ಬಲವಾದ ಮತ್ತು ಭಾರೀ ತೀರ್ಪು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಖಾಸಗಿ ಹಾಸ್ಟೆಲ್‌ನಲ್ಲಿ ಘಟನೆ 7 ಮಂದಿ ಗಂಭೀರ; ಭದ್ರತಾ ಸಿಬ್ಬಂದಿ ಬೆದರಿಸಿ ಪರಾರಿ

ಬಂಗಾರ ₹200, ಬೆಳ್ಳಿ ₹3,000 ಇಳಿಕೆ

ಬೂದನೂರು ಉತ್ಸವದಲ್ಲಿ ಹೆಲಿಟೂರಿಸಂಗೆ ಚಾಲನೆ

Leave a Comment