NEWS

ಕೂಳಗೆರೆ ಗ್ರಾ.ಪಂಗೆ ಕೃಷಿಕೂಲಿಕಾರರ ಸಂಘದ ಪದಾಧಿಕಾರಿಗಳು ಮುತ್ತಿಗೆ ಹಾಕಿ ವಿವಿಧಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.

ಪಾಲನೆ ನ್ಯೂಸ್

ಭಾರತೀನಗರ : ಈ ಸಂದರ್ಭದಲ್ಲಿ ಕೃಷಿಕೂಲಿಕಾರರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಪಿ. ಅರುಣ್‌ಕುಮಾರ್ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಸರ್ಕಾರ ತೆಗೆದುಹಾಕಿ ಕೂಲಿಕಾರರನ್ನು ವಂಚಿಸುತ್ತಿದೆ. ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಯೋಜನೆಯನ್ನು ಜಾರಿಗೆ ತಂದಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು. ಇದು ಕೂಲಿಕಾರರಿಗೆ ವಿರೋಧವಾಗಿದೆ. ಈ ಕೂಡಲೇ ಕೂಲಿಕಾರರಿಗೆ ಅಗತ್ಯವಿರುವ ಸೌಲಭ್ಯಗಳನ್ನು
ನೀಡಬೇಕೆಂದು ಆಗ್ರಹಿಸಿದರು.


ದೇಶದ ರೈತ ಕಾರ್ಮಿಕರನ್ನು ನಾಶಪಡಿಸಲು ಉದ್ಯೋಗ ಖಾತರಿ ಯೋಜನೆಯನ್ನು ತೆಗೆದುಹಾಕಿದ್ದಾರೆ. ಇದಕ್ಕೆ ಕೇಂದ್ರದ ಬಿಜೆಪಿ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಕಿಡಿ ಕಾರಿದರು. ಇತ್ತೀಚಿನ ದಿನಗಳಲ್ಲಿ ಬಡ ಹಾಗೂ ಮದ್ಯಮ ವರ್ಗದ ಜನರು ಬದುಕು ನಡೆಸುವುದೇ ಕಷ್ಟಸಾಧ್ಯವಾಗಿದ್ದು ಉಳ್ಳುವರಿಗಾಗಿ ಇರುವ ಕೇಂದ್ರ ಸರ್ಕಾರ ನೊಂದವರ ನೆರವಿಗೆ ಧಾವಿಸುವ
ಮೂಲಕ ದಿನ ಬಳಕೆ ಪದಾರ್ಥಗಳ ಬೆಲೆ ಕಡಿತಕ್ಕೆ ಕ್ರಮವಹಿಸಬೇಕೆಂದರು.


ಮೂಲಭೂತ ಸೌಕರ್ಯ : ಕೂಳಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಚರಂಡಿ ದುರಸ್ಥಿ ಪಡಿಸಬೇಕು. ರಸ್ತೆಗಳನ್ನು ಅಭಿವೃದ್ದಿ ಪಡಿಸಬೇಕು. ಜೊತೆಗೆ ಮೂಲಭೂತ ಸೌಕರ್ಯಗಳನ್ನು
ಕೊಡುವಲ್ಲಿ ಮುಂದಾಗಬೇಕೆಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಆಗ್ರಹಿಸಿದರು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ಕೃಷಿಕೂಲಿಕಾರರ ಸಂಘದ ಪದಾಧಿಕಾರಿಗಳಾದ ಸಿದ್ದರಾಜು, ಜಗದೀಶ್, ಮಲ್ಲೇಗೌಡ, ಆನಂದ್, ಪ್ರೀಯಾಂಕ, ರತ್ನಮ್ಮ, ಪ್ರಶಾಂತ್, ರಾಮಲಿಂಗೇಗೌಡ, ಸುಮಿತ್ರ, ದೇವರಾಜು, ಸುಶ್ಮಿತ ಸೇರಿದಂತೆ ಹಲವರು ಭಾಗವಹಿಸಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಎನ್ ಕೌಂಟರ್‌ : 14 ನಕ್ಸಲರ ಹತ್ಯೆ

ಅಖಿಲ ಭಾರತ ಸಾರ್ವತ್ರಿಕ ಮುಷ್ಕರಬೆಂಬಲಿಸಿ ಆಶಾ ಕರ‍್ಯಕರ್ತೆಯರ ಪ್ರತಿಭಟನೆ

ಪುಸ್ತಕದ ಮನೆ ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ

Leave a Comment