NEWS

‘ಪತ್ರಿಕೋದ್ಯಮ ಸಮಾಜದ ಆಧಾರ ಸ್ತಂಭ’ – ಪ್ರೊ.ವಿ.ಷಣ್ಮುಗಂ ಅಭಿಮತ

ಪಾಲನೆ ನ್ಯೂಸ್

ಮೈಸೂರು: ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ರೂಸಾ 2.0 ಯೋಜನೆಯ ಅಡಿಯಲ್ಲಿ ‘ವೃತ್ತಿ ಅವಕಾಶಗಳು ಮತ್ತು ಉದ್ಯೋಗಾರ್ಹತಾ ಕೌಶಲಗಳು’ ವಿಷಯ ಕುರಿತು ಕಾಲೇಜಿನ ಜೂನಿಯರ್ ಬಿಎ ಹಾಲ್‌ನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ‌

ಕಾರ್ಯಾಗಾರ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಷಣ್ಣುಗಂ ಮಾತನಾಡಿ, ಭಾಷೆಯ ಮೇಲೆ ದೃಢವಾದ ಹಿಡಿತ ಮತ್ತು ಕೌಶಲಾಭಿವೃದ್ಧಿ ವಿದ್ಯಾರ್ಥಿಗಳ ವೃತ್ತಿ ಜೀವನದಲ್ಲಿ ಯಶಸ್ಸಿನ ಪ್ರಮುಖ ಅಂಶಗಳಾಗಿವೆ. ಪತ್ರಿಕೋದ್ಯಮವು ಸಮಾಜದ ದಿಕ್ಕನ್ನು ರೂಪಿಸುವ ಶಕ್ತಿಯುತ ಮಾಧ್ಯಮವಾಗಿದ್ದು, ಉತ್ತಮ ಪತ್ರಿಕೆಗಳು ಜನಮನವನ್ನು ಸೆಳೆಯುವ ಮೂಲಕ ಸಮಾಜವನ್ನು ಸಕಾರಾತ್ಮಕವಾಗಿ ರೂಪಿಸುತ್ತವೆ.

ಜವಾಬ್ದಾರಿಯುತ ಪತ್ರಿಕೋದ್ಯಮವು ರಾಷ್ಟ್ರದ ಅಭಿವೃದ್ದಿಗೆ ಪ್ರಮುಖ ಅಧಾರವಾಗಿದೆ ಎಂದರು. ಮೈಸೂರು ವಿಶ್ವವಿದ್ಯಾನಿಲಯದ ಐಕ್ಯೂಎಸಿ ಸಂಯೋಜಕ ಡಾ.ಜೆ.ಲೋಹಿತ್, ಪತ್ರಿಕೋದ್ಯಮ ಮೈಸೂರಿನ ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ರೂಪಾ 2.0 ಯೋಜನೆಯ ಅಡಿಯಲ್ಲಿ ‘ವೃತ್ತಿ ಅವಕಾಶಗಳು ಮತ್ತು ಉದ್ಯೋಗಾರ್ಹತಾ ಕೌಶಲಗಳು’ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪ್ರಾಂಶುಪಾಲ ಪ್ರೊ.ವಿ.ಷಣ್ಣುಗಂ ಮಾತನಾಡಿದರು. ವಿದ್ಯಾರ್ಥಿಗಳಿಗೆ ಭಾಷಾ ಪ್ರಾವೀಣ್ಯತೆ ಮತ್ತು ಪರಿಣಾಮಕಾರಿ ಸಂವಹನ ಕೌಶಲಗಳ ಅಗತ್ಯತೆಯನ್ನು ವಿವರಿಸಿದರು.

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೆಶಕ ಜಿ.ಜಡಿಯಪ್ಪ ಮಾತನಾಡಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಲಭ್ಯವಿರುವ ವಿವಿಧ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಡಾ.ಗೋಪಾಲ, ಡಾ.ಶ್ವೇತಾ ಎಂ. ಹನ್ಸ್, ಕೇಶವಮೂರ್ತಿ, ಡಾ.ಎನ್.ನವೀನ್ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸಂವಹನ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ. ಅದು ವ್ಯಕ್ತಿತ್ವ ವಿಕಸನಕ್ಕೂ ದಾರಿಯಾಗುತ್ತದೆ.

ವೃತ್ತಿ ಕೌಶಲಗಳನ್ನು ಓದಿನ ಹಂತದಲ್ಲೇ ಕರಗತ ಮಾಡಿಕೊಳ್ಳಬೇಕು. ಪತ್ರಿಕೋದ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಜವಾಬ್ದಾರಿಯುತ ಪತ್ರಕರ್ತರಾಗಲು ವಿದ್ಯಾರ್ಥಿಗಳು ಮುಂದಡಿ ಇಡಬೇಕು. # ಪ್ರೊ.ವಿ.ಹಣ್ಣುಗಂ ಮತ್ತಿತರರು ಹಾಜರಿದ್ದರು. ತತ್ವಶಾಸ್ತ್ರ ವಿಭಾಗದ ಅಧ್ಯಾಪಕ ಡಾ.ಕೆ.ಎನ್.ಬಸವರಾಜು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಯೋಗಶ್ರೀ ಮತ್ತು ಚಂದ್ರಕಲಾ ಪ್ರಾರ್ಥಿಸಿದರು. ಮಹದೇವ ಪ್ರಸಾದ್ ಸ್ವಾಗತಿಸಿದರು. ನಂದೀಶ ವಂದಿಸಿದರು, ಎಂ.ಕೆ. ಕೀರ್ತನಾ ಮತ್ತು ಪಿ.ದೀಕ್ಷಾ ನಿರೂಪಿಸಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

‘ಬಾಸ್’ ಸಿನಿಮಾ ಮರು ಬಿಡುಗಡೆಗೆ ತಡೆಯಾಜ್ಞೆ

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ ಮಹಿಳೆಯರಿಗೆ ರೂ.2123 ಕೋಟಿ ಅನುದಾನ ಬಿಡುಗಡೆ : ಚಿಕ್ಕಲಿಂಗಯ್ಯ

ಚಿನ್ನದ ಬೆಲೆಯಲ್ಲಿ ಕುಸಿತ

Leave a Comment