ಸಮಾಜದ ಅಸ್ಪೃಶ್ಯತೆ ಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ರವರ ಕೊಡುಗೆ ಅಪಾರ ಡಾ. ಕುಮಾರ
ಪಾಲನೆ ನ್ಯೂಸ್
ಮಂಡ್ಯ : ಡಾ. ಬಾಬು ಜಗಜೀವನ್ ರಾಂ ರವರ ಚಿಂತನೆಗಳನ್ನು ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಅವರ ಚಿಂತನೆ, ಆದರ್ಶ, ಮೌಲ್ಯಗಳನ್ನು ತಿಳಿಸುವಂತಹ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ರವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ॥ ಬಿ.ಆರ್.ಅಂಬೇಡ್ಕರ್ ರವರ ಭವನದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಂ ರವರ 119ನೇ ಜನ್ಮದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಬಾಬು ಜಗಜೀವನ್ ರಾಂ ಮತ್ತು ಡಾ. ಬಿಆರ್ ಅಂಬೇಡ್ಕರ್ ರವರು ಸಮಾಜದಲ್ಲಿ ಜಾತಿಯತೆ ಮತ್ತು ಅಸ್ಪೃಶ್ಯತೆ , ಅಸಮಾನತೆ ಶೋಷಣೆ ವಿರುದ್ಧ ಸಾಮಾಜಿಕ ಪರಿಕಲ್ಪನೆಯನ್ನು ಮೂಲಕ ಶೋಷಿತರ ಪರವಾಗಿ ಸಾಮಾಜಿಕ ಪರವಾಗಿ ಶ್ರಮಿಸಿದವರು ಇಬ್ಬರು ಮಹನೀಯರು ಎಂದು ತಿಳಿಸಿದರು.
ಸಾಮಾಜಿಕ ಸಮಾನತೆ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಬಾಬುಜಿ ಅವರು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಹೋರಾಡಿದರು ಹಾಗೂ ದೇವಸ್ಥಾನಗಳಿಗೆ ಪ್ರವೇಶ ಮತ್ತು ಸಾರ್ವಜನಿಕ ಬಾವಿಗಳಿಂದ ನೀರು ಪಡೆಯುವ ಹಕ್ಕಿಗಾಗಿ ಅವರು ದ್ವನಿ ಎತ್ತಿದ್ದರು ಅವರು ಎಂದು ತಿಳಿಸಿದರು.

ಡಾ. ಬಾಬು ಜಗಜೀವನ್ ರಾಂ ಅವರ ಚೇತನ ಶಕ್ತಿ ವಿಶೇಷವಾದದ್ದು,ಇವರು 198 ಏಪ್ರಿಲ್ 5 ರಂದು ಶೋಷಿತ ಕುಟುಂಬದಲ್ಲಿ ಜನಿಸಿದವರು. ಇವರು ದಲಿತರ ಶೋಷಣೆ ವಿರುದ್ಧ ಶೋಷಿತರ ಪರವಾಗಿ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಧ್ವನಿಯತ್ತಿದವರು. ಬಾಬೂಜಿ ಅವರು ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಇವರು ಸಚಿವರಾಗಿ, ಭಾರತದ ಉಪ ಪ್ರಧಾನಿಯಾಗಿ, ಹಸಿರು ಕ್ರಾಂತಿ ಹರಿಕಾರರಾಗಿ ಹೊರಹೊಮ್ಮಿದ್ದರು. ಅವರು ಕಾರ್ಮಿಕ ಕ್ಷೇತ್ರದಲ್ಲಿ ಕೈಗೊಂಡ ನಿರ್ಣಯಗಳು ಇಂದಿಗೂ ಸ್ಮರಣೀಯವಾಗಿವೆ’ಎಂದು ತಿಳಿಸಿದರು.
1952 ರಲ್ಲಿ ಪ್ರಥಮ ಚುನಾವಣೆಯಾದ ನಂತರ ಬಾಬೂಜಿ ರವರು ಅತಿ ಹೆಚ್ಚು ಅವಧಿಗೆ ಸತತವಾಗಿ ಸಂಸದರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರು ಕೃಷಿ ಸಚಿವರಾಗಿ ರಕ್ಷಣಾ ಸಚಿವರಾಗಿ ಕಾರ್ಮಿಕ ಸಚಿವರಾಗಿ ರೈಲ್ವೆ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಭಾರತದಲ್ಲಿ ಹಸಿರು ಕ್ರಾಂತಿಯನ್ನು ಉತ್ತೇಜಿಸಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣರದವರು ಹಾಗೂ ಕಾರ್ಮಿಕರಿಗೆ ಹೆಚ್ಚು ಹೊತ್ತು ನೀಡುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಕಲ್ಯಾಣ ಕ್ರಾಂತಿಯನ್ನು ಹಾಕಿಕೊಟ್ಟವರು. ಕಾರ್ಮಿಕರಿಗಾಗಿ ಹಲವು ಕಾರ್ಮಿಕ ಕಾಯ್ದೆಗಳನ್ನು ತಂದವರು ಡಾ. ಬಾಬು ಜಗಜೀವನ್ ರಾಂ ರವರನ್ನು ಕಾರ್ಮಿಕರ ಕಾಯ್ದೆಗಳ ಶಿಲ್ಪಿ ಎಂದು ಸಹ ಕರೆಯುತ್ತಾರೆ ಎಂದು ತಿಳಿಸಿದರು.
ಮಂಡ್ಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮಂಜು ಅವರು ಮಾತನಾಡಿ ಬಾಬೂಜಿ’ ಎಂದು ಜನಪ್ರಿಯರಾಗಿರುವ ಡಾ. ಬಾಬು ಜಗಜೀವನ್ ರಾಂ ಅವರು ಭಾರತದ ಮಾಜಿ ಉಪ ಪ್ರಧಾನಿ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ದಲಿತ ಸಮುದಾಯದ ನಾಯಕರಾಗಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದರು. ಭಾರತ ಸರ್ಕಾರದ ವಿವಿಧ ಸಚಿವ ಸ್ಥಾನಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಕೀರ್ತಿ ಅವರಿಗೆ ಸಲ್ಲಿಸುತ್ತದೆ ಎಂದು ಅವರು ತಿಳಿಸಿದರು.

ಬಾಬೂಜಿ’ ಎಂದೇ ಜನಪ್ರಿಯವಾಗಿರುವ ದಲಿತ ನಾಯಕ ಜಗಜೀವನ್ ರಾಮ್ ರವರು 1908 ರ ಏಪ್ರಿಲ್ 5 ರಂದು ಬಿಹಾರದಲ್ಲಿ ಜನಿಸಿದರು . ಇವರು ಜಾತಿ ವ್ಯವಸ್ಥೆ ಹೋಗಲಾಡಿಸುವ ನಿಟ್ಟಿನಲ್ಲಿ ಸಾಮಾಜಿಕವಾಗಿ ಅಸ್ಪೃಶ್ಯತೆ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡಿದ ಇವರು ಕೊಡುಗೆ ಅಪಾರ ಎಂದು ತಿಳಿಸಿದರು.

ಬಾಬೂಜಿ ರವರ ಸಾಮಾಜಿಕ ಚಿಂತನೆಗಳು ಆದರ್ಶ ಮೌಲ್ಯಗಳು ಮುಂದಿನ ಪೀಳಿಗೆಯು ಅಳವಡಿಸಿಕೊಂಡು ಜಾತೀಯತೆ, ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬದುಕಬೇಕು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಡಾ. ಬಾಬು ಜಗಜೀವನ್ ರಾಂ ಅವರ 119ನೇ ಜನ್ಮದಿನಾಚರಣೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಉದ್ಯಾನವನದಲ್ಲಿರುವ ಅವರ ಪ್ರತಿಮೆಗೆ ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಪಿ. ರವಿಕುಮಾರ್ ಅವರು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ ಡಾ.ಬಾಬು ಜಗಜೀವನ್ ರಾಂ ರವರ ಬೆಳ್ಳಿರಥ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ತಿಮ್ಮಯ್ಯ, ಉಪ ವಿಭಾಗ ಅಧಿಕಾರಿ ಶಿವಮೂರ್ತಿ, ತಹಸಿಲ್ದಾರ್ ವಿಶ್ವನಾಥ್ ರವರು ಮೂಡ ಅಧ್ಯಕ್ಷರು ಬಿ. ಪಿ. ಪ್ರಕಾಶ್, ಮುಖಂಡರುಗಳಾದ ಚಂದ್ರಶೇಖರ್, ಕೃಷ್ಣ, ಪಾಪಯ್ಯ,ಅನ್ನದಾನಿ, ಟಿ. ಸಿ. ಗುರಪ್ಪ ರವರು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
