NEWS

ರಾಜಕೀಯದಲ್ಲಿ ‘ಫ್ರೀಬೀಸ್’ ಸಂಸ್ಕೃತಿ ಹೆಚ್ಚುತ್ತಿರುವುದನ್ನು ಖಂಡಿಸಿದ ಸುಪ್ರೀಂ ಕೋರ್ಟ್

ಪಾಲನೆ ನ್ಯೂಸ್

ನವದೆಹಲಿ: ಉಚಿತ ಸಂಸ್ಕೃತಿ ಬಿಡಿ ಉದ್ಯೋಗ ಸೃಷ್ಟಿಸಿ ಕೊಡಿ ಉಚಿತ ಕೊಡುಗೆಗಳಿಗೆ ಸುಪ್ರೀಂ ಖಂಡನೆ, ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವ ಇಂತಹ ನೀತಿಗಳನ್ನು ಪುನರ್ವಿಮರ್ಶಿಸುವ ಸಮಯ ಬಂದಿದೆ ಎಂದು ಗುರುವಾರ ಹೇಳಿದೆ.

ಗ್ರಾಹಕರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲರಿಗೂ ಉಚಿತ ವಿದ್ಯುತ್ ಒದಗಿಸಲು ಮುಂದಾಗಿರುವ ತಮಿಳುನಾಡು ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್‌ನ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಸುಪ್ರೀಂ ಪೀಠ, ರಾಜ್ಯಗಳು ಬಡವರನ್ನು ಬೆಂಬಲಿಸುವುದು ಅರ್ಥ ವಾಗುವಂತಹದ್ದು. ಆದರೆ ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪು ಎಂದು ಹೇಳಿದೆ.

ದೇಶದ ಹೆಚ್ಚಿನ ರಾಜ್ಯಗಳು ಆದಾಯ ಕೊರತೆಯನ್ನು ಎದುರಿಸುತ್ತಿದೆ. ಆದರೂ ಅವು ಅಭಿವೃದ್ಧಿಗೆ ಬದಲಾಗಿ ಉಚಿತ ಕೊಡುಗೆಗಳನ್ನು ನೀಡುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ತಲ್ಯ ಬಾಗ್ನಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠ ಹೇಳಿದೆ.

ಈ ರೀತಿಯ ದೊಡ್ಡ ದೊಡ್ಡ ಉಚಿತ ಕೊಡುಗೆಗಳಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ರಾಜ್ಯ ಸರ್ಕಾರಗಳು ಎಲ್ಲರಿಗೂ ಉಚಿತ ಆಹಾರ, ಸೈಕಲ್‌ಗಳು, ವಿದ್ಯುತ್ ನೀಡುವ ಬದಲು ಉದ್ಯೋಗ ಒದಗಿಸುವ ಮಾರ್ಗಗಳನ್ನು ಹುಡುಕಬೇಕು ಎಂದು ಪೀಠ ಸಲಹೆ ನೀಡಿದೆ. ಭಾರತದಲ್ಲಿ ನಾವು ಯಾವ ರೀತಿಯ ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆ? ವಿದ್ಯುತ್ ಶುಲ್ಕವನ್ನು ಪಾವತಿಸಲು ಅಸಮರ್ಥರಾಗಿರು ವವರಿಗೆ ಕಲ್ಯಾಣ ಕ್ರಮದ ಭಾಗವಾಗಿ ನೀವು ವಿದ್ಯುತ್ ಒದಗಿಸಲು ಬಯಸುತ್ತೀರಿ ಎಂಬುದು ಅರ್ಥವಾಗುವಂತಹದ್ದೆ ಎಂದು ಪೀಠ ಹೇಳಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಜಿಲ್ಲಾಧಿಕಾರಿಗಳು ಕೆ.ಆರ್. ಪೇಟೆ ಇಂದಿರಾ ಕ್ಯಾಂಟೀನ್ ಅನಿರೀಕ್ಷಿತ ಪರಿಶೀಲನೆ

ಪ್ರಧಾನಿ ಮೋದಿ ಮತ್ತು ನನಗೆ ‘ಪತ್ನಿ ಸಮಸ್ಯೆ’ ಇಲ್ಲ’ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಸ್ಯ

Leave a Comment