ಪಾಲನೆ ನ್ಯೂಸ್
ಮಂಡ್ಯ : ವರ್ಧಮಾನ ಮಹಾವೀರ ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರಗಿದ್ದು ಇವರು ಕ್ರಿ.ಪೂ. 6ನೇ ಶತಮಾನದಲ್ಲಿ ಬಿಹಾರದ ಕುಂದಗ್ರಾಮದಲ್ಲಿ ಜನಿಸಿದವರು. ಇವರು ತ್ಯಾಗ ಮತ್ತು ಅಹಿಂಸೆಯ ಪ್ರತಿಪಾದಕರು ಯುವ ಪೀಳಿಗೆಯೂ ಮಹಾವೀರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಮಂಡ್ಯ ವಿಧಾನಸಭಾ ಶಾಸಕರಾದ ಪಿ. ರವಿಕುಮಾರ್ ರವರು ಹೇಳಿದರು.
ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಮಹಾವೀರ ಭವನದಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಮಹಾವೀರರ ಪ್ರತಿಮೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿದ್ಧಾರ್ಥ ಮತ್ತು ತ್ರಿಶುಲಾ ದೇವಿಯ ಪುತ್ರರಾದ ಇವರು, 30ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ, 12 ವರ್ಷಗಳ ತೀವ್ರ ತಪಸ್ಸಿನ ನಂತರ ‘ಕೇವಲ ಜ್ಞಾನ’ (ಸರ್ವಜ್ಞತ್ವ) ಪಡೆದರು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳನ್ನು ಬೋಧಿಸಿದರು ಎಂದು ತಿಳಿಸಿದರು.
ಯುವ ಪೀಳಿಗೆಯ ಮಹಾವೀರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಹಾದಿಯಲ್ಲಿ ನಡೆದು ಸಮಾಜದ ಶಾಂತಿಯನ್ನು ಕಾಪಾಡು ನಿಟ್ಟಿನಲ್ಲಿ ಬದುಕಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಮಾತನಾಡಿ ಮಹಾವೀರರ ಆದರ್ಶ, ಚಿಂತನೆ, ಬೋಧನೆಗಳನ್ನು ಸಮಾಜಕ್ಕೆ ಅತ್ಯವಶ್ಯಕವಾಗಿದ್ದು ಮಕ್ಕಳು ಮಹಾವೀರರ ಆದರ್ಶ,ಚಿಂತನೆ, ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಜೈನ ಧರ್ಮದ ಮೌಲ್ಯಗಳನ್ನು ಪಂಪ,ರನ್ನ, ಪೊನ್ನ ರವರು ಕವಿಗಳು ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿರುವಂತಹ ಕೊಡುಗೆಗಳು ಅಪಾರವಾಗಿದೆ. ಅವರ ಆದರ್ಶ ಚಿಂತನೆಗಳನ್ನು ಬೆಳಿಸಿಕೊಳ್ಳಬೇಕು ಎಂದು ಹೇಳಿದರು.
ಜೈನ ಧರ್ಮ ಪವಿತ್ರ ಧರ್ಮವಾಗಿದೆ ಶಾಂತಿ ಮತ್ತು ಅಹಿಂಸೆ ಹಾಗೂ ಭಕ್ತಿ,ಶ್ರದ್ಧೆಯಿಂದ
ಜಗತ್ತನ್ನು ಗೆಲ್ಲಬಹುದು ಎಂಬ ಸಂದೇಶವನ್ನು ಸೂಚಿಸುತ್ತದೆ. ವರ್ಧಮಾನ ಮಹಾವೀರ ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರಗಿದ್ದು ಇವರು ತ್ಯಾಗ ಮತ್ತು ಅಹಿಂಸೆಯ ಪ್ರತಿಪಾದಕರು ಎಂದು ತಿಳಿಸಿದರು.
ಮಹಾವೀರರ ಆದರ್ಶಗಳು ಚಿಂತನೆಗಳು ಬೋಧನೆಗಳು ಶಾಶ್ವತವಾಗಿ ಜಗತ್ತಿನಲ್ಲಿ ಉಳಿದಿವೆ. ಪೋಷಕರು ಮಕ್ಕಳಿಗೆ ಅವರ ಆದರ್ಶ ಚಿಂತನೆಗಳನ್ನು ತಿಳಿಸುವ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಹಾಗೂ ಸಹನೆ ಶಾಂತಿ, ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎಂಬ ಆತ್ಮವಿಶ್ವಾಸವನ್ನು ಬೆಳಸಬೇಕು ಎಂದು ತಿಳಿಸಿದರು.
ಶ್ರೀ ಜ್ವಾಲಾ ಮಾಲಿನಿ ಮಹಿಳಾ ಸಮಾಜದ ವತಿಯಿಂದ
2024 25 ನೇ ಸಾಲಿನ 7ನೇ ತರಗತಿ, ಎಸ್. ಎಸ್. ಎಲ್. ಸಿ, ದ್ವಿತೀಯ ಪಿಯುಸಿ ಹಾಗೂ ಅಂತಿಮ ವರ್ಷದ ಪದವಿಯಲ್ಲಿ 70% ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ನರಸಿಂಹರಾಜಪುರ ಕ್ಷೇತ್ರದ ಪ.ಪೂ ಸ್ವಸ್ತಿ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಕಂಬದಹಳ್ಳಿ ಕ್ಷೇತ್ರದ ಸ್ವಸ್ತಿ ಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಆರತಿಪುರ ಕ್ಷೇತ್ರದ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ರಘುನಂದನ್, ಮುಡಾ ಅಧ್ಯಕ್ಷರಾದ ಬಿ.ಪಿ ಪ್ರಕಾಶ್, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಅಧಿಕಾರಿ ಮಧುಶ್ರೀ, ನಗರಾ ಸಭಾ ಮಾಜಿ ಸದಸ್ಯರು ಶ್ರೀಧರ್, ಸಮುದಾಯದ ಅಧ್ಯಕ್ಷರು ಎಂ. ಬಿ ಶ್ರೀಧರ್, ಸಮುದಾಯದ ಮುಖಂಡರುಗಳಾದ ಶಾಂತಿ ಪ್ರಸಾದ್, ವಿನಯ್ ಕುಮಾರ್, ಮಹೇಂದ್ರ ಬಾಬು ಹಾಗೂ ಧರಣೇಂದ್ರಯ್ಯ ರವರು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
