NEWS

ಬೈರತಿಗೆ ಸಿಐಡಿ ವಶದಲ್ಲೇ ವೈದ್ಯಕೀಯ ಚಿಕಿತ್ಸೆ

ಪಾಲನೆ ನ್ಯೂಸ್

ಬೆಂಗಳೂರು: ರೌಡಿಶೀಟರ್ ಬಿಲ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜ್ ಅವರಿಗೆ ಸಿಐಡಿ ವಶದಲ್ಲೇ ಚಿಕಿತ್ಸೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ.

ಸುಪ್ರೀಂಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬಳಿಕ ಸಿಐಡಿ ಅಧಿಕಾರಿಗಳು ಫೆ.12ರಂದು ಬೈರತಿ ಹಾಗೂ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದರು. ಶುಕ್ರವಾರ ಮಧ್ಯಾಹ್ನ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಬೈರತಿಯನ್ನು ಹಾಜರುಪಡಿಸಿದ್ದರು.

ಆದರೆ, ಬೈರತಿಪರ ವಕೀಲರು, ತಮ್ಮ ಕಕ್ಷಿದಾರರಿಗೆ ಹೃದಯಸಂಬಂಧಿ ಕಾಯಿಲೆ ಇರುವ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೂಚಿಸಬೇಕು ಹಾಗೂ ಆಸ್ಪತ್ರೆಯಿಂದಲೇ ವಿಚಾರಣೆ ನಡೆಸುವಂತೆ ನ್ಯಾಯಾಧೀಶರ ಮುಂದೆ ಮನವಿ ಸಲ್ಲಿಸಿದ್ದರು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಸಿಐಡಿ ಪರ ಎಪಿಪಿ ಅಶೋಕ ನಾಯಕ್, ಇದೊಂದು ಗಂಭೀರ ಪ್ರಕರಣವಾಗಿದೆ. ಆರೋಪಿಯನ್ನು ಹೆಚ್ಚುವರಿ ವಿಚಾರಣೆ ನಡೆಸುವುದು ಬಾಕಿ ಇದೆ.

ಮತ್ತೊಬ್ಬ ಆರೋಪಿ ಬಂಧನ ಆದ್ದರಿಂದ ಎರಡು ವಾರಗಳ ಕಾಲ ಕಸ್ಟಡಿಗೆ ನೀಡಬೇಕು ಎಂದು ವಾದಿಸಿದರು. ಬಳಿಕ ನ್ಯಾಯಾಲಯ ಆರೋಪಿ ಬೈರತಿ ಬಸವರಾಜ್ ಅವರನ್ನು సిఐడి ಅಧಿಕಾರಿಗಳು ಸೂಕ್ತ ಚಿಕಿತ್ಸೆಗೆ ಕೊಡಿಸಿ ಇಂದು (ಫೆ.14) ಕೋರಮಂಗಲದಲ್ಲಿರುವ ತಮ್ಮ ಹಾಜರುಪಡಿಸಬೇಕು ಎಂದು ನಿವಾಸಕ್ಕೆ ನ್ಯಾಯಾಧೀಶರು ಸೂಚಿಸಿದರು.

ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ: ನ್ಯಾಯಾಲಯ ಸೂಚನೆಯಂತೆ ತನಿಖಾಧಿಕಾರಿ ಡಿವೈಎಸ್‌ಪಿ ಗೌತಮ್ ಅವರು ಹಿರಿಯ ವೈದ್ಯರ ಸಮ್ಮುಖದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಬೈರತಿ ಬಸವರಾಜಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಿದ್ದಾರೆ. ಎಲ್ಲ ತಪಸಾಣೆಯನ್ನು ವೈದ್ಯರು ನಡೆಸಲಿದ್ದಾರೆ.

ಒಂದೇ ದಿನಕ್ಕೆ ತಪಾಸಣೆ ಮುಕ್ತಾಯವಾಗಲಿಲ್ಲ ಎಂದರೆ ಭಾನುವಾರ ನ್ಯಾಯಾಧೀಶರ ನಿವಾಸಕ್ಕೆ ಸಿಐಡಿ ಹಾಜರುಪಡಿಸಲಿದೆ ಎನ್ನಲಾಗಿದೆ. ಬೌರಿಂಗ್ ಮತ್ತು ಜಯದೇವ ಆಸ್ಪತ್ರೆಯ ವೈದ್ಯಕೀಯ ವರದಿ ಆಧರಿಸಿ ಭೈರತಿ ಅವರಿಗೆ ಜೈಲು ಸೇರಲಿದ್ದಾರೆಯೇ ಅಥವಾ ಸಿಐಡಿ ವಶಕ್ಕೆ ನೀಡಲಿದ್ದಾರೆ ಎಂಬುದು ತಿಳಿಯಲಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಎಸ್.ಎಸ್.ಎಲ್.ಸಿ. ಪೂರ್ವ ಸಿದ್ದತಾ ಪರೀಕ್ಷೆ ಪರಿಶೀಲಿಸಿದ ಜಿ.ಪಂ. ಸಿಇಓ

ಬಾಲ್ಯವಿವಾಹ ಮುಕ್ತ ಮಂಡ್ಯ ಜಿಲ್ಲೆಯ ಅಭಿಯಾನ

ಮಾರ್ಚ್ 7 ರಂದು ಅಸ್ಪೃಶ್ಯತಾ ನಿವಾರಣೆ ಕುರಿತ ವಿಚಾರ ಸಂಕಿರಣ

Leave a Comment