ಪಾಲನೆ ನ್ಯೂಸ್
ಮಂಡ್ಯ: ಹಳೆಯ ಬೀದಿ ದೀಪಗಳನ್ನು ಎಲ್.ಇ.ಡಿ. (LED) ದೀಪಗಳಾಗಿ ಬದಲಾಯಿಸುವುದು ಶಕ್ತಿ ಉಳಿತಾಯ, ಕಡಿಮೆ ನಿರ್ವಹಣಾ ವೆಚ್ಚ, ಮತ್ತು ದೀರ್ಘಾವಧಿಯ ಬಾಳಿಕೆಗೆ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ವ್ಯಾಪ್ತಿಯ 8 ನಗರ ಸ್ಥಳೀಯ ಸಂಸ್ಥೆಗಳ ಸಾಂಪ್ರದಾಯಿಕ ಬೀದಿ ದೀಪಗಳಿಂದ ಎಲ್.ಇ.ಡಿ ಬೀದಿ ದೀಪಗಳಗೆ ಬದಲಾಯಿಸಿ ಮಿತವ್ಯಯ ಸಾಧಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಹೇಳಿದರು.
ಇಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಲಿ ಇರುವ ಬೀದಿ ದೀಪಗಳನ್ನು ಬದಲಾಯಿಸಿ ಸಾಂಪ್ರದಾಯಿಕ ಇಂಧನ ಕ್ಷಮತೆಯ ಎಲ್.ಇ.ಡಿ ದೀಪಗಳನ್ನು ಕೇಂದ್ರೀಕೃತ (ಸಿಸಿಎಂಎಸ್) ಚಾಲನೆ ಮತ್ತು ನಿರ್ವಹಣೆ ಯೋಜನೆ ಸಂಬಂಧ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಹಳೆಯ ಬೀದಿ ದೀಪಗಳನ್ನು ಎಲ್.ಇ.ಡಿ. (LED) ದೀಪಗಳಾಗಿ ಬದಲಾಯಿಸುವುದು ಶಕ್ತಿ ಉಳಿತಾಯ, ಕಡಿಮೆ ನಿರ್ವಹಣಾ ವೆಚ್ಚ, ಮತ್ತು ದೀರ್ಘಾವಧಿಯ ಬಾಳಿಕೆಗೆ ನೆರವಾಗುತ್ತದೆ ಎಂದು ತಿಳಿಸಿದರು.
ಯೋಜನೆ ವ್ಯಾಪ್ತಿಯಲ್ಲಿ ಒಟ್ಟು 15, 593 ಸಾವಿರದ ಸಾಂಪ್ರದಾಯಿಕ ಬೀದಿ ದೀಪಗಳನ್ನು ಎಲ್.ಇ.ಡಿ ದೀಪಗಳಿಗೆ ಬದಲಾಯಿಸಬೇಕು. 8. 5 ಸಾವಿರ ಹೊಸ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಬೇಕು ಹಾಗೂ 7 ವರ್ಷದ ಅವಧಿಗೆ ಬೀದಿ ದೀಪಗಳನ್ನು ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.

ಯೋಜನಾ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆಯ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಬೇಕು. ಬೀದಿ ದೀಪಗಳ ನಿರ್ವಹಣೆಯ ರಿಯಲ್ ಟೈಮ್ ಡೇಟಾ ಪಡೆಯುವ ಉದ್ದೇಶದಿಂದ ಸಿಸಿಎಂಎಸ್ (Centralized Control and Monitoring System) ಅಳವಡಿಸಬೇಕು ಎಂದು ಹೇಳಿದರು.

ಹಾಲಿ ನಗರ ಸ್ಥಳೀಯ ಸಂಸ್ಥೆಗಳ ವಾರ್ಷಿಕ 15 ಕೋಟಿಯ ಬೀದಿ ದೀಪಗಳಿಗೆ ಪಾವತಿಸಿದ್ದು ಎಲ್. ಇ. ಡಿ ಅಳವಡಿಸುವ ಯೋಜನೆಯನ್ನು ಅನುಷ್ಠಾನದ ನಂತರ ವಿದ್ಯುತ್ ಬಳಕೆಯಲ್ಲಿ ಸುಮಾರು 58% ಉಳಿತಾಯವಾಗಲಿದೆ.
ಯೋಜನೆ ಅನುಷ್ಠಾನದ ನಂತರ ವಿದ್ಯುತ್ ಬಿಲ್ ನಲ್ಲಿ ಸುಮಾರು 7 ರಿಂದ 8 ಕೋಟಿ ಹಣ ಉಳಿತಾಯವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಹಾಜರಿರುವ ಯೋಜನ ಸಮಾಲೋಚಕರು ಮತ್ತು ಚೆಸ್ಕಾಂ ಹಾಗೂ ನಗರ ಸ್ಥಳೀಯ ಅಧಿಕಾರಿಗಳ ಯೋಜನಾ ಪೂರ್ಣ ವಿವರಗಳನ್ನು ಪಡೆದು ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ಟಿ. ಎನ್. ನರಸಿಂಹಮೂರ್ತಿ, ಕಾರ್ಯಪಾಲಕ ಅಭಿಯಂತರಾದ ಪ್ರತಾಪ್ ರವರು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
