NEWS

ಯಾವುದೇ ಸಮಸ್ಯೆ ಸಂಘರ್ಷದಿಂದ ಬಗೆಹರಿಯದು: ಮೋದಿ

ಪಾಲನೆ ನ್ಯೂಸ್

ನವದೆಹಲಿ: ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ ಸಂಘರ್ಷಗಳಿಗೆ ತ್ವರಿತ ಅಂತ್ಯ ಹಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದು, ಯಾವುದೇ ಸಮಸ್ಯೆಯನ್ನು ಸೇನಾ ಮುಖಾಮುಖಿಯ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಾರತ ಪ್ರವಾಸದಲ್ಲಿರುವ ಫಿನ್ಸೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ಹೈದರಾಬಾದ್ ಹೌಸ್‌ನಲ್ಲಿ ಸುದೀರ್ಘ ಮಾತುಕತೆ ನಡೆಸಿದ ನಂತರ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.

ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾ ಆಗಿರಲಿ, ಸಂಘರ್ಷಗಳ ತ್ವರಿತ ಅಂತ್ಯ ಕಾಣಬೇಕು ಮತ್ತು ಶಾಂತಿಗಾಗಿ ಪ್ರತಿಯೊಂದು ಪ್ರಯತ್ನವನ್ನು ಬೆಂಬಲಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದು ಪ್ರಧಾನಿ ಮೋದಿ ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾತುಕತೆ ವೇಳೆ, ಭಾರತ-ಫಿನ್ಯಾಂಡ್ ಸಂಬಂಧವನ್ನು ಡಿಜಿಟಲೀ ಕರಣ ಮತ್ತು ಸುಸ್ಥಿರತೆ ಕ್ಷೇತ್ರದಲ್ಲಿ ನ್ಯೂಹಾತ್ಮಕ ಪಾಲುದಾರಿಕೆಗೆ ಏರಿಸಲು ಉಭಯ ನಾಯಕರು ಒಪ್ಪಿಕೊಂಡರು.

ಎಐನಿಂದ 6 ಟೆಲಿಕಾಂ, ಶುದ್ಧ ಇಂಧನದಿಂದ ಕ್ವಾಂಟಮ್ ಕಂಪ್ಯೂಟಿಂಗ್‌ವರೆಗಿನ ಈ ಪಾಲುದಾರಿಕೆಯು ಅನೇಕ ಹೈಟೆಕ್ ಕ್ಷೇತ್ರಗಳಲ್ಲಿ ನಮ್ಮ ಸಹಕಾರಕ್ಕೆ ವೇಗ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದರು. ಭಾರತ ಮತ್ತು ಯುರೋಪಿಯನ್ ಯೂನಿ ಯನ್ (ಇಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಮೋದಿ ಹೇಳಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

‘ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು’ ಜೂನ್ ಅಂತ್ಯದೊಳಗೆ ಸಂಚಾರ

ರಷ್ಯಾದಿಂದ ಕಚ್ಚಾ ತೈಲ ಖರೀದಿಗೆ ಭಾರತಕ್ಕೆ 30 ದಿನಗಳವರೆಗೆ ವಿನಾಯಿತಿ: ಅಮೆರಿಕ

ರೈತರ ಬಗೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಪ್ರತಿಭಟನೆ

Leave a Comment