NEWS

ಫೆ.16ರಂದೂ ಬಂದ ಇ-ಮೇಲ್ ಸಂದೇಶದಲ್ಲಿ ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಬೆದರಿಕೆ

ಪಾಲನೆ ನ್ಯೂಸ್

ಮಂಡ್ಯ: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಮತ್ತೆ ಕಿಡಿಗೇಡಿಗಳು ಗುರುವಾರ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದು, ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ. ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಸ್ಫೋಟಿಸುವು ದಾಗಿ ಬೆದರಿಕೆ ಸಂದೇಶವನ್ನು ಕಳುಹಿಸಿದ್ದು, ಕೆಲ ಕಾಲ ಆತಂಕಕ್ಕೆ ಎಡೆಮಾಡಿ ಕೊಟ್ಟಿತ್ತು. ಕಳೆದ ಫೆ.16 ರಂದು ಕೂಡ ಬಾಂಬ್ ಬೆದರಿಕೆಯ ಇ-ಮೇಲ್ ಬಂದ ನಂತರ ವಕೀಲರು ಹಾಗೂ ಕಕ್ಷಿದಾರರು ಕಲಾಪದಿಂದ ಹೊರಗುಳಿ ದಿದ್ದರು. ಗುರುವಾರ ಮತ್ತೆ ಅಂತಹದ್ದೇ ಘಟನೆ ಮರುಕಳಿಸಿದೆ. ‌

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಶ್ವಾನದಳ, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನ್ಯಾಯಾಲಯ ಸಂಕೀರ್ಣದ ಪ್ರತಿಯೊಂದು ಕಟ್ಟಡ, ಕೊಠಡಿಗಳು ಸೇರಿದಂತೆ ಇಡೀ ಆವರಣವನ್ನು ತಪಾಸಣೆ ನಡೆಸಿದರೂ ಯಾವುದೇ ಬಾಂಬ್ ಅಥವಾ ಸ್ಪೋಟಕಗಳು ಪತ್ತೆಯಾಗಲಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು. ಬಾಂಬ್ ಬೆದರಿಕೆ ನಡುವೆಯೂ ಕೋರ್ಟ್ ಕಲಾಪಗಳನ್ನು ನ್ಯಾಯಾಧೀಶರು ಹಾಗೂ ವಕೀಲರು ಮುಂದುವರಿಸಿದರು. ಮೆಟಲ್ ಡಿಟೆಕ್ಟರ್ ಅಳವಡಿಕೆಗೆ ಮನವಿ ಮಂಡ್ಯ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಡಿಟೆಕ್ಟರ್ ಅಳವಡಿಸಬೇಕು, ಬಾಂಬ್ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ಪೊಲೀಸ್ ಹೊರ ಠಾಣೆಯನ್ನು ತುರ್ತಾಗಿ ತೆರೆಯಬೇಕು ಎಂದು ಜಿಲ್ಲಾ ವಕೀಲರ ಸಂಘ ಜಿಲ್ಲಾ ಪೊಲೀಸ್ ಅಧೀಕ್ಷಕರಲ್ಲಿ ಮನವಿ ಮಾಡಿದೆ.

ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಸುಮಾರು 16 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ದಿನಂಪ್ರತಿ ಸಾವಿರಾರು ಕಕ್ತಿದಾರರು. ನೂರಾರು ವಕೀಲರು ಕರ್ತವ್ಯ ನಿಮಿತ್ತ ನ್ಯಾಯಾಲಯಕ್ಕೆ ಆಗಮಿಸುತ್ತಾರೆ. ಮಂಡ್ಯ ನ್ಯಾಯಾಲಯದಲ್ಲಿ ಐದು ನ್ಯಾಯಾಲಯಗಳೂಸೇರಿದಂತೆ ಹಲವು ಸ್ವರೂಪದ ನ್ಯಾಯಾಲಯಗಳಿದ್ದು, ಹಲವು ಕ್ರಿಮಿನಲ್ ಹಿನ್ನೆಲೆವುಳ್ಳ ಪ್ರಕರಣಗಳು ಪ್ರತಿನಿತ್ಯ ವಿಚಾರಣಾ ಹಂತದಲ್ಲಿ ಇರುತ್ತವೆ. ಕಳೆದ ಫೆ.16 ಮತ್ತು ಮಾ.12ರಂದು ಹುಸಿ ಬಾಂಬ್ ಕರೆಗಳು ಬಂದಿದ್ದು, ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರು ಆತಂಕಕ್ಕೊಳಗಾಗಿ ಕೆಲ ಕಾಲ ಉದ್ವಿಗ್ನತೆ ಕಂಡುಬಂದಿದೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಲಂಕಷವಾಗಿ ತಪಾಸಣೆ ನಡೆಸಿ ಯಾವುದೇ ಸ್ಫೋಟಕ ವಸ್ತುಗಳು ದೊರೆಯದ ಬಗ್ಗೆ ಖಚಿತಪಡಿಸಿದ್ದಾರೆ.

ಆದಾಗ್ಯೂ ಪದೇಪದೇ ಜಿಲ್ಲಾ 8 ಬಾಂಬ್ ಬೆದರಿಕೆ ಕರೆಗಳನ್ನು ನಿಭಾಯಿಸಲು ಮತ್ತು ನ್ಯಾಯಾಲಯದ ಆವರಣದಲ್ಲಿ ಆತಂಕ ನಿವಾರಿಸಲು ತಕ್ಷಣ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಅಗತ್ಯವಿರುವ ಕಡೆ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಬೇಕು, ತುರ್ತಾಗಿ ಪೊಲೀಸ್ ಹೊರಠಾಣೆಯನ್ನು ತೆರೆದು ಪೊಲೀಸರ ಕಣ್ಣಾವಲನ್ನು ಹೆಚ್ಚಿಸಬೇಕು. # ಟಿ.ಎಸ್.ಸತ್ಯಾನಂದ, ಅಧ್ಯಕ್ಷ, ಜಿಲ್ಲಾ ವಕೀಲರ ಸಂಘ. ಕೃತ್ಯಗಳು ಇಂತಹ ಜರುಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸಮಾಜಘಾತುಕರನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಇಂದಿನಿಂದ ಆರ್‌ಟಿಇ ಅರ್ಜಿ ಸಲ್ಲಿಕೆ ಟ್ರಯಲ್

ಕಲ್ಲಂಗಡಿ ಹಣ್ಣು ತಿಂದು ನಾಲ್ವರು ಮೃತ

ಇರಾನಿಯನ್ನರು ಬಲವಂತಕ್ಕೆ ಮಣಿಯುವುದಿಲ್ಲ

Leave a Comment