NEWS

ಫ್ರೀ ಬಸ್‌ ಕೊಟ್ರೆ ಕೇರಳ ಸಾರಿಗೆ ಪತನ ಗ್ಯಾರಂಟಿ: ಗಣೇಶ್‌, ಕೇರಳ ಸಚಿವ ಟೀಕೆ

ಪಾಲನೆ ನ್ಯೂಸ್

ತಿರುವನಂತಪುರಂ: ‘ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಯಿಂದ ಕೆಎಸ್‌ಆರ್‌ಟಿಸಿ ತೀವ್ರ ನಷ್ಟ ಮತ್ತು ಬಿಕ್ಕಟ್ಟಿ ನಲ್ಲಿದೆ. ರಾಹುಲ್ ಗಾಂಧಿ ಕೇರಳ ಚುನಾವಣೆಯಲ್ಲಿ ಘೋಷಿಸಿದ ಗ್ಯಾರಂಟಿ ಯನ್ನು ಕೇವಲ 2 ತಿಂಗಳು ಜಾರಿಗೊಳಿಸಿದರೂ, ರಾಜ್ಯ ಸಾರಿಗೆ ಸಂಸ್ಥೆ ಕುಸಿಯುತ್ತದೆ. ನೌಕರರಿಗೆ ಸಂಬಳ ನೀಡ ಲೂ ಏನೂ ಉಳಿದಿರುವುದಿಲ್ಲ’ ಎಂದು ಕೇರಳ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಭಾನುವಾರ ಟೀಕಿಸಿದ್ದಾರೆ.

ಕರ್ನಾಟಕದಂತೆ ಕೇರಳದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮಹಿಳೆ ಯರಿಗೆ ಉಚಿತ ಬಸ್ ಸಂಚಾರ, ಓದುವ ಹೆಣ್ಣುಮಕ್ಕಳಿಗೆ ಮಾಸಿಕ ₹1,000 ಸಹಾ ಯಧನ ಸೇರಿ ಹಲವು ಗ್ಯಾರಂಟಿ ಯೋಜ ನೆಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಇದನ್ನು ಟೀಕಿಸಿದ ಸಚಿವ ಗಣೇಶ್ ಕುಮಾ‌ರ್, ‘ಕೆಎಸ್ ಆರ್‌ಟಿಸಿ ಬಗ್ಗೆ ನನಗೆ ಗೊತ್ತಿ ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲ.

ರಾಹುಲ್ ಗಾಂಧಿ ಕರ್ನಾಟಕದಲ್ಲಿ ಇದೇ ರೀತಿ ಉಚಿತ ಬಸ್ ಪ್ರಯಾಣ ಯೋಜನೆ ಯನ್ನು ಘೋಷಿಸಿದರು. ಕರ್ನಾಟಕ ಎಸ್‌ಆರ್‌ಟಿಸಿ ಈಗ ತೀವ್ರ ನಷ್ಟ ಮತ್ತು ಬಿಕ್ಕಟ್ಟಿನಲ್ಲಿದೆ ಎಂಬ ವರದಿಯನ್ನು ನೋಡಿದ್ದೇನೆ. ಅವರು ಘೋಷಿಸಿದ ಭರವಸೆಗಳು 2 ತಿಂಗಳಾದರೂ ಜಾರಿಗೆ ಬಂದರೆ, ಕೆಎಸ್‌ಆರ್‌ಟಿಸಿ ಕುಸಿದು ಬೀಳುತ್ತದೆಮತ್ತು ನೌಕರರಿಗೆಪಾವತಿಸಲು ಏನೂ ಉಳಿಯುವುದಿಲ್ಲ’ ಎಂದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ಕೋಲಾರದಲ್ಲಿ

ಕ್ರೆಡಿಟ್ – ಐ ವರ್ಷಗೆ ನ್ಯಾಷನಲ್ ಅಚಿವರ್ಸ್ ಪ್ರಶಸ್ತಿ

ಜ.25 ರಂದು ಅಂತಾರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ -ಡಾ. ಕುಮಾರ

Leave a Comment