NEWS

ಪ್ರಸ್ತುತ ಭಾರತದಲ್ಲಿ ರಾಜಕೀಯ ಅಸ್ಪೃಶ್ಯತೆ ತೊಲಗಿಸಿ, ಮುಖ್ಯಮಂತ್ರಿ ಪ್ರಧಾನ ಮಂತ್ರಿ-ವೆಂಕಟಗಿರಿಯಯ್ಯ

ಭೀಮ ಕೊರಂಗಾವ್ ಮಹಾಯುದ್ಧ ವಿಜಯದ ವೀರ ಯೋಧರಿಗೆ ನಮನ ಸಲ್ಲಿಸುವ ಹೊಣೆ ನಮ್ಮದು – ವೆಂಕಟಗಿರಿಯಯ್ಯ

ಪಾಲನೆ ನ್ಯೂಸ್

ಮಂಡ್ಯ: ಪ್ರಸ್ತುತ ಭಾರತದಲ್ಲಿ ಅಸ್ಪೃಶ್ಯತೆ ಕಾರಣಕ್ಕಾಗಿ ಮುಖ್ಯಮಂತ್ರಿ ಪ್ರಧಾನಮಂತ್ರಿ ಸ್ಥಾನಗಳನ್ನ ಅಲಂಕರಿಸಲು ಅವಕಾಶ ನೀಡದೆ ರಾಜಕೀಯ ಅಸ್ಪೃಶ್ಯತೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿಯೇ ರಾಜಕೀಯ ಶಿಕ್ಷಣವನ್ನು ಸಮರ್ಥವಾಗಿ ಅರಿಯಬೇಕಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ವೆಂಕಟಗಿರಿಯಯ್ಯರವರು ಕರೆ ನೀಡಿದರು.

ಇವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮದ್ದೂರಿನ ನಗರ ಸಭೆಯ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯ ಮುಂಭಾಗ ಆಯೋಜಿಸಿದ್ದ ಜನವರಿ 1 ಭೀಮ ಕೊನೆಯ ಮಹಾಯುದ್ಧ ಅಸ್ಪುರುಷರ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ವಿದ್ಯೆ ಮತ್ತು ವ್ಯಕ್ತಿ ಗೌರವ ಸ್ವಾತಂತ್ರ್ಯ ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ವಿಶ್ವ ದಾಖಲೆಯ ಯುದ್ಧ ಒಂದು ನಡೆದಿದೆ ಎಂದರೆ ಅದು ಭೀಮ ಕೊರಂಗಾವ್ ಮಹಾ ಯುದ್ಧ. ಈ ಯುದ್ಧವನ್ನು ಭಾರತದ ಮೂಲ ನಿವಾಸಿಗಳಾದ ಮರಾಠವಾಡದ ಮಹರ್ ರೆಜಿಮೆಂಟ್ ಮೂಲಕ ಸಿದ್ದನಾಯಕನ ನೇತೃತ್ವದಲ್ಲಿ 500 ವೀರ ಸೇನಾನಿಗಳು ಮರಾಠವಾಡದ ಮನಸ್ಮೃತಿ ಪ್ರತಿಪಾದಕ ಎರಡನೇ ಬಾಜಿರಾಯನ 30,000 ಬಲವಳ್ಳ ಸೇನೆಯನ್ನು ಸದೆಬಡಿದ ಐತಿಹಾಸಿಕ ವಿಜಯದ ಸಂಭ್ರಮವಿದು.

ಆಯುದ ಇಡಿಯುವುದನ್ನು ವಿದ್ಯೆ ಕಲಿಯುವುದನ್ನು, ವಸ್ತ್ರ- ಆಭರಣಗಳನ್ನು ಧರಿಸುವುದನ್ನು ಆಸ್ತಿಯನ್ನು ಹೊಂದುವುದನ್ನು ನಿರಾಕರಿಸಲ್ಪಟ್ಟ ಮನುಸ್ಮೃತಿಯ ಕರಾಳ ಕಾನೂನುಗಳ ವಿರುದ್ಧ ಮಹರ್ ರೆಜಿಮೆಂಟ್ ವೀರಸೇನಾನಿಗಳ ರಕ್ತ ಸಿಕ್ತ ಹೋರಾಟದ ವಿಜಯವನ್ನು ನಾವು ನೆನಪಿಸಿಕೊಳ್ಳುತ್ತ, ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು ಸಮರ್ಪಿಸಿರುವ ಭಾರತದ ಸಂವಿಧಾನದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವ ಹಾಗೂ ಬಹುತ್ವದ ಭಾರತದ ಸಂರಕ್ಷಣೆಗಾಗಿ ಭಾರತದಲ್ಲಿನ ರಾಜಕೀಯ  ಅಸ್ಪೃಶ್ಯತೆಯನ್ನು ಕೊನೆಗಾಣಿಸುವ ಹೊಣೆ ನಮ್ಮದಾಗಿದೆ. ಈ ಮೂಲಕ ಭೀಮ ಕೊರಂಗಾವ್ ವೀರಯೋಧರಿಗೆ ನಮನ ಸಲ್ಲಿಸುವ ದೃಢ ಸಂಕಲ್ಪಿತರಾಗಬೇಕಾಗಿದೆ. ಎಂದು ವೆಂಕಟಗಿರಿಯಯ್ಯ ಕರೆ ನೀಡಿದರು.

ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಕೊಡ ಮಾಡಲ್ಪಟ್ಟ ಮತದಾನದ ಹಕ್ಕನ್ನು ಶೋಷಿತ ಸಮಾಜಗಳು ಮಾರಾಟ ಮಾಡಿಕೊಳದೆ ಸಮರ್ಥ ನಾಯಕರಿಗೆ ಮತ ನೀಡುವ ಮೂಲಕ ವಿಧಾನಸೌಧ- ಪಾರ್ಲಿಮೆಂಟ್ ಗಳನ್ನು ಸುದ್ದಿಕರಿಸುವ ಮೂಲಕ ಭಾರತದಲ್ಲಿ ಪ್ರಬುದ್ಧ ಪ್ರಭುತ್ವವನ್ನು ಸ್ಥಾಪಿಸಬೇಕಾಗಿದೆ. ಈ ಮೂಲಕ ಭಾರತದ ಸಂವಿಧಾನವನ್ನು ಸಂರಕ್ಷಣೆ ಮಾಡಿಕೊಳ್ಳುವ ಹೊಣೆಯು ನಮ್ಮದಾಗಿದೆ ಎಂದು ಭಾರತೀಯ ಮೂಲ ನಿವಾಸಿ ಬಹು ಜನರಿಗೆ ಕಿರು ಮಾತು ಹೇಳಿದರು.

ಈ ಸಮಾರಂಭದ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಪಂಚೆಜಿ ಬೋಧಿರತ್ನ ರವರು ಬುದ್ಧ ವಂದನೆ ಮಾಡಿ, ವೈದಿಕ ಸಂಸ್ಕೃತಿಯಲ್ಲಿ ಮಾನವರನ್ನು ಸದೆಬಡಿದ ದಿನವನ್ನು ದೀಪಾವಳಿ ಏಕಾದಶಿ ಮುಂತಾದ ಹಬ್ಬಗಳನ್ನಾಗಿ ಆಚರಿಸುವ ಮೂಲಕ ಶೋಷಿತ ನಾಯಕರನ್ನು ಅಪಮಾನಿಸುವ ಕೃತ್ಯಗಳ ನಡೆಯುತ್ತಿವೆ. ಇದನ್ನು ಶೋಷಿತ ಸಮುದಾಯಗಳ ಬೆಂಬಲಿಸುವ ಮೂಲಕ ತಮ್ಮ ಸಾಂಸ್ಕೃತಿಕ ದಿವಾಳಿತನ ಪ್ರದರ್ಶಿಸುತ್ತಿವೆ. ಇದು ಭಾರತದ ಶ್ರೇಷ್ಠ ಸಂಸ್ಕೃತಿಗೆ ಕಳಂಕವಾಗಿದೆ ಎಂದು ಅಭಿಪ್ರಾಯಪಟ್ಟರು. ಮೌರ್ಯ ಸಾಮ್ರಾಜ್ಯದ ಮಹಾದೊರೆ ಸಾಮ್ರಾಟ್ ಅಶೋಕ ಸರ್ವಸಮತ ಆಡಳಿತ ನಡೆಸಿ ಪ್ರತಿಯೊಬ್ಬರನ್ನು ಗೌರವಿಸಿದ ಇತಿಹಾಸವಿದೆ ಇವರು ಬುದ್ಧ ಧರ್ಮವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ದೊರೆಯಾಗಿದ್ದಾರೆ. ಇಂಥವರ ಇತಿಹಾಸಗಳು ಹೊರ ಬರುತ್ತಿಲ್ಲ ಜನರು ಹರಿಯುತ್ತಿಲ್ಲ ಇದೊಂದು ದುರಂತ ಎಂದು ವಿಷಾದ ವ್ಯಕ್ತಪಡಿಸಿದ್ದರು.

ಜಗತ್ತಿನ ಇತಿಹಾಸದಲ್ಲಿ ಭೀಮ ಕೋರೆಂಗಾವ್ ಮಹಾಯುದ್ಧ ವಿಜಯೋತ್ಸವ ಭಾರತದ ಮೂಲ ನಿವಾಸಿ ಬಹುಜನರ ಸಾಂಸ್ಕೃತಿಕ ಹಬ್ಬವಾಗಿ ಪರಿವರ್ತನೆಗೊಳ್ಳಬೇಕು. ಈ ಮೂಲಕ ಸಮುದಾಯಗಳು ರಾಜಕೀಯ ಅಧಿಕಾರದ ಕಡೆಗೆ ಸಾಗುವಂತೆ ಆಗಬೇಕೆಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಂಡ್ಯ ಜಿಲ್ಲಾಧ್ಯಕ್ಷರಾದ ಬಿ. ಆನಂದ ರವರು ಮಾತನಾಡಿ ಕಾಂಗ್ರೆಸ್ ಬಿಜೆಪಿ ರಾಜಕೀಯ ಪಕ್ಷಗಳು ಭಾರತದ ಸಂವಿಧಾನದ ಆಸೆಯಂತೆ ಸ್ವಾತಂತ್ರ್ಯ ಸಮಾನತೆ ಸಹೋದರತೆಯ ಸದಾಶಯಗಳನ್ನು ಜಾರಿ ಮಾಡುವಲ್ಲಿ ವಿಫಲವಾಗಿವೆ. ನಮ್ಮ ಶೋಷಿತ ಜನರ ಮತದಾನದ ಹಕ್ಕನ್ನು ಆಸೆ- ಆಮಿಷಗಳಿಗೆ ಕೊಂಡುಕೊಳ್ಳುವ ಪದ್ಧತಿ ಚುನಾವಣಾ ಪ್ರಕ್ರಿಯೆಯಾಗಿದೆ. ಈ ಮೂಲಕ ನಿಜ ಪ್ರಜಾಪ್ರಭುತ್ವ ವ್ಯವಸ್ಥೆ ಧಮನವಾಗುತ್ತಿದೆ. ಹಾಗಾಗಿ ಸೋಷಿತ ಸಮುದಾಯಗಳು ಮತದಾನದ ಹಕ್ಕನ್ನು ಮಾಡಿಕೊಳ್ಳದೆ ಸಂವಿಧಾನದ ಉಳಿವಿಗಾಗಿ ಸಮರ್ಥನಿಗೆ ಮತ ಚಲಾಯಿಸುವ ಪರಿಜ್ಞಾನವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮದ್ದೂರು ತಾಲೂಕು ಅಧ್ಯಕ್ಷರಾದ ಮುತ್ತುರಾಜು ನಗರ ಕೆರೆರವರು ಪ್ರಸ್ತಾವಿಕ ನುಡಿ ನುಡಿದರು. ಮೈಸೂರು ವಿಭಾಗ್ಯ ಸಂಚಾಲಕರಾದ ಅನಿಲ್ ಕುಮಾರ್ ರವರು, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಶರಾವತಿ ಅಶ್ವತ್ ರವರು, ದಲಿತ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸುಶ್ಮಿತಾ ಜೀವಸಳ್ಳಿ ರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ನಾಗರಾಜರವರು, ವೆಂಕಟೇಶ್ ಕರಿದಿರಲಿ ರವರು, ಶೆಟ್ಟಹಳ್ಳಿ ಸುರೇಶ್ ಕುಮಾರ್ ರವರು, ದೊಡ್ಡಬೊವಳ್ಳಿ ಸಿದ್ದಪ್ಪರವರು ಹಾಗೂ ಎಲ್ಲ ತಾಲೂಕಿನ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಭೀಮ ಕೋರೆಂಗಾವ್ ಮಹಾಯುದ್ಧದ ವಿಜಯೋತ್ಸವ ಸಂಭ್ರಮಾಚರಣೆಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂರಾರು ಕಾರ್ಯಕರ್ತರು ಮದ್ದೂರಿನ ಹಳೆ ಬಸ್ಟ್ಯಾಂಡಿನಲ್ಲಿ ಜಮಾಯಿಸಿ ಪೇಟೆ ಬೀದಿ ಮೂಲಕ ಬೃಹತ್ ಮೆರವಣಿಗೆ ಮಾಡಿ ನಗರಸಭೆ ಮುಂಭಾಗದ ಡಾ. ಬಿ.ಆರ್ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಮುಕ್ತಾಯ ಮಾಡಿದರು.

Related posts

ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ವಿತರಣೆ – ಪಿ ರವಿಕುಮಾರ್

ಗ್ರಾಮ ಪಂಚಾಯತ್ ಗಳ 590 ಸಿಬ್ಬಂದಿಗಳಿಗೆ ಅನುಮೋದನೆ: ಆದೇಶ ಪ್ರತಿ ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವರು

ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ Infosys Springboard ಅಡಿ ಪತ್ರಕರ್ತೆಯರಿಗಾಗಿ ತರಬೇತಿಗೆ ಅರ್ಜಿ ಆಹ್ವಾನ

Leave a Comment