NEWS

ಬೆದರಿಸಿದ ನಂತರ ಮಾತುಕತೆಗೆ ಮುಂದಾದ ಇರಾನ್: ಡೊನಾಲ್ಡ್ ಟ್ರಂಪ್

ಪಾಲನೆ ನ್ಯೂಸ್

ವಾಷಿಂಗ್ಟನ್: ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಒಡ್ಡಿದ ನಂತರ, ಇರಾನ್ ನಾಯಕತ್ವವು ಮಾತುಕತೆಗೆ ಮನವಿ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪ್ರತಿಭಟನೆಯು ಹತ್ಯಾಕಾಂಡವಾಗಿ ಮಾರ್ಪಟ್ಟಿದೆ ಎಂದು ಮಾನವ ಹಕ್ಕು ಸಂಘಟನೆಗಳು ಎಚ್ಚರಿಸಿವೆ. ಆದಾಗ್ಯೂ, ಪ್ರತಿಭಟನೆಗಳು ತೀವ್ರಗೊಂಡಿವೆ.

ಹಣದುಬ್ಬರ, ಏರುತ್ತಿರುವ ಜೀವನ ವೆಚ್ಚದ ವಿರುದ್ಧ ಆರಂಭವಾದ ಪ್ರತಿಭಟನೆಗಳು, ಹಿಂಸಾಚಾರಕ್ಕೆ ತಿರುಗಿವೆ. ಇದರ ಪರಿಣಾಮಗಳು, 1979ರ ಕ್ರಾಂತಿಯ ನಂತರ ಜಾರಿಗೊಂಡಿರುವ ‘ದೇವ ಪ್ರಭುತ್ವ’ ವ್ಯವಸ್ಥೆಗೆ ಗಂಭೀರ ಸವಾಲಾಗುವ ಮಟ್ಟಿಗೆ ವ್ಯಾಪಿಸಿವೆ.

ಪ್ರತಿಭಟನೆಯನ್ನು ಹತ್ತಿಕ್ಕಲು ಅಂತರ್ಜಾಲ ಹಾಗೂ ವಿದ್ಯುತ್ ಕಡಿತ ಸೇರಿದಂತೆ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಆಡಳಿತ ಮಾಡಿದೆ. ಆದಾಗ್ಯೂ, ಪ್ರತಿಭಟನೆಯ ಕಾವು ಏರುತ್ತಲೇ ಇದೆ. ರಾಜಧಾನಿ ಟೆಹರಾನ್ ಹಾಗೂ ಇತರ ನಗರಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಿಂಸಾಚಾರದ ವೇಳೆ, 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದರಲ್ಲಿ, 40 ಮಂದಿ ಭದ್ರತಾ ಸಿಬ್ಬಂದಿ ಎನ್ನಲಾಗಿದೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಮೇ 18ರೊಳಗೆ ಜೈಲುಗಳ ಸ್ಥಿತಿಯ ಬಗ್ಗೆ ಮಾಹಿತಿಗೆ ಸುಪ್ರೀಂ ಕೋರ್ಟ್ ಆದೇಶ

ಪ್ರತಿ ಸೋಮವಾರ ತಹಸೀಲ್ದಾರ್, ಇಓ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರ ಕುಡಿಯುವ ನೀರಿನ ಸಮನ್ವಯ ಸಮಿತಿ ಸಭೆ ನಡೆಸಲು ಜಿ.ಪಂ. ಸಿಇಓ ಸೂಚನೆ

ಯುವಜನತೆಯು ಜ್ಞಾನ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ ಮತ್ತು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ – ಎನ್.ಚಲುವರಾಯಸ್ವಾಮಿ

Leave a Comment