ಪಾಲನೆ ನ್ಯೂಸ್
ಬೆಂಗಳೂರು: ವನ್ಯಜೀವಿ ಸಂರಕ್ಷಣೆ ಮತ್ತು ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕರ್ನಾಟಕ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಫಾರಿ ವೇಳೆ ಮೊಬೈಲ್ ಫೋನ್ ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ.

ಸಫಾರಿಗೆ ಹೋಗುವ ಎಲ್ಲರೂ ತಮ್ಮ ಮೊಬೈಲ್‌ಗಳನ್ನು ಏರೋಪ್ಲೇನ್ ಮೋಡ್‌ನಲ್ಲಿ ಇಡಬೇಕು ಹಾಗೂ ಸೆಲ್ಪಿ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಈ ಕ್ರಮವು ಸರ್ವೋಚ್ಚ ನ್ಯಾಯಾಲಯ ನೀಡಿದ ಇತ್ತೀಚಿನ ನಿರ್ದೇಶನದ ನಂತರ ಕೈಗೊಳ್ಳಲಾಗಿದೆ.
ಸಫಾರಿ ಪ್ರದೇಶಗಳಲ್ಲಿ ಮೊಬೈಲ್ ಬಳಕೆ ಯಿಂದ ವನ್ಯಜೀವಿಗಳಿಗೆ ಅಡ್ಡಿಯುಂಟು ಮಾಡುವುದು ಹಾಗೂ ಪ್ರವಾಸಿಗರ ನಡುವೆ ಅನವಶ್ಯಕ ಗದ್ದಲ ಉಂಟಾಗುವುದನ್ನು ತಡೆ ಯುವುದು ಈ ನಿಯಮದ ಉದ್ದೇಶವಾಗಿದೆ.
ಮೀಸಲು ಪ್ರದೇಶಗಳ ಸಫಾರಿ ವಲಯಗಳಲ್ಲಿ ಈಗಾಗಲೇ ಈ ನಿಯಮವನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿದ್ದರೂ, ಕರ್ನಾಟಕ ಇನ್ನೂ ಅದನ್ನು ಸಂಪೂರ್ಣವಾಗಿ ಅನುಸರಿಸಿರಲಿಲ್ಲ. ಇದೀಗ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ. ಪ್ರವಾಸಿಗರು ಮತ್ತು ಇಲಾಖೆ ಸಿಬ್ಬಂದಿ ಸೇರಿದಂತೆ ಸಫಾರಿಗೆ ಹೋಗುವ ಎಲ್ಲರೂ ಮೊಬೈಲ್‌ಗಳನ್ನು ಏರೋ ಪ್ಲೇನ್ ಮೋಡ್‌ನಲ್ಲಿ ಇಡಲು ನಿರ್ದೇಶಿಸಿ ಆದೇಶಗಳನ್ನು ಹೊರಡಿಸ ಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಗಳು ತಿಳಿಸಿದ್ದಾರೆ.
✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
