NEWS

ಗ್ರೀನ್‌ಲ್ಯಾಂಡ್ ಅನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತೇವೆ: ಟ್ರಂಪ್ ಬೆದರಿಕೆ

ಪಾಲನೆ ನ್ಯೂಸ್

ವಾಷಿಂಗ್ಟನ್: ಡೆನ್ಮಾರ್ಕ್ ಅಧೀನದಲ್ಲಿರುವ ಗ್ರೀನ್‌ಲ್ಯಾಂಡ್ ಅನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.

‘ನಾವು ಗ್ರೀನ್‌ಲ್ಯಾಂಡ್‌ಗೆ ಏನೋ ಮಾಡಲು ಹೊರಟಿದ್ದೇವೆ, ಅದು ಅವರಿಗೆ ಇಷ್ಟವಿದ್ದರೂ, ಇಲ್ಲದಿದ್ದರೂ ಸರಿ’ ಎಂದು ಟ್ರಂಪ್ ನುಡಿದಿದ್ದಾರೆ.

ವೆನಿಜುವೆಲಾದ ತೈಲ ಮೀಸಲುಗಳ ಬಗ್ಗೆ ಚರ್ಚಿಸಲು ಶ್ವೇತಭವನದಲ್ಲಿ ಶುಕ್ರವಾರ ಕರೆಯಲಾಗಿದ್ದ ತೈಲ ಹಾಗೂ ಅನಿಲ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಒಂದು ಒಪ್ಪಂದ ಮಾಡಲು ಸಜ್ಜಾಗಿದ್ದೇನೆ. ಇದು ಸರಳ ವಿಧಾನ. ಆದರೆ ನೀವು ಸರಳ ಮಾರ್ಗದ ಮೂಲಕ ಮಾಡಲು ತಯಾರಿಲ್ಲದಿದ್ದರೆ, ಬಲವಂತವಾಗಿ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಆರ್ಕಿಟಿಕ್ ವಲಯದಲ್ಲಿ ಚೀನಾ ಹಾಗೂ ರಷ್ಯಾದ ಮಿಲಿಟರಿ ಚಟುವಟಿಕೆ ನಿಯಂತ್ರಣಕ್ಕೆ, ಖನಿಜ ಸಮೃದ್ಧ ದ್ವೀಪವನ್ನು ನಿಯಂತ್ರಿಸುವುದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ.‌

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

28 ರೂ. ಇಳಿಕೆ ಕಂಡ ಎಲ್‌ಪಿಜಿ ವಾಣಿಜ್ಯ ಸಿಲಿಂಡ‌ರ್

ಅತಿಥಿ ಗೃಹದಲ್ಲಿ ರಾಜೀವ್ ಗೌಡ ವಿಚಾರಣೆ

ಟಿ-20 ವಿಶ್ವಕಪ್ ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು

Leave a Comment