NEWS

ಇಂದು ಎಂಆರ್‌ಎಂ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

ಪಾಲನೆ ನ್ಯೂಸ್

ಮೈಸೂರು: ಪತ್ರಕರ್ತ, ಲೇಖಕ ಹಾಗೂ ಕವಿತಾ ಪ್ರಕಾಶನದ ಗಣೇಶ ಅಮೀನಗಡ ಅವರು ಮಂಡ್ಯದ ಎಂಆರ್‌ಎಂ ಪ್ರಕಾಶನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಎಂಆರ್‌ಎಂ ಸಾಹಿತ್ಯ ಪ್ರಶಸ್ತಿ ಪುರಸ್ಕಾರಕ್ಕೆ ಮಂಡ್ಯದ ಕವಿ ಕೆ.ಪಿ.ಮೃತ್ಯುಂಜಯ ಭಾಜನರಾಗಿದ್ದಾರೆ. ಈ ಇಬ್ಬರಿಗೂ ತಲಾ ರೂ.10 ಸಾವಿರ ನಗದು, ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಗುವುದು ಎಂದು ಲೇಖಕ ಹಾಗೂ ಪತ್ರಕರ್ತ ಚಂದ್ರಶೇಖರ ದ.ಕೋ. ಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಂಡ್ಯದ ಎಂಆರ್‌ಎಂ ಪ್ರಕಾಶನದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರ, ಪ್ರೌಢಶಾಲೆಯ ವಿಶ್ವಮಾನವ ವೇದಿಕೆಯಲ್ಲಿ ಜ.12ರಂದು ಮಧ್ಯಾಹ್ನ 2 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಇದೇ ಸಮಾರಂಭದಲ್ಲಿ ನಾದಾನಂದನಾಥ ಸ್ವಾಮೀಜಿ ರಚಿಸಿದ ಅವಧೂತ ಮಾದಪ್ಪ ‌ಹಾಗೂ ವೈದ್ಯಕೀಯ ವಿದ್ಯಾರ್ಥಿನಿ ಎಸ್.ಪಿ.ನಿಧಿ ಅವರು ಇಂಗ್ಲಿಷಿನಲ್ಲಿ ರಚಿಸಿದ ದಿ ಕಾಪಿ-ಎ ಫಾಟಲ್ ಪ್ಯಾಟರ್ನ್ ಕಾದಂಬರಿ ಬಿಡುಗಡೆಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ನಾದಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಕೃತಿಗಳನ್ನು ಬಿಡುಗಡೆ ಗೊಳಿಸಲಿದ್ದಾರೆ. ಯಾಚೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕಥೆಗಾರ ಅದೀಬ್ ಅಖರ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಿದ್ದು, ನಿಧಿ ಅವರ ಕೃತಿ ಕುರಿತು ಪ್ರಕಾಶಕ ಹಾಗೂ ಮಂಡ್ಯ ವಿವಿಯ ಕನ್ನಡ ಅಧ್ಯಾಪಕ ಉಮೇಶ್ ದಡಮಹಳ್ಳಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚನ್ನಾಜಮ್ಮ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕ ಹಾಗೂ ಕನ್ನಡ ಉಪನ್ಯಾಸಕ ಲೋಕೇಶ್ ಬೆಕ್ಕಳಲೆ, ಕವಯಿತ್ರಿ ಎಚ್.ಆರ್. ಕನ್ನಿಕಾ, ಬನ್ನೂರಿನ ಆಕಾಶ್ ಸ್ಟೀಲ್ಸ್ ಅಂಡ್ ಸಿಮೆಂಟ್ ಮಾಲೀಕರಾದ ಜಿ.ಸುರೇಶ್, ಕವಿ ಹಾಗೂ ಶಿಕ್ಷಕ ಕೊತ್ತತ್ತಿ ರಾಜು ಹಾಗೂ ನೇರಲಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ನೇರಲಕೆರೆ ಲೋಕೇಶ್ ಭಾಗವಹಿಸುವರು, ಎಂಆರ್‌ಎಂ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಕಾಶಕ ಹಾಗೂ ಕನ್ನಡ ಅಧ್ಯಾಪಕ ಉಮೇಶ್ ದಡಮಹಳ್ಳಿ, ಪತ್ರಕರ್ತ ರುದ್ರಗೌಡ ಮುರಾಳ, ಲೇಖಕಿ ನಿಧಿ ಹೆತ್ತವರಾದ ಪ್ರವೀಣಕುಮಾರ್ ಹಾಗೂ ಪೂರ್ಣಿಮಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ : ಜಿ.ಪಂ ಸಿಇಓ ಸೂಚನೆ

ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿಗೆ ಚಾಲನೆ

ರೈತರ ಸಮಸ್ಯೆ ಪರಿಹಾರಕ್ಕೆ ಹೋರಾಟ ರೂಪಿಸುವಂತೆ : ಚಂದ್ರಶೇಖರ್ ಸಲಹೆ

Leave a Comment