NEWS

28 ರೂ. ಇಳಿಕೆ ಕಂಡ ಎಲ್‌ಪಿಜಿ ವಾಣಿಜ್ಯ ಸಿಲಿಂಡ‌ರ್

ಪಾಲನೆ ನ್ಯೂಸ್

ಹೊಸದಿಲ್ಲಿ: ಇರಾನ್ -ಇಸ್ರೇಲ್- ಅಮೆರಿಕಾ ನಡುವಿನ ಯುದ್ಧದ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಗ್ಯಾಸ್ ಸಿಲಿಂಡ‌ರ್ ದರ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲೂ ಎಲ್‌ಪಿಜಿ ವಾಣಿಜ್ಯ ಸಿಲಿಂಡ‌ರ್ ಬೆಲೆ ಕಡಿಮೆಯಾಗಿದ್ದು 19 ಕೆಜಿ ಸಿಲಿಂಡ‌ರ್ ಬೆಲೆ 1,841 ರೂಪಾಯಿಗೆ ಕುಸಿದಿದೆ.

ವಾಣಿಜ್ಯ ಬಳಕೆಯ 19 ಕೆಜಿ ತೈಲ ಕಂಪೆನಿಗಳು ಎಲ್‌ಪಿಜಿ ಸಿಲಿಂಡ‌ರ್ ಬೆಲೆಯನ್ನು ಇಳಿಕೆ ಮಾಡಿದ್ದು, ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದಿಲ್ಲಿ, ಕೊಲ್ಕತ್ತಾ ಮುಂತಾದ ಪ್ರಮುಖ ನಗರಗಳಲ್ಲಿ ದರಗಳು ಕಡಿಮೆಯಾಗಿದ್ದು, ಹೊಸ ದರಗಳು ಭಾನುವಾರದಿಂದಲೇ ಜಾರಿಗೆ ಬಂದಿವೆ. ಭಾನುವಾರ ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡ‌ರ್ ಬೆಲೆಯಲ್ಲಿ 28 ರಿಂದ 31 ರೂ.ಗಳಷ್ಟು ಕಡಿಮೆಯಾಗಿದ್ದು, ಈ ಬೆಲೆ ನಗರದಿಂದ GAS ನಗರಕ್ಕೆ ವ್ಯತ್ಯಾಸದಲ್ಲಿರುತ್ತದೆ.

ಗೃಹ ಬಳಕೆ ಸಿಲಿಂಡ‌ರ್ ದರದಲ್ಲಿ ಯಾವುದೇ ಬದಲಾ ವಣೆಗಳು ಆಗಿಲ್ಲ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 19 ಕೆಜಿ ಸಿಲಿಂಡ‌ರ್ ಬೆಲೆಯಲ್ಲಿ 28 ರೂ.ಗಳಷ್ಟು ಕಡಿಮೆಯಾ ಗಿದೆ. ಫೆಬ್ರವರಿಯಲ್ಲಿ 1768.50 6. ವಾಣಿಜ್ಯ ಸಿಲಿಂಡ‌ರ್ ಬೆಲೆ ಈ ತಿಂಗಳು 1740.5 ರೂ.ಗಳಿಗೆ ಇಳಿಕೆಯಾಗಿದೆ. ಕೊಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 31 ರೂ.ಗಳಷ್ಟು ಇಳಿಕೆಯಾಗಿದೆ. ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ 28.5 ಮತ್ತು 29.5 ರೂ.ಗಳಷ್ಟು ಕುಸಿತವಾಗಿದೆ.ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಎಚ್ ಪಿಸಿಎಲ್‌ ಮತ್ತು ಬಿಪಿಸಿಎಲ್‌ನಂತಹ ಭಾರತೀಯ ತೈಲ ಮಾರುಕಟ್ಟೆ ಕಂಪೆನಿಗಳು (ಒಎಂಸಿ) ನಿರ್ಧರಿಸುತ್ತವೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸಿಎಂ ಸ್ಟಾಲಿನ್ ಸ್ಟಾಂಡ್ ಅಪ್ ಕಾಮೆಡಿಯನ್ ಎಂದು ನಟ ವಿಜಯ್ ವ್ಯಂಗ್ಯ

ಗಿಲ್ಲಿಗೆ ಸಿಎಂ ಅಭಿನಂದನೆ

ಪಾಕ್‌ಗೆ ₹46 ಸಾವಿರ ಕೋಟಿ ನೆರವು ನೀಡಿದ ಸೌದಿ, ಕತಾರ್‌

Leave a Comment