ಪಾಲನೆ ನ್ಯೂಸ್
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಜಾಗತಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಬೆಳ್ಳಿ ಬೆಲೆ 1,500 ರೂ. ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ 2.51 ಲಕ್ಷ ರೂಪಾಯಿ ತಲುಪಿದೆ. ಕಳೆದ ವಹಿವಾಟಿನ ಅವಧಿಯಲ್ಲಿ ಬೆಳ್ಳಿಯು ಪ್ರತಿ ಕೆ.ಜಿ.ಗೆ 2,49,500 ರೂಪಾಯಿಗಳಲ್ಲಿ ಅಂತ್ಯಗೊಂಡಿತ್ತು.

ಬೆಳ್ಳಿ ಬೆಲೆ ಏರಿಕೆಯಾಗಿದ್ದರೆ, ಚಿನ್ನದ ದರದಲ್ಲಿ ಅಲ್ಪ ಇಳಿಕೆಯಾಗಿದೆ. 99.9 ಪ್ರತಿಶತ ಶುದ್ಧತೆಯ ಚಿನ್ನದ ಬೆಲೆ 300 ರೂ. ಕುಸಿದು, ಪ್ರತಿ 10 ಗ್ರಾಂಗೆ 1,52,500 ರೂ. ತಲುಪಿದೆ (ಎಲ್ಲ ತೆರಿಗೆಗಳು ಸೇರಿ). ಸೋಮವಾರ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,52,800 ರೂ. ಇತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಬೆಳ್ಳಿ ಶೇ.1.08ರಷ್ಟು ಏರಿಕೆಯಾಗಿ 73.51 ಡಾಲರ್‌ಗೆ ತಲುಪಿದೆ. ಪ್ರತಿ ಔನ್ಸ್ ಚಿನ್ನ 4,549.57 ಡಾಲರ್ ಆಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
