NEWS

ಯುಎಇನಲ್ಲಿ 3 ಭಾರತೀಯರಿಗೆ ಗಾಯ

ಪಾಲನೆ ನ್ಯೂಸ್

ನವದೆಹಲಿ: ಅರಬ್ ಸಂಯುಕ್ತ ಸಂಸ್ಥಾನದ ಬಂದರಿನ ಪುಜೈರಾ‌ ಪೆಟ್ರೋಲಿಯಂ ಕೈಗಾರಿಕಾ ವಲಯದ ಮೇಲೆ ಇರಾನ್ ನಡೆಸಿದ ಡೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ ಮೂವರು ಭಾರತೀಯರು ಗಾಯಗೊಂಡಿರುವ ಪ್ರಕರಣವನ್ನು ಭಾರತ ಮಂಗಳವಾರ ಬಲವಾಗಿ ಖಂಡಿಸಿದೆ. ಘಟನೆಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಜನವಸತಿ ಪ್ರದೇಶ, ಮೂಲಭೂತ ಸೌಕರ್ಯಗಳ ಮೇಲಿನ ದಾಳಿಯನ್ನು ಸಹಿಸಲ್ಲ ಎಂದು ಎಚ್ಚರಿಸಿದ್ದಾರೆ. ಮಧ್ಯ ಪ್ರಾಚ್ಯದಲ್ಲಿನ ಕದನ ವಿರಾಮದ ನಂತರ ಅಮೆರಿಕದ ಮಿತ್ರ ದೇಶ ಯುಎಇ ಮೇಲೆ ನಡೆದ ಮೊದಲ ದಾಳಿ ಇದಾಗಿದೆ.

ಇರಾನ್ ಆಕ್ರಮಣ ಮೂರು ಭಾರತೀಯರು ಗಾಯಗೊಳ್ಳಲು ಕಾರಣವಾಗಿದೆ. ಇಂಥ ಆಕ್ರಮಣಗಳನ್ನು ಹಾಗೂ ನಾಗರಿಕ ಮೂಲಸೌಕರ್ಯ ಮತ್ತು ಮುಗ್ಧ ನಾಗರಿಕರನ್ನು ಗುರಿ ಮಾಡಿದ ದಾಳಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಸಚಿವಾಲಯದ ವಕ್ತಾರ ರಣಧೀ‌ರ್ ಜೈಸ್ವಾಲ್ ಒತ್ತಾಯಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸಲು ಮಾತುಕತೆ ಹಾಗೂ ರಾಜತಾಂತ್ರಿಕತೆಯೇ ಸರಿಯಾದ ಮಾರ್ಗವೆನ್ನುವುದನ್ನು ಭಾರತ ಈಗಲೂ ಪ್ರತಿಪಾದಿಸುತ್ತದೆ ಎಂದು ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಜೈಸ್ವಾಲ್‌ ಹೇಳಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನಟಿ ತಮನ್ನಾಈಗ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿ

ಹೈಕೋರ್ಟ್ ಪ್ರಶ್ನೆ: ಹೆಣ್ಣು ಮಗು ಎಂದರೆ ಅಷ್ಟೊಂದು ತಾತ್ಸಾರವೇ ?

ಜನವರಿ 31ರೊಳಗೆ ಎಲ್ಲಾ ಗ್ರಾ ಪಂ ಗಳಲ್ಲಿ ಸುಸಜ್ಜಿತ ಅಭಿಲೇಖಾಲಯ ನಿರ್ವಹಣೆ ಮಾಡಲು ಸೂಚನೆ: ಜಿ ಪಂ ಸಿಇಓ ನಂದಿನಿ ಕೆ ಆರ್

Leave a Comment