ಪಾಲನೆ ನ್ಯೂಸ್
ಮಂಡ್ಯ : ಎಸ್.ಎಂ.ಕೃಷ್ಣರಂತಹ ಸುಸಂಸ್ಕೃತ ಮುಖ್ಯಮಂತ್ರಿಯನ್ನು ನಾನು ಕಂಡಿಲ್ಲ. ಇವರೊಬ್ಬ ಕರ್ನಾಟಕದ ಹೆಮ್ಮೆಯ ಸುಸಂಸ್ಕೃತ ರಾಜಕಾರಣಿಯಾಗಿದ್ದರು ಎಂದು ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅಭಿಮಾನ ವ್ಯಕ್ತಪಡಿಸಿದರು. ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವನದಲ್ಲಿ ಹಮ್ಮಿ ಕೊಂಡಿದ್ದ ಮರೆಯಲಾಗದ ಎಸ್.ಎಂ. ಕೃಷ್ಣ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್.ಎಂ. ಕೃಷ್ಣ ಸಾಹಿತ್ಯ-ಸಾಂಸ್ಕೃತಿಕ ನೆಲೆಯಲ್ಲಿ ಕುರಿತು ಅವರು ಮಾತನಾಡಿದರು.
ಅಧಿಕಾರ ಇದ್ದಾಗ ಸಾಂಸ್ಕೃತಿಕ ಬೆಳವಣಿಗೆ ಸಾಕಷ್ಟು ಪ್ರೋತ್ಸಾಹ ನೀಡಿ ಕಲಾವಿದರ ಬಗ್ಗೆ ಅಪಾರ ಗೌರವ ಇಟ್ಟು ಕೊಂಡಿದ್ದರು. ಬೆಂಗಳೂರು ಐಟಿ-ಬಿಟಿ, ಸಿಲಿಕಾನ್ ಸಿಟಿ ಎನಿಸಿಕೊಳ್ಳಲು ಎಸ್.ಎಂ. ಕೃಷ್ಣ ಅವರ ಕೊಡುಗೆ ಕಾರಣ. ವಿಶ್ವದ ಬ್ರಾಂಡೆಡ್ ಕಂಪನಿಗಳನ್ನು ಬೆಂಗಳೂರಿಗೆ ತಂದರು. ಅಂದಿನ ಕಾಲದಲ್ಲಿ ಇದ್ದ ೧,೨೮೦ ಐಟಿಬಿಟಿ ಕಂಪನಿಗಳಲ್ಲಿ ೬೮೦ ಕಂಪನಿಗಳು ಬರಲು ಕೃಷ್ಣರವರು ಕಾರಣರಾಗಿದ್ದರು.ಇದರ ಜೊತೆಗೆ ಬೆಂಗಳೂರನ್ನು ಸಾಂಸ್ಕೃತಿಕ ಮಹಾನಗರಿಯಾಗಿ ಬೆಳೆಸಬೇಕೆಂಬ ಮಹದಾಸೆ ಇತ್ತು. ಆದರೆ ಇಂದು ಬೆಂಗಳೂರು ಒಂದು ಕೆಟ್ಟ ನಗರ ವಾಗಿ ಬೆಳೆಯುತ್ತಿದೆ.
ಬೆಂಗಳೂರಿನ ಬ್ರಿಗೇಡ್ ರೋಡ್ ಮತ್ತು ಎಂ.ಜಿ.ರೋಡ್ ಒಂದು ದೊಡ್ಡ ಪಬ್ ಆಗಿದೆ. ನಮ್ಮದು ಎಂದು ಹೇಳಿಕೊಳ್ಳುವ ಸಂಸ್ಕೃತಿ ಮರೆ ಯಾಗುತ್ತಿದೆ. ಕುಡಿಯುವ ಕುಣಿಯುವ ನಾಗರಿಕತೆ ಬೆಳೆಯುತ್ತಿದೆ ಎಂದು ವಿಷಾದಿಸಿದರು. ಸಂಗೀತಪ್ರಿಯರಾಗಿದ್ದ ಅವರು ಹಲ ಸಂತ್ರಸ್ಥರಿಂದ ಹಣ ಲಪಟಾಯಿಸುತ್ತಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿ ವಾರು ಕಾರ್ಯಕ್ರಮಗಳಿಗೆ ಹಾಜರಾಗಿ ಸಂಗೀತ ಆಸ್ವಾದಿಸುತ್ತಿದ್ದರು. ಕಲಾ ವಿದರನ್ನು ಆಹ್ವಾನಿಸಿ ಸಂಗೀತ ಕಚೇರಿ ನಡೆಸಲು ಅವಕಾಸ ಮಾಡಿಕೊಡುತ್ತಿದ್ದರು.. ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದ ಅವಧಿಯಲ್ಲೂ ರಾಜ್ಯವನದಲ್ಲಿ ಕರ್ನಾಟಕ ಹಿಂದೂಸ್ತಾನಿ ಸಂಗೀತವನ್ನು ಪರಿಚಯಿಸಿದರು.ಅವರಲ್ಲಿ ಪುಸ್ತಕ ಪ್ರೀತಿ ಅಗಾಧವಾಗಿತ್ತು.
ರಸ್ಕಿನ್ ಚರ್ಚಿಲ್ ರವರ ಪುಸ್ತಕ ಪೂರ್ಣ ಮಾಡುವವರೆಗೆ ಕೆಳಗಿಡುತ್ತಿರಲಿಲ್ಲ.ಅವರಲ್ಲಿ ಸಾಕಷ್ಟು ಪುಸ್ತಕಗಳ ಸಂಗ್ರಹ ಇತ್ತು ಎಂದರು. ಅಬಕಾರಿಯಿಂದ ರಾಜ್ಯಕ್ಕೆ ಸಾಕಷ್ಟು ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರಿಗೂ ನಮ್ಮ ತಂದೆಗೂ ತುಂಬಾ ಆತ್ಮೀಯತೆ ಇತ್ತು. ಅದೇ ರೀತಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಸಂದರ್ಭದಿಂದ ಹಿಡಿದು ಇಲ್ಲಿಯವರೆಗೆ ಅದೇ ಆತ್ಮೀಯತೆ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದರು. ಯಾರ ವೈರತ್ವವನ್ನು ಕಟ್ಟಿಕೊಳ್ಳದೆ ದೊಡ್ಡ ಮಟ್ಟದ ಹೃದಯ ವೈಶಾಲ್ಯವನ್ನು ತುಂಬಿಕೊಂಡು ರಾಜಕಾರಣ ಮಾಡಿದವರು. ಎಲ್ಲೇ ಹೋದರೂ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಇಂತಹ ದೊಡ್ಡ ಮಟ್ಟದ ನಾಯಕನನ್ನು ಕಳೆದು ಕೊಂಡಿದ್ದರೂ ಅವರ ವಿಚಾರಧಾರೆಗಳು ಸದಾ ನಮ್ಮ ಜೊತೆ ಇರುತ್ತದೆ.
ಇಂದಿನ ಯುವ ರಾಜಕಾರಣಿಗಳು ಅವರ ದಾರಿಯಲ್ಲಿ ಸಾಗಬೇಕಾದ ಅಗತ್ಯತೆ ಇದೆ.-ಸಿ.ಎಸ್.ಪುಟ್ಟರಾಜು, ಮಾಜಿ ಸಚಿವರು ಆದಾಯ ಬರುತ್ತಿದ್ದರೂ ಮದ್ಯಪಾನ ನಿಷೇಧ ಜಾರಿಗೆ ತರಲು ಶ್ರಮಿಸಿದರು. ಆದರೆ ಈಗಿನ ಸರ್ಕಾರಗಳಿಗೆ ಮದ್ಯಪಾನದ್ದೇ ದೊಡ್ಡ ಆದಾಯವಾಗಿದೆ ಎಂದರು. ಯಾರೇ ಏನೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದರು. ಪ್ರತಿ ಸಣ್ಣ ಸಣ್ಣ ವಿಷಯಗಳಿಗೂ ಅವರು ಪ್ರಾಮುಖ್ಯತೆ ಕೊಡುತ್ತಿದ್ದರು.ಇವರು ಅಧಿಕಾರದಲ್ಲಿದ್ದ ಸಂರ್ದಭದಲ್ಲಿ ಎಲ್ಲಾ ಅಕಾಡೆಮಿಗಳಿಗೂ ತಲಾ ೧೫ ಲಕ ್ಷ ರೂ.ಗಳನ್ನು ನೀಡಿ ಏಕರೂಪತೆಯನ್ನು ಕಾಯ್ದುಕೊಂಡಿದ್ದರು ಎಂದರಲ್ಲದೇ ಹಲವಾರು ಘಟನೆಗಳನ್ನು ಮೆಲುಕು ಹಾಕಿದರು.
ಆಡಳಿತದ ನೆಲೆಯಲ್ಲಿ ಎಸ್.ಎಂ. ಕೃಷ್ಣ ಅವರನ್ನು ವಿಶ್ಲೇಷಿಸಿದ ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಸಿಂಗಲ್ ರೋಡ್ ಆಗಿದ್ದ ಮೈಸೂರು ಬೆಂಗಳೂರು ಹೆದ್ದಾರಿ ಯಲ್ಲಿ ದಿನಕ್ಕೆ ಹತ್ತಾರು ಅಪಘಾತಗಳು ಸಂಭವಿಸುತ್ತಿತ್ತು. ಇದನ್ನು ನೋಡಿದ ಅವರು ದ್ವಿಪಥ ರಸ್ತೆಯನ್ನಾಗಿ ಪರಿವರ್ತಿ ಸಿದರು. ಅದೇ ಪ್ರೇರಣೆಯಿಂದ ಇದೀಗ ಮೇಲೂ ದ್ವೇಷ ಸಾಧಿಸುತ್ತಿರಲಿಲ್ಲ.ಅವರಲ್ಲಿ ಸಂಸ್ಕಾರ, ನಡವಳಿಕೆ ಮತ್ತು ಅಪಾರ ಜ್ಞಾನ ಇತ್ತು. ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ದಶಪಥ ರಸ್ತೆ ನಿರ್ಮಾಣವಾಗಿದೆ ಎಂದರು. ಅವರ ಆಡಳಿತಾವಧಿಯಲ್ಲಿ ಸಾಕಷ್ಟು ಒತ್ತಡ ಇದ್ದರೂ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ.

ಸಂಸ್ಕೃತಿ ನಾಗರಿಕತೆ,ಸಂಸ್ಕಾರವನ್ನು ಅವರಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ಆದರ್ಶಪ್ರಾಯ ರಾಜಕಾರಣಿ ಯಾಗಿದ್ದರು. ಪ್ರತಿಯೊಂದು ವಿಷಯ ದಲ್ಲೂ ಆಶಾವಾದಿಯಾಗಿದ್ದರು. ಎಸ್.ಎಂ.ಕೃಷ್ಣ ಎಂದರೆ ಒಂದು ವಿಶ್ವ ವಿದ್ಯಾನಿಲಯ ಇದ್ದಂತೆ. ಅವರ ವಿಚಾರಧಾರೆ ಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಅಧ್ಯಯನ ಕೇಂದ್ರದ ಅಗತ್ಯವಿದೆ. ಯಾರ ನಾಗಮಂಗಲದ ವಕೀಲ ಜೀರಹಳ್ಳಿ ರಮೇಶ್‌ಗೌಡ ಎಸ್.ಎಂ.ಕೃಷ್ಣ ಅವರನ್ನು ಸ್ಥಳೀಯ ನೆಲೆಯಲ್ಲಿ ವಿಶ್ಲೇಷಿಸಿ ಮಾತನಾಡಿದರು. ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್ ಸಂಘದ ಪದಾಧಿಕಾರಿ ಗಳಾದ ಲೋಕೇಶ್ ಚಂದಗಾಲು, ಎಚ್.ಡಿ.ಸೋಮಶೇಖರ್ ಹಾಜರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
